ಮುಖ್ಯಮಂತ್ರಿಗಾಗಿ ಕಾಳಗ : ಮುಂದಿನ ಸಿಎಂ ಸಿದ್ದರಾಮಯ್ಯ ಅಂದಿದ್ದಕ್ಕೆ , ಅವರಲ್ಲ ಕುಮಾರಸ್ವಾಮಿ ಸಿಎಂ ಎನ್ನುತ್ತಾ ಕೊಟ್ಟರು ಪೆಟ್ಟು! ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್!

MALENADUTODAY.COM | SHIVAMOGGA  | #KANNADANEWSWEB

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಲ್ಲಿಯು ಈ ಸಂಬಂಧ ಕುತೂಹಲ ಜಾಸ್ತಿಯಾಗುತ್ತಿದೆ.ಎಷ್ಟರಮಟ್ಟಿಗೆ ಪೊಲೀಸ್ ಕೇಸ್ ಆಗುವಷ್ಟರ ಮಟ್ಟಿಗೆ ಈ ಕುತೂಹಲ ಹೆಚ್ಚುತ್ತಿದೆ. ಹೌದು ಭದ್ರಾವತಿಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮಲಿಗೇನಹಳ್ಳಿ ಬಳಿ ನಡೆದ ಘಟನೆ ಇದಾಗಿದೆ.  

READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್

ನಡೆದಿದ್ದೇನು? 

ಕಳೆದ 19 ನೇ ತಾರೀಖು ಭಾನುವಾರ ಸ್ಥಳೀಯ ದೂರುದಾರರು, ಮಲ್ಲಿಗೇನ ಹಳ್ಳಿಯಿಂದ ಮುಂದಕ್ಕೆ ಸ್ಥಳೀಯ ನಿವಾಸಿಗಳಿಬ್ಬರ ಜೊತೆ ಎಲೆಕ್ಷನ್​ ಚರ್ಚೆ ನಡೆಸಿದ್ದಾರೆ. ಈ ವೇಳೇ  2013 ನೇ ಸಾಲಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, 2023 ನೇ ಸಾಲಿನಲ್ಲಿಯೂ ಸಹ ಸಿದ್ದರಾಮಯ್ಯ (former CM Siddaramaiah,) ಮುಖ್ಯಮಂತ್ರಿ ಆಗುತ್ತಾರೆಂದು ಹೇಳಿದ್ದಾರೆ. 

Malenadu Today Shivamogga

ಇದಕ್ಕೆ ಅಲ್ಲಿದ್ದ ಇಬ್ಬರ ವಿರೋಧ ವ್ಯಕ್ತವಾಗಿದ್ದು ಇಲ್ಲ ಇಲ್ಲ ಈ ಸಲ ಕುಮಾರಸ್ವಾಮಿಯವರು ಸಿಎಂ ಆಗುತ್ತಾರೆ ಎಂದಿದ್ದಾರೆ. ಇದೇ ವಿಚಾರಕ್ಕೆ ಖ್ಯಾತೆ ತೆಗೆದಿದ್ದಾರೆ, ಅಲ್ಲದೆ ಜಗಳ ಆರಂಭವಾಗಿದೆ. ಬಳಿಕ ಕಿರಿಕ್ ಮಾಡಿದ ಇಬ್ಬರ ಜೊತೆ ಮತ್ತು  03 ಜನರು ದೂರುದಾರಿಗೆ  ಕುಮಾರಸ್ವಾಮಿ(Former CM HD Kumaraswamy) ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಾ,  ಬೈದು ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಂಪ್ಲೆಂಟ್ ಕೊಟ್ಟರೇ ಹುಷಾರ್ ಎಂದು ಜೀವ ಬೆದರಿಕೆ ಹಾಕಿದ್ಧಾರಂತೆ. ಈ ಸಂಬಂಧ ಪೆಟ್ಟು ತಿಂದ ವ್ಯಕ್ತಿ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ಕೊಟ್ಟಿದ್ಧಾರೆ. ಸದ್ಯ ಎಫ್​ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ಧಾರೆ. 

Malenadu Today Shivamogga

READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್

READ |ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್

READ |  ಅರಶಿನ ಬಣ್ಣದ ಪೌಡರ್ ಹಾಕಿ, ಕುಕ್ಕರ್​ನಲ್ಲಿಟ್ಟ ಚಿನ್ನ ಅರ್ಧಗಂಟೆಯಲ್ಲಿ ಮಾಯ! ಹೇಗಾಗಿದ್ದು ಓದಿ ನೋಡಿ! ಸಾರ್ವಜನಿಕರೇ ಜಾಗೃತೆ!

READ | Remote Desktop Application ಮೂಲಕ ನಾಲ್ಕು ಲಕ್ಷ ರೂಪಾಯಿ ಖಾಲಿ ಮಾಡಿದ್ರು! ಹೀಗೂ ನಡೆಯುತ್ತದೆ ಆನ್​ಲೈನ್​ ವಂಚನೆ! ಶಿವಮೊಗ್ಗದಲ್ಲಿ ಮೊದಲ ಕೇಸ್

Leave a Comment