ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೈಕ್‌ ಇಟ್ಟು ವಾಪಸ್‌ ಬರುವುದರಲ್ಲಿ ಎದುರಾಗಿತ್ತು ಶಾಕ್

motorbike was stolen from the KSRTC bus stand in Bhadravathi taluk, Shivamogga district. 

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೈಕ್‌ ಇಟ್ಟು ವಾಪಸ್‌ ಬರುವುದರಲ್ಲಿ ಎದುರಾಗಿತ್ತು ಶಾಕ್
motorbike , KSRTC bus stand in Bhadravathi taluk, Shivamogga district

SHIVAMOGGA | MALENADUTODAY NEWS | Jun 19, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ ನಿಲ್ಲಿಸಿದ್ದ ಬೈಕ್‌ವೊಂದನ್ನ ಸಂಜೆಯಾಗುವಷ್ಟರಲ್ಲಿ ಕಳ್ಳರು ಕದ್ದೊಯ್ದ ಬಗ್ಗೆ ವರದಿಯಾಗಿದೆ. 

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ  ನಡೆದ ಘಟನೆ ಸಂಬಂಧ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗತಿಬೆಳಗಲು ಗ್ರಾಮದ ಯುವಕ ಎನ್. ಲೋಕೇಶ್ ಸಿಡಿ ಡಿಲಕ್ಸ್ ದ್ವಿಚಕ್ರ ವಾಹನವನ್ನು ಬೆಳಿಗ್ಗೆ 8.50 ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಬಳಿಕ ಕೆಲಸ ಮುಗಿಸಿ ಸಂಜೆ 5.30ರ ಸಮಯದಲ್ಲಿ ಬಂದು ಬೈಕ್‌ ಹುಡುಕಿದ್ದಾರೆ. ಆದರೆ ಬೈಕ್‌ ಇರಲಿಲ್ಲ ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಕಳುವಾಗಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

A motorbike was stolen from the KSRTC bus stand in Bhadravathi taluk, Shivamogga district.