ಮೀನು ಹಿಡಿಯಲು ಕಾರಿನಲ್ಲಿ ಹೋದವರಿಗೆ ಶಾಕ್‌ | ಯಡೂರು ಸಮೀಪ ನಡೆದ ಘಟನೆಯಲ್ಲಿ ಓರ್ವ ಸಾವು, ಇನ್ನೊಬ್ಬ ಗಂಭೀರ

car accident near Yeduru village in Hosanagara taluk, Shivamogga district

ಮೀನು ಹಿಡಿಯಲು ಕಾರಿನಲ್ಲಿ ಹೋದವರಿಗೆ ಶಾಕ್‌ | ಯಡೂರು ಸಮೀಪ ನಡೆದ ಘಟನೆಯಲ್ಲಿ ಓರ್ವ ಸಾವು, ಇನ್ನೊಬ್ಬ ಗಂಭೀರ
Hosanagara taluk, Shivamogga district, yaduru

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರು ಸಮೀಪ ನಿನ್ನೆ ದಿನ ಅಪಘಾತವೊಂದು ಸಂಭವಿಸಿದೆ.  ಯಡೂರು ಸಮೀಪ ಮತ್ತಿಗ ಎಂಬ ಗ್ರಾಮದ ಬಳಿಯಲ್ಲಿ  ಮೀನು ಹಿಡಿಯಲು ಹೋಗಿ ವಾಪಾಸ್ ಬರುವಾಗ ಕಾರೊಂದು ಅಪ್‌ಸೆಟ್‌ ಆಗಿ ಓರ್ವ ಸಾವನ್ನಪ್ಪಿದ್ದಾನೆ.  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಅತಿಶಯ (23) ವರ್ಷ ಮೃತಪಟ್ಟ ಯುವಕ. 



ತೀರ್ಥಹಳ್ಳಿಯಿಂದ ಐವರು ಕಾರಿನಲ್ಲಿ ತೆರಳಿ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ವಾಪಸ್‌ ಬರುವಾಗ ಕಾರು ಪಲ್ಟಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿ ಆಗದೇ ಓರ್ವ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



A car accident near Yeduru village in Hosanagara taluk, Shivamogga district, resulted in the death of a 23-year-old man. The accident occurred when the car overturned while returning from a fishing trip. Five people from Thirthahalli were in the car, and two were seriously injured and taken to Manipal Hospital, where one later died. The Thirthahalli police have registered a case.