ಶಿವಮೊಗ್ಗಕ್ಕೆ ಬಂದ ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ | ರೈಲ್ವೆ ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

Man's body found in coach of Tumakuru-Shivamogga train | What is there in the railway police department notification?

ಶಿವಮೊಗ್ಗಕ್ಕೆ ಬಂದ ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ | ರೈಲ್ವೆ ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ಏನಿದೆ?
Tumakuru-Shivamogga train

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ತುಮಕೂರು ಟು ಶಿವಮೊಗ್ಗ ಟ್ರೈನ್‌ 16567 ನಲ್ಲಿನ ಬೋಗಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ. ಕಳೆದ   ಜೂನ್ 25 ರಂದು ನಡೆದ ಘಟನೆ ಇದಾಗಿದೆ. ಅಂದು ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ನಂ 16567 ರೈಲುಗಾಡಿ ಬಂದು ನಿಂತಿತ್ತು.  ಆ ರೈಲಿನ ಕೋಚ್ ನಂ ಜಿಎಸ್‍ಆರ್‍ಡಿ/ಎಸ್‍ಡಬ್ಲ್ಯುಆರ್/144211 ರಲ್ಲಿ ಸುಮಾರು 65 ವರ್ಷದ ಪುರುಷನ ಶವ ಪತ್ತೆಯಾಗಿದೆ. 

ಈ ಸಂಬಂಧ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಆದರೆ ಇದುವರೆಗೂ ಮೃತರ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಪ್ರಕಟಣೆಯನ್ನ ನೀಡಲಾಗಿದೆ. 

ಪ್ರಕಟಣೆಯಲ್ಲಿ ವಿವರಿಸಿದ ಮೃತರ ಚಹರೆ ಹೀಗಿದೆ  

ಮೃತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೃಶವಾದ ಶರೀರ, ಕಪ್ಪು ಮೈಬಣ್ಣ, ಕೋಲುಮುಖ, ನೀಳ ಮೂಗು, ಸುಮಾರು ಒಂದು ಇಂಚು ಉದ್ದದ ಕಪ್ಪುಬಿಳಿ ಕೂದಲು,ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ  ಶರ್ಟ್, ತಿಳಿ ನೀಲಿ ಬಣ್ಣದ ಕಾಟನ್ ಚಡ್ಡಿ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್‍ಇನ್ಸಪೆಕ್ಟರ್ ದೂ.ಸಂ: 08182 222974 ಮತ್ತು 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆ ತಿಳಿಸಿದಾರೆ.