ಮತ್ತೆ ಕೆರಳಿದ ಕುಮಾರ | FACEBOOK ನಲ್ಲಿ ಹೊರಬಿದ್ದ ಜೈ ರಾಜಣ್ಣ ಪೋಸ್ಟ್‌ | ಮೇಲುಗೈ ಸಾಧಿಸಿದ್ರಾ?

Kumar Bangarappa, a BJP leader and former MLA from Soraba criticized Madhu Bangarappa. He also shared screenshots of comments from his supporters, expressing his loyalty to Dr. Rajkumar and his fans. His post has gone viral, drawing mixed reactions.

ಮತ್ತೆ ಕೆರಳಿದ ಕುಮಾರ | FACEBOOK ನಲ್ಲಿ ಹೊರಬಿದ್ದ ಜೈ ರಾಜಣ್ಣ  ಪೋಸ್ಟ್‌ | ಮೇಲುಗೈ ಸಾಧಿಸಿದ್ರಾ?
Kumar Bangarappa, BJP leader , former MLA , Soraba, Madhu Bangarappa

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆʼ 

ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಸೋಲುತ್ತಿದ್ದರಂತೆ ಬಿಜೆಪಿ ಮುಖಂಡ ಸೊರಬ ಕ್ಷೇತ್ರದ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಕೆರಳಿದ್ದಾರೆ. ಸಹೋದರನ ಟೀಕೆಗಳನ್ನ ಕೇಳಿಸಿಕೊಳ್ಳುತ್ತಿದ್ದ ಅವರು ಇದೀಗ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಶ್ರಮದಲ್ಲಿ ನೇರಾನೇರಾ ತಮ್ಮ ಕುಟುಂಬಸ್ಥರ ಮೇಲೆ ವಾಗ್ದಾಳಿ ನಡೆಸ್ತಿದ್ದಾರೆ. 

ಮಧು ಬಂಗಾರಪ್ಪರವರ ಕ್ಷೇತ್ರದಲ್ಲಿಯೇ ಬಿಜೆಪಿಗೆ ಲೀಡ್‌ ತಂದುಕೊಡುವಲ್ಲಿ ಯಶಸ್ಸು ಸಾಧಿಸಿದ ಕುಮಾರ್‌ ಬಂಗಾರಪ್ಪ, ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ತಂಗಿ ಗೀತಾ ಶಿವರಾಜಕುಮಾರ್‌ಗೆ ಟಾಟಾ ಬಾಯ್‌ ಎಂದು ಹೇಳಿದ್ದರು. ಅಲ್ಲದೆ ಮಧು ಬಂಗಾರಪ್ಪರವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬೆನ್ನಲ್ಲೆ ಇದೀಗ ತಮ್ಮ ಅಭಿಮಾನಿಗಳ ಕಾಮೆಂಟ್‌ಗಳಿರುವ ಸ್ಕ್ರೀನ್‌ ಶಾಟ್‌ಗಳನ್ನು ಹಾಕಿಕೊಂಡಿರುವ ಕುಮಾರ್‌ ಬಂಗಾರಪ್ಪ, ಜೈ ರಾಜಣ್ಣ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿ ದೇವರುಗಳ ಮುಂದೆ ಯಾರು ಇಲ್ಲಾ...ಡಾ . ರಾಜಕುಮಾರ್ ಅಭಿಮಾನಿಗಳನ್ನು  ದೇವರು ಎಂದರು  , ನಾವು ರಾಜಕುಮಾರರನ್ನೇ ದೇವರುಎಂದೇವು..ಡಾ ರಾಜಕುಮಾರ್ ಹೆಸರಿಗೆ ಕಳಂಕ ತರುವವರಾರನ್ನು ಒಬ್ಬ ಅಭಿಮಾನಿಯಾಗಿ ಎಂದು ಬಿಡೋದಿಲ್ಲ ಜೈ ರಾಜಣ್ಣ ಎಂದು ಕುಮಾರ್‌ ಬಂಗಾರಪ್ಪ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ ಸಹ ವೈರಲ್‌ ಆಗುತ್ತಿದ್ದು ಬಗೆಬಗೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 