ಹುಣಸೋಡು ಸ್ಫೋಟದಲ್ಲಿ ಮಾಯವಾದರೆ ಈ ಮೂವರು? 2 ವರ್ಷದಲ್ಲಿ ಕುಟುಂಬಸ್ಥರಿಗೆ ಮಕ್ಕಳ ಬಗ್ಗೆ ಸಿಕ್ಕ ಸುಳಿವೇನು?

What if the three youths disappeared in the Hunsodu blast? What did the family get about the children in 2 years?

ಹುಣಸೋಡು ಸ್ಫೋಟದಲ್ಲಿ ಮಾಯವಾದರೆ ಈ ಮೂವರು? 2 ವರ್ಷದಲ್ಲಿ ಕುಟುಂಬಸ್ಥರಿಗೆ ಮಕ್ಕಳ ಬಗ್ಗೆ ಸಿಕ್ಕ ಸುಳಿವೇನು?
Hunasodu blast case , Shimoga, Explosives, Shivamogga District, Bhadravathi, ಹುಣಸೋಡು ಸ್ಫೋಟ

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ಕೊರೊನಾ ಲಾಕ್ ಡೌನ್  ಸಂದರ್ಭದಲ್ಲಿ ಪರ್ಯಾಯ ಕೆಲಸ ಹುಡಿಕಿಕೊಂಡು  ಬಂದಿದ್ದ ಆ ಮೂವರು ಯುವಕರು ಇಂದಿಗೂ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಶಿವಮೊಗ್ಗ ಸೇರಿ ನಾಲ್ಕೈದು ಜಿಲ್ಲೆಗಳಲ್ಲಿ ಭೂಮಿಯನ್ನ ಕಂಪಿಸಿದ್ದ..ಹುಣಸೋಡು ಸ್ಪೋಟ ದಲ್ಲಿ ಅವರು ಮಾಯವಾದರಾ? ಅಥವಾ ಬದುಕಿದ್ದಾರ...ಪೊಲೀಸರು ನೀಡಬೇಕಿದೆ ತಾರ್ಕಿಕ ಅಂತ್ಯ

ಕೊರೊನಾ ಲಾಕ್ ಡೌನ್ ಸಂದರ್ಭ. ಮಧ್ಯಮವರ್ಗದ ಕುಟುಂಬಗಳ ಪರಿಸ್ಥಿತಿ ನೆಲಕ್ಕಚ್ಚಿತ್ತು. ಹಾಗಾಗಿ ಸಿಕ್ಕ ದುಡಿಮೆಯನ್ನೆಲ್ಲಾ ಆಶ್ರಯಿಸೋದು ಅನಿವಾರ್ಯವೆ ಇತ್ತು. ಹಾಗಾಗಿ ಭದ್ರಾವತಿ ಅಂತರಗಂಗೆಯ ಕೆ.ಹೆಚ್ ಕಾಲೊನಿ ಯುವಕರು ಕರೆದ ಕೆಲಸಕ್ಕೆ ಹೋಗುತ್ತಿದ್ರು. ಅದೇ ರೀತಿ ಆಟೋ ಚಾಲನೆ ಮಾಡುತ್ತಿದ್ದ ಶಶಿ, ಟಾಟಾ ಏಸ್ ಓಡಿಸುತ್ತಿದ್ದ ಪುನೀತ್ ಹಾಗು ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ದುಡಿಮೆಗಾಗಿ  ಶಿವಮೊಗ್ಗಕ್ಕೆ ಬಂದಿದ್ದರು. ಆದರೆ ಆ ಘಟನೆ ಅವರ ಬದುಕನ್ನೇ ನಾಶ ಮಾಡಿಬಿಟ್ಟಿತ್ತು. 

