ಶಿವಮೊಗ್ಗಕ್ಕೆ ನೂತನ ಡಿಸಿ ಪ್ರಕಾಶ್ ಜಿ.ಟಿ. ನಿಟಳಿ ಕೆಎಎಸ್‌ನಿಂದ ಐಎಎಸ್‌ ಆಗಿದ್ದು ಹೇಗೆ? ಏನಿವರ ವಿಶೇಷ ಗೊತ್ತಾ!

ಹಂಚಿಕೊಳ್ಳಿ
WhatsApp Facebook X Telegram
who-is-prakash-gt-nittali-new-shivamogga-dc-ias-career-and-profile
who-is-prakash-gt-nittali-new-shivamogga-dc-ias-career-and-profile
dasrara add shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾಡಳಿತದ ಮುಖ್ಯಸ್ಥರಾಗಿ ಹಿರಿಯ ಅಧಿಕಾರಿ ಪ್ರಕಾಶ್ ಜಿ.ಟಿ. ನಿಟಳಿ ನೇಮಕಗೊಂಡಿದ್ದಾರೆ. ಇದುವರೆಗೂ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರಾಗಿದ್ದ ಪ್ರಕಾಶ್ ಜಿ.ಟಿ. ನಿಟಳಿ ಅವರನ್ನು ನಿಯೋಜಿಸಲಾಗಿದೆ.

shivamogga dasara add
dasrara add shivamogga
dasrara add shivamogga

ವಿಶೇಷ ಅಂದರೆ, 2018 ರ ಬ್ಯಾಚ್​ ಐಎಎಸ್​ ಅಧಿಕಾರಿ ಎಂದಾಗ, ಶಿವಮೊಗ್ಗಕ್ಕೆ ಹೊಸ ಉತ್ಸಾಹಿ ಯುವಕರೊಬ್ಬರು ಅಧಿಕಾರಿಯಾಗಿ ಬರುತ್ತಿದ್ದಾರೆ ಎಂದೆನಿಸಿತ್ತು. ಆದರೆ ಪ್ರಕಾಶ್ ಜಿ.ಟಿ ಹಿರಿಯ ಅಧಿಕಾರಿ. 2018 ರ ಬ್ಯಾಚ್ ಹಾಗೂ ಹಿರಿಯ ಅಧಿಕಾರಿ ಎಂಬುದರ ನಡುವೆ ತಾಳೆ ಮಾಡಿ ನೋಡಿದಾಗ ಪ್ರಕಾಶ್ ರವರ ಬಗ್ಗೆ ಇಂಟರ್​ಸ್ಟಿಂಗ್ ವಿಚಾರಗಳು ಗೊತ್ತಾಗಿದೆ.

ನೂತನ ಡಿಸಿ ಪ್ರಕಾಶ್ ಜಿ.ಟಿ. ನಿಟಳಿ ಬಗ್ಗೆ ಇನ್ನಷ್ಟು ಮಾಹಿತಿ

ಮೂಲತಃ ಸ್ಟೇಟ್​ ಸರ್ವಿಸ್​ನಿಂದ ಐಎಎಸ್ ಹುದ್ದೆಗೆ ಬಡ್ತಿ ಪಡೆದಿರುವವರು ಡಿಸಿ ಪ್ರಕಾಶ್ ಜಿ.ಟಿ. ನಿಟಳಿ. ಇವರು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.

shivamogga dasara add

ಪ್ರಕಾಶ್ ಜಿ.ಟಿ. ನಿಟಳಿ ಅವರು ಫೆಬ್ರವರಿ 16, 1969ರಂದು ಜನಿಸಿದ್ರು. ಪ್ರಸ್ತುತ ಅವರಿಗೆ 57 ವರ್ಷ , 2029ರಲ್ಲಿ ಸೇವೆಯಿಂದ ನಿವೃತ್ತರಾಗುವ ನಿರೀಕ್ಷೆಯಿದೆ. 2018ರ ಐಎಎಸ್ ಬ್ಯಾಚ್‌ಗೆ ಸೇರಿದ ಅವರು ಅದಕ್ಕೂ ಮೊದಲು ರಾಜ್ಯ ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸಿದ್ದರು.

ರಾಜ್ಯ ಸೇವೆಯಲ್ಲಿನ ಅವರ ಅತ್ಯುತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ, ಇವರನ್ನ 2018ರ ಬ್ಯಾಚ್‌ನ ಐಎಎಸ್ (IAS) ಅಧಿಕಾರಿಯಾಗಿ ಬಡ್ತಿ (Promotion) ನೀಡಿ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಗೊಳಿಸಲಾಯಿತು

ಪ್ರಸ್ತುತ ಪ್ರಕಾಶ್​, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಶಾಲಾ ಪರೀಕ್ಷೆಗಳ ನಿರ್ವಹಣೆ ಹಾಗೂ ಮೌಲ್ಯನಿರ್ಣಯ ವ್ಯವಸ್ಥೆಗೆ ಸಂಬಂಧಿಸಿದ ಆಡಳಿತಾತ್ಮಕ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ.

ಇದಕ್ಕೂ ಮೊದಲು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಲಭ್ಯವಿರುವ ಸೇವಾ ಮಾಹಿತಿಯ ಪ್ರಕಾರ, ಫೆಬ್ರವರಿ 2023ರಿಂದ ಜೂನ್ 2025ರವರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾ ಪಂಚಾಯತ್ ಆಡಳಿತದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಅವರಿಗೆ ದೊರೆತಿತ್ತು.

ಪ್ರಕಾಶ್ ಜಿ.ಟಿ. ನಿಟಳಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಶಾಲಾ ಮಕ್ಕಳ ಮಧ್ಯಾಹ್ನದ ಉಪಹಾರ ಯೋಜನೆಯಾದ ಅಕ್ಷರ ದಾಸೋಹದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor