ಭದ್ರಾವತಿಯಿಂದ ಗೊಂದಿವರೆಗೆ ಈ ಕೆಲಸ ಮಾಡಬೇಡಿ ಎಂದು ಮೆಸ್ಕಾಂ ಎಚ್ಚರಿಕೆ! ಏನಿದು? ಕಾರಣ?

ಹಂಚಿಕೊಳ್ಳಿ
WhatsApp Facebook X Telegram
Power cut shivamogga Power cut Power shutdown power cut tomorrow
Power cut shivamogga Power shutdown power cut tomorrow

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿಯಿಂದ ಗೊಂದಿಯ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್‌ ನವರೆಗೂ ವಿದ್ಯುತ್ ಮಾರ್ಗದ ಸಮೀಪದಲ್ಲಿ ಯಾವುದೇ ಅನಗತ್ಯ ಕೆಲಸ ನಿರ್ವಹಿಸಿದಂತೆ ಮೆಸ್ಕಾಂ ಎಚ್ಚರಿಕೆ ನೀಡಿದೆ.

ಈ ಮಾರ್ಗದಲ್ಲಿರುವ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್‌ಗೆ ವಿದ್ಯುತ್​ ಸಂಪರ್ಕ ಕಲ್ಪಿಸುವ 12 ಕಿ.ಮೀ. ಉದ್ದದ 33 ಕೆ.ವಿ. ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದ್ದು, ಮಾರ್ಗ ಹಾದುಹೋಗುವ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮೆಸ್ಕಾಂ ಸೂಚಿಸಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಹಾಗೂ ಮೆಸ್ಕಾಂ ವತಿಯಿಂದ ಭದ್ರಾವತಿಯ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಗೊಂದಿಯ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್‌ಗೆ ಸಂಪರ್ಕ ಕಲ್ಪಿಸುವ ಸಿಂಗಲ್ ಸರ್ಕ್ಯೂಟ್ ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಈ ಕುರಿತಾಗಿ ಮೆಸ್ಕಾಂ ಶಿವಮೊಗ್ಗ ವಿಭಾಗ ವಾರ್ತಾ ಇಲಾಖೆ ಮೂಲಕ ಪ್ರಕಟಣೆಯನ್ನ ನೀಡಿದೆ.

ಮೆಸ್ಕಾಂ ಎಚ್ಚರಿಕೆ ಪ್ರಮುಖ ಅಂಶಗಳು

  • ಪ್ರಕಟಣೆಯ ವಿವರನ್ನ ಗಮನಿಸುವುದಾದರೆ, 33 ಕೆ.ವಿ. ವಿದ್ಯುತ್ ಮಾರ್ಗ ಗೊಂದಿ, ಅರಳಿಕೊಪ್ಪ, ತಿಮ್ಲಾಪುರ ಹಾಗೂ ಹಿರಿಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮೂಲಕ ಹಾದುಹೋಗಿದೆ. ಈ ಪ್ರದೇಶಗಳ ನಿವಾಸಿಗಳು ವಿದ್ಯುತ್ ಮಾರ್ಗದ ಸಮೀಪ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನ್ ಮಾಡಲಾಗಿದೆ.
  • ವಿದ್ಯುತ್ ಮಾರ್ಗದ ಗೋಪುರಗಳನ್ನು ಯಾರೂ ಹತ್ತಬಾರದು. ವಿದ್ಯುತ್ ಪ್ರವಹಿಸುವ ತಂತಿಗಳತ್ತ ಲೋಹದ ತಂತಿ, ಹಸಿರು ಬಳ್ಳಿ, ಮರದ ಕೊಂಬೆ ಸೇರಿದಂತೆ ಯಾವುದೇ ವಸ್ತುಗಳನ್ನು ಎಸೆಯಬಾರದು.
  • ಈ ಸೂಚನೆಗಳನ್ನು ಉಲ್ಲಂಘಿಸಿ ಯಾರಾದರೂ ವಿದ್ಯುತ್ ಮಾರ್ಗದ ಸಮೀಪ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವಘಡ ಸಂಭವಿಸಿದರೆ, ಅದಕ್ಕೆ ಕೆಪಿಟಿಸಿಎಲ್ ಅಥವಾ ಮೆಸ್ಕಾಂ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor