ಚೆಂದ ಮಾಡಿ ಗಣಪತಿ ಚಿತ್ರ ಬಿಡಿಸ್ತಿರಾ! ಇಲ್ಲೊಂದು ಅವಕಾಶ ನಿಮಗಾಗಿ ಕಾದಿದೆ!

ಹಂಚಿಕೊಳ್ಳಿ
WhatsApp Facebook X Telegram
Inter School Ganesha Drawing Competition on Aug 22 in Shivamogga
Inter School Ganesha Drawing Competition on Aug 22 in Shivamogga

Ganesha Drawing Competition / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪ್ರತಿವರ್ಷದಂತೆ ಈ ವರ್ಷವೂ ಸಹ ಶಿವಮೊಗ್ಗ ಗೋಪಾಲದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯದಲ್ಲಿ ಗಣೇಶ ಉತ್ಸವದ ನಿಮಿತ್ತ ಅಂತರ ಶಾಲಾ ವೈವಿಧ್ಯಮಯ ಗಣಪತಿ ರಚನಾ ಸ್ಪರ್ಧೆಯನ್ನು ಆಗಸ್ಟ್ 22ರ ಶನಿವಾರ ಮಧ್ಯಾಹ್ನ 2:30 ರಿಂದ 4:30ರ ವರೆಗೆ ಏರ್ಪಡಿಸಲಾಗಿದೆ. ಈ ಬಗೆಗಿನ ವಿವರ ಹೀಗಿದೆ.

ಪ್ರತಿ ವರ್ಷದ ಗಣೇಶ ಮಹೋತ್ಸವದ ನಿಮಿತ್ತ ಇಂತಹ ಕಾರ್ಯ ಕ್ರಮವನ್ನು ಆಯೋಜಿಸಲಾಗುತ್ತಿದ್ದು ಎಲ್ ಕೆ ಜಿ ಇಂದ 10ನೇ ತರಗತಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.ಒಂದೊಂದು ತರಗತಿಯ ವಿದ್ಯಾರ್ಥಿಗಳಿಗೆ ಐದು ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲಾ ಶಿವಮೊಗ್ಗದ ಶಾಲೆಗಳ ವ್ಯವಸ್ಥಾಪಕರು ಈ ಚಿತ್ರದ ರಚನಾ ಸ್ಪರ್ಧೆಗೆ ಭಾಗವಹಿಸುವಂತೆ ಪ್ರೇರೇಪಿಸಿ ಮಕ್ಕಳನ್ನು ಕಳುಹಿಸಿಕೊಡಲು ಶ್ರೀರಾಮಕೃಷ್ಣ ವಿದ್ಯಾನಿಕೇತನ ಕೋರಿದೆ.

ಮಕ್ಕಳು ತಮಗೆ ಬೇಕಾದ ಬಣ್ಣಗಳು, ಕ್ರಯಾನ್, ಸ್ಕೆಚ್ ಪೆನ್ ಇತ್ಯಾದಿ ವಸ್ತುಗಳನ್ನು ತಾವೇ ತರ ಬೇಕಾಗಿದ್ದು, ಚಿತ್ರರಚನೆಗೆ ಅಗತ್ಯವಿರುವ ಡ್ರಾಯಿಂಗ್ ಹಾಳೆಯನ್ನು ವಿದ್ಯಾಸಂಸ್ಥೆ ವತಿಯಿಂದ ನೀಡಲಾಗುತ್ತದೆ.ಸ್ಪರ್ಧೆಗೆ ಪ್ರವೇಶ ಉಚಿತವಾಗಿರುತ್ತದೆ. ಸ್ಥಳದಲ್ಲಿ ಹೆಸರು ನೊಂದಾಯಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಹಾಗೂ ಮುಖ್ಯ ಶಿಕ್ಷಕ ತೀರ್ಥೇಶ್ ಮನವಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor