ಶಿವಮೊಗ್ಗದ ಬೊಮ್ಮನಕಟ್ಟೆಯ ಸಾನ್ವಿ ಲೇಔಟ್ ಸಮೀಪದಿಂದ ಬಂತು ಪೊಲೀಸರಿಗೆ ಇನ್ಫಾರ್ಮೇಶನ್​! ವಿನೋಬನಗರ ಠಾಣೆಯಲ್ಲಿ ದಾಖಲಾಯ್ತು ಕೇಸ್

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
dasrara add shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಬೊಮ್ಮನಕಟ್ಟೆ ಸಾನ್ವಿ ಲೇಔಟ್ ಸಮೀಪದಿಂದ ಬಂದ ಖಚಿತ ಮಾಹಿತಿ ಪಡೆದ ವಿನೋಬನಗರ ಠಾಣೆಯ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 78(3)ರ ಅಡಿಯಲ್ಲಿ ಕೇಸ್​ ದಾಖಲಿಸಿದ್ದಾರೆ.

shivamogga dasara add
dasrara add shivamogga
dasrara add shivamogga

ನವೆಂಬರ್ 5ರಂದು ಸಂಜೆ ನಡೆದ ಘಟನೆ ಇದಾಗಿದೆ. ಅಂದು ಸಾಯಂಕಾಲ ಸುಮಾರು 5 ಗಂಟೆಯ ವೇಳೆಗೆ ವಿನೋಬನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಯೋಗೇಶ್ ವಿ.ಎಸ್. ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದರು. ಪೊಲೀಸ್ ಚೌಕಿ, ವಿನೋಬನಗರ 100 ಅಡಿ ರಸ್ತೆ, ಮೇದಾರ್ ಕೇರಿ, ನಾಗೇಂದ್ರ ಕಾಲೋನಿ ಹಾಗೂ ಬೊಮ್ಮನಕಟ್ಟೆ ಮುಖ್ಯರಸ್ತೆ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಬೊಮ್ಮನಕಟ್ಟೆಯ ಸಾನ್ವಿ ಲೇಔಟ್ ಬಳಿ ವ್ಯಕ್ತಿಯೊಬ್ಬ ಓಸಿ ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ಈ ಮಾಹಿತಿಯನ್ನು ಖಚಿತಪಡಿಸಿಕೊಂಡ ಹೆಡ್ ಕಾನ್‌ಸ್ಟೆಬಲ್ ಯೋಗೇಶ್ ಅವರು ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶದಿಂದ ಸಂಜೆ 5.30ರ ವೇಳೆಗೆ ಠಾಣೆಗೆ ವರದಿ ಸಲ್ಲಿಸಿದ್ದರು. ವರದಿ ಸ್ವೀಕರಿಸಿದ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು, ನ್ಯಾಯಾಲಯದ ಅನುಮತಿ ಪಡೆದು ಇದೀಗ ಕೇಸ್ ಮಾಡಿದ್ದಾರೆ.

shivamogga dasara add
shivamogga dasara add
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor