ಶಿವಮೊಗ್ಗ ಕಾಂಗ್ರೆಸ್‌ ಬಂಡಾಯ | ಎಸ್‌ಪಿ ದಿನೇಶ್‌ ಹೇಳಿದ್ದೇನು ? | ನೈರುತ್ಯ ಪದವೀಧರ ಚುನಾವಣೆ ಬಗ್ಗೆ ದೊಡ್ಡಮಾತು

Shimoga Congress Rebellion | What did SP Dinesh say? | Big talk about Southwest graduate election

ಶಿವಮೊಗ್ಗ ಕಾಂಗ್ರೆಸ್‌ ಬಂಡಾಯ | ಎಸ್‌ಪಿ ದಿನೇಶ್‌ ಹೇಳಿದ್ದೇನು ? | ನೈರುತ್ಯ ಪದವೀಧರ ಚುನಾವಣೆ ಬಗ್ಗೆ ದೊಡ್ಡಮಾತು
Shimoga Congress, SP Dinesh , Big talk , Southwest graduate election

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದಕ್ಕೆ ಪೂರಕವಾಗಿ ಮಲೆನಾಡು ಟುಡೆ ವರದಿ ಮಾಡಿತ್ತು. ಕಾಂಗ್ರೆಸ್‌ನ ಎಸ್‌ಪಿ ದಿನೇಶ್‌ರವರು ಬಂಡಾಯ ಸ್ಪರ್ಧೆ ಮಾಡುತ್ತಾರೆ ಎಂದು ವರದಿಯಲ್ಲಿ ವಿಸ್ತೃತವಾಗಿ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಎಸ್‌ಪಿ ದಿನೇಶ್‌  ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಯಾಗಿ ಸ್ವತಂತ್ರ ಇಳಿಯಲಿದ್ದೇನೆ ಎಂದು ಖಚಿತ ಪಡಿಸಿದ್ದಾರೆ. 

ಇಲ್ಲಿವೆರೆಗೂ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲೂ ಕಡಿಮೆ ಅಂತರದ ಸೋಲು ಕಂಡಿದ್ದೆ. ಈ ಸಲ ಗೆಲ್ಲುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನ ನಡೆಸಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆಯಂತೆ ಹತ್ತು ತಿಂಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದ್ದೇನೆ. ಮತದಾರನ್ನು ಭೇಟಿಯಾಗಿದ್ದೇನೆ. ಟಿಕೆಟ್‌ ನೀಡುವ ವಿಶ್ವಾಸ ಇತ್ತು. ಆದರೆ ಇತ್ತೀಚೆಗೆ ಪಕ್ಷ ಸೇರಿದವರಿಗೆ ಟಿಕೆಟ್‌ ನೀಡಲಾಗಿದೆ. ಪಕ್ಷ ನಿಷ್ಟೆ ಇರುವವರಿಗೆ ಟಿಕೆಟ್‌ ಕೊಟ್ಟರೇ ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಇಲ್ಲವಾದರೆ ನಾನು ಬಂಡಾಯವಾಗಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ. 

ಪಕ್ಷದ ವರಿಷ್ಟರಿಗೆ ತಮ್ಮ ನಿಲುವನ್ನ ಸ್ಪಷ್ಟಪಡಿಸಿರುವುದಾಗಿ ಹೇಳಿದ ಅವರು, ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದವರು ಕಾಂಗ್ರೆಸ್‌ ನಾಯಕರನ್ನೇ ಅವಹೇಳನ ಮಾಡುವಂತವರು, ಹಾಗಾಗಿ ಪಕ್ಷದ ಗೌರವ ಉಳಿಸಲು ತಮ್ಮ ಸ್ಪರ್ಧೆ ಎಂದಿದ್ದಾರೆ.