ಕ್ವಾರಿಗಳಿಗೆ ಸ್ಫೋಟಕಗಳನ್ನು ಸಪ್ಲೆ ಮಾಡುತ್ತಿದ್ದ ಪ್ರವೀಣ್​, ಪುನೀತ್​ , ನಾಗರಾಜ್​ ಹಾಗೂ ಶಶಿಯನ್ನು ತನ್ನ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ. ಅದರ ಅಕ್ಕಿಕಾಳಿನಷ್ಟು ಜ್ಞಾನವಿಲ್ಲದ ಯುವಕರು ಸ್ಫೋಟಕಗಳನ್ನು ಕೈಯಲ್ಲಿಡಿದು ಸಾಗಿಸಲು ಅಣಿಯಾಗಿದ್ದರು. ವಾರದಲ್ಲಿ ಒಂದು ದಿನ ತಾನೆ , ಕೈತುಂಬಾ ಹಣ ಸಿಗುತ್ತೆ ಎಂದು ಬೊಲೊರೋ ವಾಹನಗಳಲ್ಲಿ ಸ್ಪೋಟಕ ತುಂಬಿಕೊಂಡು ನಿಗದಿತ ಕ್ವಾರಿಗಳಿಗೆ ಡೆಲಿವರಿ ಮಾಡುತ್ತಿದ್ದರು. 

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..!JP Story

21-01-2021 ರ ಜನವರಿ ರಾತ್ರಿ 10.20 ಕ್ಕೆ ಹುಣಸೋಡಿನಲ್ಲಿ ಕ್ವಾರಿಗೆ ಸಾಗಿಸಬೇಕಿದ್ದ ಸ್ಫೋಟಕ ಸಿಡಿದಿತ್ತು. ಎಷ್ಟರಮಟ್ಟಿಗೆ ಎಂದರೇ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭೂಕಂಪನದ ಸದ್ದಾಗಿತ್ತು. ಏನಾಯ್ತು ಎಂದು ತಿಳಿಯುವಷ್ಟರಲ್ಲಿ ಅಂದು ಇಡೀ ದೇಶ ಅಚ್ಚರಿಯಿಂದ ಶಿವಮೊಗ್ಗದ ಕಡೆಗೆ ನೋಡುತ್ತಿತ್ತು. ಅವತ್ತು ಸಂಭವಿಸಿದ ಹುಣಸೋಡು ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿದರು. 

ಅವತ್ತಿನ ಘಟನೆಯಲ್ಲಿ  ಎಸ್.ಎಸ್ ಕ್ರಷರ್ ಕ್ವಾರಿ ಬಳಿ  ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಪೋಟಕವನ್ನು ಶಿಫ್ಟ್ ಮಾಡುತ್ತಿದ್ದಾಗ ಅಲ್ಲಿ ದೊಡ್ಡ ಸ್ಫೋಟ ಸಂಭವಿಸಿತ್ತು ಎನ್ನುತ್ತಾರೆ. ಹೀಗೆ ಆಯ್ತು ಅಂತಾ ಸಾಕ್ಷಿ ಹೇಳೋದಕ್ಕೆ ಅಲ್ಲಿ ಯಾರು ಉಳಿದಿರಲಿಲ್ಲ. ಆದರೆ ಈ ಘಟನೆಯಲ್ಲಿ  ಶಶಿ ಪುನೀತ್ ನಾಗರಾಜ್ ಸಹ ಇದ್ದರು ಎಂದು ಅವರ ಕುಟುಂಬಸ್ಥರು ಹೇಳುತ್ತಾರೆ. ಈ ಪೈಕಿ ಪೊಲೀಸ್ ವರದಿಯಲ್ಲಿ ಡಿಎನ್ಎ ವರದಿ ಆಧಾರವಾಗಿಟ್ಟುಕೊಂಡು ಶಶಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಂತೆ. 

ಆದರೆ ಪೊಲೀಸರ ಚಾರ್ಚ್​ಶೀಟ್ ನಲ್ಲಿ ಎಲ್ಲೂ ಪುನೀತ್ ಹಾಗೂ ನಾಗರಾಜ್ ಹೆಸರು ಉಲ್ಲೇಖವಾಗಿಲ್ಲ ಎನ್ನಲಾಗಿದೆ.  ಘಟನೆ ದಿನ ಶಶಿ ಪುನೀತ್ ನಾಗರಾಜ್ ರನ್ನು ಪ್ರವೀಣ್ ಎಂಬಾತನೇ ಕರೆದೊಯ್ದಿದ್ದ. ಸ್ಪೋಟ 10.20 ಕ್ಕೆ ಸಂಭವಿಸಿದ ನಂತರ ಶಶಿ ತನ್ನ ತಂದೆ ಹಾಗು ಪತ್ನಿಯ ಜೊತೆ ಮಾತನಾಡಿರುವುದಾಗಿ ಕುಟುಂಬಸ್ಥರು ಹೇಳುತ್ತಾರೆ. 

ಹುಣಸೋಡು ಸ್ಟೋಟ ಸೆಟೆಲೈಟ್ ರೆಡಾರ್ ನಲ್ಲಿ ಸೆರೆ.ಹೇಗೆ ಗೊತ್ತಾ?

ಅಂದು ನಾಗರಾಜ್ ಶಶಿ ಪುನೀತ್ ಸ್ಟೋಟಕ ಸರಬರಾಜು ಮಾಡಲು ಹೋಗಿದ್ದು ನಿಜ..ಆದರೆ ಅವರಲ್ಲಿ ಶಶಿ ಹೊರತು ಪಡಿಸಿ ನಾಗರಾಜ್ ಪುನೀತ್ ಎಲ್ಲಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲದಂತಾಗಿದೆ. ನಮ್ಮ ಮಕ್ಕಳನ್ನು ಹುಡುಕಿಕೊಡಿ ಎಂದು ನೊಂದ ಕುಟುಂಬಗಳು ಪೊಲೀಸ್ ಇಲಾಖೆಯ ಬಳಿ ಅವಲೊತ್ತುಕೊಂಡಿವೆ.

ಶಶಿ ಸಾವನ್ನಪ್ಪಿದ್ದರೆ. ಈ ಹಿಂದೆ ಸಾವನ್ನಪ್ಪಿದ ಕಾರ್ಮಿಕರಿಗೆ ಸರ್ಕಾರ ಮಾನವೀಯತೆ ಅಡಿಯಲ್ಲಿ ನೀಡಿದ ಪರಿಹಾರವನ್ನು ನಮಗೆ ನೀಡಲಿ ಎಂದು ಶಶಿ ಕುಟುಂಬಸ್ಧರು ಹೇಳುತ್ತಾರೆ. ಇಲ್ಲವಾದರೆ ನಮ್ಮ ಮಕ್ಕಳನ್ನು ಹುಡುಕಿಕೊಡಲಿ. ಮಕ್ಕಳು ಸತ್ತಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮ್ಮ ಮಕ್ಕಳು ಬದುಕಿದ್ದಾರೆ ಎಂದು ಹೇಳುತ್ತಾರೆ. ನಾವು ಯಾವುದನ್ನು ನಂಬಬೇಕು ಎಂಬ ಗೊಂದಲದಲ್ಲೆ ಬದುಕು ಜೀಕುವಂತಾಗಿದೆ ಎಂದು ಷೋಷಕರು ಹೇಳುತ್ತಾರೆ. ಪುನೀತ್ ನಾಗರಾಜ್ ಕಣ್ಮರೆ ಘಟನೆಗೆ ಪೊಲೀಸರೇ ತಾರ್ಕಿಕ ಅಂತ್ಯ ಹಾಡಬೇಕಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ಗೊಂದಲವನ್ನು ಇತ್ಯರ್ಥ ಮಾಡಬೇಕಿದೆ. 

ಕ್ರೈಂ ಪ್ರಕರಣಗಳಲ್ಲಿ,  ಸ್ಫೋಟದಂತಹ ಘಟನೆಯಲ್ಲಿ ಸ್ಪೋಟದ ತೀವ್ರತೆಗೆ ವ್ಯಕ್ತಿಯು ಲವಶೇಷವೂ ಸಿಗದಂತಹ ಸಂದರ್ಭಗಳಿವೆ. ಅಂತಹ ಸನ್ನಿವೇಶದಲ್ಲಿ ವ್ಯಕ್ತಿಯು ಮಾಯವಾದ ಎಂದು ಪೊಲೀಸ್​ ಇಲಾಖೆ ಉಲ್ಲೇಖಿಸುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗೆ ಕೂಡ ತನಿಖಾಧಿಕಾರಿಗಳು ನಮೂದಿಸಿಲ್ಲ. ಹಾಗಾದರೆ, ಈ ಮೂವರು ಎಲ್ಲಿದ್ದಾರೆ? ಬದುಕಿದ್ಧಾರಾ? ಸತ್ತಿದ್ದಾರಾ? ಉತ್ತರ ಪೊಲೀಸ್ ಇಲಾಖೆಯೇ ನೀಡಬೇಕಿದೆ.