ಇವತ್ತು ಸುಮಾರು ಕಡೆಗಳಲ್ಲಿಗೆ ಕರೆಂಟ್ ಇರಲ್ಲ! ಶಿವಮೊಗ್ಗದ ಇನ್ನಷ್ಟು ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
Power Cutಸಾಂದರ್ಭಿಕ ಚಿತ್ರ
Power Cutಸಾಂದರ್ಭಿಕ ಚಿತ್ರ

Bhadravati / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೆಸ್ಕಾಂ ಮಾಹಿತಿಯಂತೆ ಇವತ್ತು ಭದ್ರಾವತಿ ಗ್ರಾಮಾಂತರ ಉಪ ವಿಭಾಗದಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಬಾರಂ ದೂರು, ಹಳ್ಳಿಕೆರೆ, ಕಾರೇಹಳ್ಳಿ, ಮಾವಿನ ಕೆರೆ, ಕೆಂಚೇನಹಳ್ಳಿ, ದೊಡ್ಡರಿ, ಗಂಗೂರು, ದೇವರನರಸೀಪುರ, ಮಸರಹಳ್ಳಿ, ಅಂತರಗಂಗೆ, ಕಾಚಗೊಂಡನಹಳ್ಳಿ, ಬೊಮ್ಮೇನಹಳ್ಳಿ, ಬಸವನ ಗುಡಿ, ಕೆ.ಎಚ್.ನಗರ, ರತ್ನಾಪುರ, ಉಕ್ಕುಂದ, ಶಿವಪುರ, ಶ್ರೀನಿವಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

ಶಿವಮೊಗ್ಗ ನಗರದ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಶ್ರಾವಣಮಾಸ ಮತ್ತು ಸಂಸ್ಕೃತೋತ್ಸವ ಪ್ರಯುಕ್ತ ಚುಕ್ಕೆ ರಂಗೋಲಿ ಸ್ಪರ್ಧೆಯನ್ನು ಅ.12ರಂದು ಸಂಜೆ 5ಗಂಟೆಗೆ ಬಿ.ಬಿ.ರಸ್ತೆಯಲ್ಲಿರುವ ಸಂಸ್ಕೃತ ಭವನದಲ್ಲಿ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸ ಬಹುದು. ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಂಸ್ಕೃತೋತ್ಸವ ಅಂಗವಾಗಿ ಶಂಖನಾದ ಸ್ಪರ್ಧೆ

ಶಿವಮೊಗ್ಗ: ನಗರದ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಾಗೂ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರೀ ದೇವಸ್ಥಾನದ ವತಿಯಿಂದ ಶ್ರಾವಣಮಾಸ ಮತ್ತು ಸಂಸ್ಕೃತೋತ್ಸವ ಪ್ರಯುಕ್ತ ಶಂಖನಾದ ಸ್ಪರ್ಧೆಯನ್ನು ಆ.11ರಂದು ಸಂಜೆ 7.30ಗಂಟೆಗೆ ಕೋಟೆ ಪೊಲೀಸ್ ಠಾಣೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. 15 ವರ್ಷ ಮೇಲ್ಪಟ್ಟವರು ಜಾತಿಮತ ಬೇಧವಿಲ್ಲದೆ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಥಳದಲ್ಲೇ ಹೆಸರು ನೋಂದಾಯಿನ ಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor