ಶಿವಮೊಗ್ಗ ಕರೆಂಟ್‌ POLITICS | BYR ಗೆಲುವಲ್ಲಿ ಮಾಜಿಗಳ ಪವರ್ ಪುನರಾಗಮನ | ಮೈತ್ರಿಗೆ ಶಕ್ತಿ ತುಂಬಿದ ಶಾರದಕ್ಕ |

Lok Sabha election results in Shivamogga have sparked much discussion

ಶಿವಮೊಗ್ಗ ಕರೆಂಟ್‌  POLITICS | BYR ಗೆಲುವಲ್ಲಿ ಮಾಜಿಗಳ ಪವರ್ ಪುನರಾಗಮನ | ಮೈತ್ರಿಗೆ ಶಕ್ತಿ ತುಂಬಿದ ಶಾರದಕ್ಕ |
Shivamogga Rural, BY Raghavendra, Ashok Naik , Sharada Poorya Naik, Kumar Bangarappa ,Soraba,  BJP,  Haratalu Halappa , Sagar, BJP , Beluru Gopalakrishna ,Kumar Bangarappa , Haratalu Halappa,

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಮತಗಳ ಎಣಿಕೆ ಇದೀಗ ಸಾಕಷ್ಟು ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ. ಈ ವ್ಯಾಪ್ತಿಯಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯು ಬಿಜೆಪಿಗೆ ಲೀಡ್‌ ಸಿಕ್ಕಿರುವುದು ಹಲವು ನಾಯಕರ ಶೈನಿಂಗ್‌ಗೆ ಕಾರಣವಾಗಿದೆ. 

ಗೆದ್ದ ಶಾರದಕ್ಕ

ಉದಾಹರಣೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವನ್ನ ಕಾಂಗ್ರೆಸ್‌ ನಿರ್ಲಕ್ಷಿಸಿತೇ ಎಂಬುದಕ್ಕೆ ಸಾಕ್ಷಿಯೆಂಬಂತೆ ಬಿವೈ ರಾಘವೇಂದ್ರರಿಗೆ ಎರಡನೇ ಅತಿಹೆಚ್ಚು ಲೀಡ್‌ ಈ ಕ್ಷೇತ್ರದಲ್ಲಿ ಸಿಕ್ಕಿದೆ. ಬೈಂದೂರು ರಾಘವೇಂದ್ರರಿಗೆ ದೊಡ್ಡ ಲೀಡ್‌ ನೀಡಿದರೆ, ಶಿವಮೊಗ್ಗ ಗ್ರಾಮಾಂತರದಲ್ಲಿ ವಿಧಾನಸಭಾ ಚುನಾವಣೆ ವೇಳೆ ಪರಸ್ಪರ ಎದುರಾಳಿಗಳಾಗಿದ್ದ ಅಶೋಕ್‌ ನಾಯ್ಕ್‌ ಹಾಗೂ ಶಾರದಾ ಪೂರ್ಯ ನಾಯ್ಕ್‌ ಮೈತ್ರಿ ಧರ್ಮ ಪಾಲಿಸಿ ಬಿಜೆಪಿಗೆ ಅತಿಹೆಚ್ಚು ಮತಗಳು ಲಭ್ಯವಾಗುವಂತೆ ನೋಡಿಕೊಂಡರು. ಅದರಲ್ಲಿಯು ಈ ಫಲಿತಾಂಶ ಬಿಜೆಪಿಯಲ್ಲಿ, ಶಾರದಕ್ಕರ ಬಗ್ಗೆ ಗೌರವ ಹೆಚ್ಚಿಸಿದೆ. 

ಶಿವಮೊಗ್ಗ ಗ್ರಾಮಾಂತರ 39,668 ಲೀಡ್‌

ಬಿವೈ ರಾಘವೇಂದ್ರ : 106243

ಗೀತಾಶಿವರಾಜ್‌ ಕುಮಾರ್‌ 66575

ಇನ್ನೂ ಸೊರಬ ಕ್ಷೇತ್ರ ಉಸ್ತುವಾರಿ ಸಚಿವರ ಕ್ಷೇತ್ರವಾಗಿತ್ತು. ಅವರ ಶಾಸಕತ್ವದ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಮುಖ ಲೀಡ್‌ ತರುವಲ್ಲಿ ಕುಮಾರ್‌ ಬಂಗಾರಪ್ಪ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಮಧು ಬಂಗಾರಪ್ಪ 98, 912 ವೋಟು ಪಡೆದಿದ್ದರು. ಅಲ್ಲದೆ 44 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಲೀಡ್‌ ಅವರ ಸಾಧನೆಯ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಕುಮಾರ್‌ ಬಂಗಾರಪ್ಪರವರ ಕೈ ಮೇಲಾಗಿದೆ. ಕೆಲ ತಿಂಗಳ ಅಜ್ಞಾತವಾಸದಿಂದ ದುತ್ತೆಂದು ಎದ್ದು ಬಂದ ಕುಮಾರ್‌ ಬಂಗಾರಪ್ಪ ಬಿಜೆಪಿಗೆ ಸೊರಬ ಕ್ಷೇತ್ರದಲ್ಲಿ 88170 ಮತ ಒದಗಿಸಿದ್ದಾರೆ. ಬರೋಬ್ಬರಿ  17,937 ಮತಗಳ ಲೀಡ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕರ್ತರು ಮುಖಂಡರುಗಳು ಈ ನಿಟ್ಟಿನಲ್ಲಿ ಒಗ್ಗಟ್ಟಿನ ಶ್ರಮ ಹಾಕಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದಾಗ್ಯು ಯಶಸ್ಸಿನ ಕ್ರೆಡಿಟ್‌ ನಾಯಕರಿಗೆ ಸಲ್ಲಿಸುವುದು ಚುನಾವಣಾ ಜಾಯಮಾನ

