ಸರ್ಕಾರಿ ಶಾಲೆ ಸಮೀಪ ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು! ಚಿಕಿತ್ಸೆ ಫಲಕಾರಿಯಾಗದೇ ಸಾವು

A woman, aged approximately 60, was found unwell near a government school in Shivamogga Shivamogga police.

ಸರ್ಕಾರಿ ಶಾಲೆ ಸಮೀಪ ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು! ಚಿಕಿತ್ಸೆ ಫಲಕಾರಿಯಾಗದೇ ಸಾವು
Shivamogga police

SHIVAMOGGA | MALENADUTODAY NEWS | Jun 25, 2024  ಮಲೆನಾಡು ಟುಡೆ 

ಶಿವಮೊಗ್ಗದ ಸರ್ಕಾರಿ ಶಾಲೆಯೊಂದರ ಬಳಿ ಪತ್ತೆಯಾದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಆಕೆ ಮೃತಳಾಗಿದ್ದು, ಆಕೆಯ ಗುರುತು ಪತ್ತೆಗಾಗಿ ತುಂಗಾನಗರ ಪೊಲೀಸ್‌ ಠಾಣೆ ಪೊಲೀಸರು ಪ್ರಕಟಣೆಯನ್ನ ನೀಡಿದ್ದಾರೆ. ಅದರ ವಿವರ ಹೀಗಿದೆ. 

ಕಳೆದ  ಜೂನ್ 10 ರಂದು ಬೆಳಗ್ಗೆ 10.00 ಕ್ಕೆ ಶಿವಮೊಗ್ಗದ ಸೋಗಾನೆ  ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸುಮಾರು 60 ರ ವಯಸ್ಸಿನ ಮಹಿಳೆ ಅನಾರೋಗ್ಯದಿಂದ ನರಳುತ್ತಿದ್ದನ್ನ ಸ್ಥಳೀಯರು ಗಮನಿಸಿದ್ದಾರೆ. 

ಆ ಬಳಿಕ ಸಾರ್ವಜನಿಕರ ಸಹಾಯದಿಂದ ಆಕೆಯುನ್ನು ಅಂಬ್ಯುಲೇನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 15 ರಂದು ಮೃತ ಪಟ್ಟಿದ್ದಾರೆ. ಇದುವರೆಗೂ ಈಕೆಯ ಊರು ಹೊನ್ನಾಳಿ ಎಂದು ತಿಳಿದಬಂದಿದ್ದು ಹೆಸರು, ವಿಳಾಸ, ವಾರಸುದಾರರ ಪತ್ತೆಯಾಗಿರುವುದಿಲ್ಲ ಈ ಸಂಬಂಧ  ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಈಕೆಯ ಚಹರೆ ಸುಮಾರು 5.3 ಅಡಿ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋದಿ ಮೈಬಣ್ಣ, ಚೌಕಕಾರ ಮುಖ, ಸುಮಾರು 10 ಇಂಚು ಉದ್ದದ ಕಪ್ಪುಬಿಳಿ ಕೂದಲು, ಕೇಸರಿ ಬಣ್ಣದ ನೈಟಿ ಧರಿಸಿರುತಾಳೆ ಹಾಗೂ ಎರಡು ಕಾಲುಗಳು ಸಣಕಲಾಗಿತ್ತವೆ. ಈ ಹೆಂಗಸಿನ ವಾರಸುದಾರರು ಯಾರಾದರು ಇದ್ದಲ್ಲಿ ಶಿವಮೊಗ್ಗ ಎಸ್.ಪಿ 08182 261400, ಪಿ,ಐ ತುಂಗಾನಗರ ಪೊಲೀಸ್ ಠಾಣೆ 9480803370, ಪಿ.ಎಸ್.ಐ ತುಂಗಾ ನಗರ ಪೊಲೀಸ್ ಠಾಣೆ 9480803370 ಮತ್ತು ತುಂಗಾ ನಗರ ಪೊಲೀಸ್ ಠಾಣೆ 9141289308 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿ ತುಂಗಾನರ ಪೊಲೀಸ್ ಠಾಣೆ ಶಿವಮೊಗ್ಗ ಪ್ರಕಟಣೆ ತಿಳಿಸಿದ್ದಾರೆ.

A woman, aged approximately 60, was found unwell near a government school in Shivamogga Shivamogga police.