ಇವತ್ತು ಧಾರಾಕಾರ ಮಳೆಯ ಮನ್ಸೂಚನೆ | ಶಿವಮೊಗ್ಗ ಸೇರಿ ಹಲವೆಡೆ ಆರೆಂಜ್‌ ಅಲರ್ಟ್‌ ! ಏನಿದು

Orange alerts have been issued for Shivamogga, Uttara Kannada, Udupi, Dakshina Kannada, Kodagu, and Chikkamagaluru districts,

ಇವತ್ತು ಧಾರಾಕಾರ ಮಳೆಯ ಮನ್ಸೂಚನೆ | ಶಿವಮೊಗ್ಗ ಸೇರಿ ಹಲವೆಡೆ ಆರೆಂಜ್‌ ಅಲರ್ಟ್‌ ! ಏನಿದು
shivamogga Rainfall , dam Levels in Shivamogga District  Linganamakki, Bhadra, Tunga, Mani ,  Pick-up, Chakra,Savehaklu 

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಇವತ್ತು ಕೂಡ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಈ ಸಂಬಂಧ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅದರ ಪ್ರಕಾರ,  ನೋಡುವುದಾದರೆ, ರಾಜ್ಯದ ಹಲವೆಡೆ  ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಶಿವಮೊಗ್ಗ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು,  ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಹಾಸನ ಜಿಲ್ಲೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. 

ಒಟ್ಟಾರೆ ಧಾರಕಾರ ಮಳೆಯ ಜತೆಗೆ  ಪ್ರತಿ ಗಂಟೆಗೆ 45 ಕಿ.ಮೀ.ಯಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗೆ ಸಂಬಂಧಿಸಿದಂತೆ ಸಮುದ್ರದಲ್ಲಿ ಭಾರಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.  

The weather department has predicted heavy rainfall with thunderstorms in several districts of Karnataka, including Shivamogga. Orange alerts have been issued for Shivamogga, Uttara Kannada, Udupi, Dakshina Kannada, Kodagu, and Chikkamagaluru districts, while yellow alerts are in place for Belagavi, Dharwad, Haveri, and Hassan districts. Wind speeds of 45-55 km/h are expected, and fishermen have been warned of high waves in coastal areas.