ಸೊರಬ ಕ್ಷೇತ್ರ : 17,937 ಲೀಡ್‌

ಬಿವೈ ರಾಘವೇಂದ್ರ : 88170

ಗೀತಾಶಿವರಾಜ್‌ ಕುಮಾರ್‌ 70233

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಹಾಗೂ ಸೊರಬ ಕ್ಷೇತ್ರಗಳನ್ನ ಹೊರತುಪಡಿಸಿದರೇ ಸಾಗರ ಕ್ಷೇತ್ರದಲ್ಲಿ ಮತ್ತೆ ಹರತಾಳು ಹಾಲಪ್ಪ ಶೈನಿಂಗ್‌ ಆಗಿದ್ದಾರೆ. ಬೇಳೂರು ಗೋಪಾಲಕೃಷ್ಣರ ಅಬ್ಬರದ ನಡುವೆ ಹರತಾಳು ಹಾಲಪ್ಪ ನಾಟಿ ಸ್ಟೈಲ್‌ನಲ್ಲಿ ಸಾಗರ-ಹೊಸನಗರದ ಜೇನುಗೂಡದಲ್ಲಿ ಭರಪೂರ ಮತಗಳ ಜೇನುತುಪ್ಪ ತೆಗೆದು ಬಿಜೆಪಿಗೆ ಒದಗಿಸಿದ್ದಾರೆ. ವರ್ಷದ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ 88,988 ಮತ ಲಭ್ಯವಾಗಿತ್ತು. ಅಂದು ಅವರು 16,022 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಲೋಕಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 95,209 ಮತಗಳು ಲಭಿಸಿವೆ. ಕಾಂಗ್ರೆಸ್‌ ಅಭ್ಯರ್ಥಿಗಿಂತಲೂ 26,519 ಹೆಚ್ಚುವರಿ ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದಾರೆ. ಇದರರ್ಥ ಹರತಾಳು ಹಾಲಪ್ಪ ಸಾಗರದಲ್ಲಿ ಮತ್ತೆ ಸ್ಟ್ರಾಂಗ್‌ ಆಗಿದ್ದಾರೆ. 

ಸಾಮಾನ್ಯವಾಗಿ ವಿಧಾನಸಭಾ ಚುನಾವಣೆ ಬಳಿಕ ಬರುವ ಲೋಕಸಭಾ ಚುನಾವಣೆಯ ರಿಸಲ್ಟ್‌ನ್ನ ಸ್ಥಳೀಯ ನಾಯಕರ ಭವಿಷ್ಯದ ಹಾದಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಹಾಲಿ ಶಾಸಕರ ರಿಪೋರ್ಟ್‌ ಕಾರ್ಡ್‌ ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ಮೇಲಿನ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ನಾಯಕರ ಮೈತ್ರಿ ಧರ್ಮ ಪ್ರದರ್ಶನಗೊಂಡರೆ, ಉಳಿದ ಎರಡರಲ್ಲಿ ಹೀರೋ ಆದವರು, ಹರತಾಳು ಹಾಲಪ್ಪ ಹಾಗೂ ಕುಮಾರ್‌ ಬಂಗಾರಪ್ಪ. 

ಸಾಗರ ಕ್ಷೇತ್ರ : 26,519 ಲೀಡ್‌

ಬಿವೈ ರಾಘವೇಂದ್ರ : 95209 

ಗೀತಾಶಿವರಾಜ್‌ ಕುಮಾರ್‌ 68690

ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್‌ ವಿಭಾಗದಲ್ಲಿ ದಯಮಾಡಿ ತಿಳಿಸಿ, ರಾಜಕಾರಣ ಮತ್ತು ಸ್ಥಳೀಯ ಅಭಿಪ್ರಾಯವನ್ನು ತಿಳಿಸಬಹುದು. ಅಸಭ್ಯ ಟೀಕೆಗಳನ್ನು ಅನುಮೋಧಿಸಲಾಗುವುದಿಲ್ಲ. 

The Lok Sabha election results in Shivamogga have sparked much discussion. Shivamogga Rural, BY Raghavendra, Ashok Naik , Sharada Poorya Naik, Kumar Bangarappa ,Soraba,  BJP,  Haratalu Halappa , Sagar, BJP , Beluru Gopalakrishna ,Kumar Bangarappa , Haratalu Halappa,