ಗ್ಯಾರೇಜ್​ನಲ್ಲಿ ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಹಂಚಿಕೊಳ್ಳಿ
WhatsApp Facebook X Telegram
 Fire Accident at Second Hand Garage in Shivamogga 
 Fire Accident at Second Hand Garage in Shivamogga 

ಶಿವಮೊಗ್ಗ: ನಗರದ ಉಡಗಡೂರು ಸರ್ಕಲ್ ಬಳಿ ಇರುವ ಸೆಕೆಂಡ್​​ ಹ್ಯಾಂಡ್​ ವಾಹನಗಳ ಬಿಡಿಭಾಗಗಳ ಗ್ಯಾರೇಜ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ನಡೆದಿದೆ. 

ಟ್ರಾಫಿಕ್‌ ಪೊಲೀಸ್‌ ಎಕ್ಸ್‌ಫೊದಲ್ಲಿದೆ ಇದುವರೆಗೂ ಗೊತ್ತೇ ಇರದ ಸಂಗತಿ | good samaritan ಆಗಿ ಮಕ್ಕಳ ಜೊತೆ SP ಸೆಲ್ಫಿ

ಶಾಬಾಜ್ ಎಂಬುವವರಿಗೆ ಸೇರಿದ ಸೆಕೆಂಡ್ ಹ್ಯಾಂಡ್ ಬಿಡಿಭಾಗಗಳ ಮಳಿಗೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ್ದು, ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿತ್ತು. ಇದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಷಯ ತಿಳಿದ ತುಂಗಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. 

 Fire Accident at Second Hand Garage in Shivamogga 

 Fire Accident at Second Hand Garage in Shivamogga 
 Fire Accident at Second Hand Garage in Shivamogga 
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor