MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ವಲಯದಲ್ಲಿ ಆರ್ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡುವೆ ಹೊಯ್ದಕ್ಕಿ ಬೇಯುವುದಿಲ್ಲ ಎಂಬ ಮಾತಿತ್ತು. ಈ ಮಧ್ಯೆ ಕಾಂಗ್ರೆಸ್ ಬಸ್ ಯಾತ್ರೆಗೂ ನಡೆಸಿದ್ದ ಸಂಧಾನವೂ ಸಹ ವಿಫಲವಾಗಿತ್ತು. ಇದರ ನಡುವೆ, ಬಿಜೆಪಿ ವಿರುದ್ಧದ ಆರೋಪವೇ ಇಬ್ಬರು ನಾಯಕರನ್ನ ಒಂದಗೂಡಿಸಿದೆ.
BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !
ಹೌದು, ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅದ್ಯಕ್ಷರಿದ್ದರೂ, ಬಹುಪಾಲು ಸದಸ್ಯರಿದ್ದರೂ, ಅಧಿಕಾರ ನಡೆಸಲು ಅವಕಾಶ ನೀಡಲಾಗುತ್ತಿಲ್ಲ. ಪಿಡಿಒ ಮೂಲಕ ಕಿರುಕುಳ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಈ ಸಂಬಂಧ ಕಾರ್ಯಕರ್ತರೆಲ್ಲಾ ದೂರು ಹೇಳಿಕೊಂಡ ಬೆನ್ನಲ್ಲೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್ಎಂ ಮಂಜುನಾಥ್ ಗೌಡರು ಇಬ್ಬರು ಜಂಟಿಯಾಗಿ ಹೋರಾಟಕ್ಕೆ ಅಣಿಯಾದ್ರು

ತೀರ್ಥಹಳ್ಳಿಯಿಂದ ಮೇಲಿನ ಕುರುವಳ್ಳಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ ಇಬ್ಬರು ನಾಯಕರು ಒಗ್ಗಟ್ಟಿನ ಬಲವನ್ನು ಪ್ರದರ್ಶಸಿದ್ಧಾರೆ. ಒಂದೇ ಬ್ಯಾನರ್ನಲ್ಲಿ ಇಬ್ಬರು ನಾಯಕರ ಫೋಟೋದೊಂದಿಗೆ ಹೊರಟ ಪಾದಯಾತ್ರೆಯು ಯಶಸ್ವಿಯು ಆಗಿದೆ. ಇನ್ನೂ ಕಿಮ್ಮನೆ ರತ್ನಾಕರ್ ಹಾಗೂ ಆರ್ಎಂ ಮಂಜುನಾಥ್ ಗೌಡರು ಮುಂಚೂಣಿಯಲ್ಲಿ ಹೆಜ್ಜೆ ಹಾಕಿದ್ರೆ, ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ವಿರುದ್ಧ ಹರಿಹಾಯ್ದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com