Accident news : ಹೊಸನಗರದ ಗರ್ತಿಕೆರೆ ಬಳಿ ಆಕ್ಸಿಡೆಂಟ್/ ಬೈಕ್​ಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಕಾರು

Accident news : Car falls into drain after hitting bike near Garthikere in Hosanagar

Accident news : ಹೊಸನಗರದ ಗರ್ತಿಕೆರೆ ಬಳಿ ಆಕ್ಸಿಡೆಂಟ್/ ಬೈಕ್​ಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಕಾರು
Accident news : ಹೊಸನಗರದ ಗರ್ತಿಕೆರೆ ಬಳಿ ಆಕ್ಸಿಡೆಂಟ್/ ಬೈಕ್​ಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಕಾರು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ಇವತ್ತು ಆಕ್ಸಿಡೆಂಟ್ ಆಗಿದೆ.  ಕಾರು ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಗರ್ತಿಕೆರೆ ಗ್ರಾಮದ ಪೆಟ್ರೋಲ್​ ಬಂಕ್​ವೊಂದರ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ರಿಪ್ಪನ್​ಪೇಟೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಕಾರು, ರಸ್ತೆಗೆ ಅಡ್ಡವಾಗಿ ಬರುತ್ತಿದ್ದ ಬೈಕ್​ ತಪ್ಪಿಸಲು ಹೋಗಿ ಡಿಕ್ಕಿಯಾಗಿದೆ. ಬಳಿಕ ಕಾರು , ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಸ್ಥಳಕ್ಕೆ ರಿಪ್ಪನ್​ಪೇಟೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಗಾಯಗೊಂಡಿರುವ ಬೈಕ್​ ಸವಾರನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. 

ಇದನ್ನು ಸಹ ಓದಿ :  Naxal story: ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಅನಾಯಾಸವಾಗಿ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ! ಸತ್ತವಳು ಶರಣಾಗಿದ್ದು ಹೇಗೆ ಗೊತ್ತಾ? ಇದು ನಕ್ಸಲ್​ ಕಥನದ ಫ್ಲಾಶ್​ ಬ್ಯಾಕ್

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com