Ba Ma Harishs Son Ullas Gowda / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಡಚಾದ್ರಿ ಟ್ರಕ್ಕಿಂಗ್ಗೆ ಬಂದಿದ್ದ ನಿರ್ಮಾಪಕ ಬಾ.ಮಾ ಹರೀಶ್ರ ಪುತ್ರ ಉಲ್ಲಾಸ್ ಗೌಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 29 ವರ್ಷದ ಉಲ್ಲಾಸ್ ಗೌಡರಿಗೆ ಇತ್ತೀಚೆಗೆಷ್ಟೆ ನಿಶ್ಚಿತಾರ್ಥವಾಗಿತ್ತು, ಚಾರಣಕ್ಕೆ ಅಂತಾ ಕೊಡಚಾದ್ರಿಗೆ ಬಂದಿದ್ದು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಜೊತೆಯಲ್ಲಿದ್ದವರು, ಉಲ್ಲಾಸ್ರನ್ನು ನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೊಸನಗರ ಆಸ್ಪತ್ರೆಗೆ ಶಿಫ್ಟ್ ಮಾಡುವಷ್ಟರಲ್ಲಿ ಉಲ್ಲಾಸ್ ಸಾವನ್ನಪ್ಪಿದ್ದಾರೆ. ಸದ್ಯ ಅವರ ಮೃತದೇಹ ಹೊಸನಗರ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಕುಟುಂಬಸ್ಥರ ಆಗಮನದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಉಲ್ಲಾಸ್ ಗೌಡ ಹಾಗೂ ಅವರ ಸ್ನೇಹಿತರು ಒಟ್ಟು 13 ಮಂದಿ ಬೆಂಗಳೂರಿನಿಂದ ಟಿಟಿಯಲ್ಲಿ ಕೊಡಚಾದ್ರಿಗೆ ಬಂದಿದ್ದರು, ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದವರೆಗೆ ಟ್ರೆಕ್ಕಿಂಗ್ ಹೊರಟಿದ್ದರು. ಮೇಲಿನವರೆ ಟ್ರಕ್ ಮಾಡಿದ ಅವರು ವಾಪಸ್ ಇಳಿಯುವಾಗ ದೇವಸ್ಥಾನದ ಬಳಿ ಉಲ್ಲಾಸ್ ಅವರಿಗೆ ಎದೆನೋವು ಕಾಣಿಸಿದೆ. ಅಲ್ಲಿ ಕುಸಿದು ಬಿದ್ದ ಅವರನ್ನು ಬೆಟ್ಟದಿಂದ ಕೆಳಕ್ಕೆ ತಂದು ನಗರ ಆಸ್ಪತತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಂದ ಹೊಸನಗರ ತಾಲೂಕು ಆಸ್ಪತ್ರೆಗೆ ಕರೆತರುವಾಗ ಉಲ್ಲಾಸ್ ಸಾವನ್ನಪ್ಪಿದ್ಧಾರೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
