ಶಿವಮೊಗ್ಗ : ಕಳೆದ ವರ್ಷಕ್ಕಿಂತ 12.5 ಟಿಎಂಸಿ ನೀರು ಕಡಿಮೆ , ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ ಇವತ್ತು ?

ಹಂಚಿಕೊಳ್ಳಿ
WhatsApp Facebook X Telegram
Bhadra dam image for normal use malenadutoday
Upper Bhadra Project

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಮಲೆನಾಡು ಮತ್ತು ಬಯಲುಸೀಮೆ ಜಿಲ್ಲೆಗಳ ಜೀವನಾಡಿಯಾದ ಭದ್ರಾವತಿ ತಾಲೂಕಿನ ಬಿ.ಆರ್.ಪಿ.ಯಲ್ಲಿರುವ ಭದ್ರಾ ಜಲಾಶಯದ ನೀರಿನ ಮಟ್ಟವು ನವೆಂಬರ್ 21ರ ಬೆಳಿಗ್ಗೆ 6 ಗಂಟೆಯ ವರದಿಯಂತೆ 171 ಅಡಿ 7¼ ಇಂಚುದಾಖಲಾಗಿದೆ.

ಗರಿಷ್ಠ 186 ಅಡಿ ನೀರಿನ ಮಟ್ಟ ಮತ್ತು ಒಟ್ಟು 71.535 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಪ್ರಸ್ತುತ 54.617 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 270 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ವಿವಿಧ ನಾಲೆಗಳು ಮತ್ತು ನದಿಗೆ ಒಟ್ಟು 1058 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಹೊರಹರಿವಿನ ವಿವರದಂತೆ ಎಡದಂಡೆ ನಾಲೆಗೆ (ಎಲ್.ಬಿ.ಸಿ.) 380 ಕ್ಯೂಸೆಕ್, ಯುಬಿಪಿ ಮತ್ತು ಕೆಡಿಆರ್‌ಗೆ 438 ಕ್ಯೂಸೆಕ್ ಹಾಗೂ ನದಿ ಸ್ಲೂಯಿಸ್ ಮೂಲಕ 100 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಬಲದಂಡೆ ನಾಲೆಗೆ (ಆರ್.ಬಿ.ಸಿ.) ಯಾವುದೇ ನೀರು ಹರಿಸುತ್ತಿಲ್ಲ. ಇದರೊಂದಿಗೆ ಬಾಷ್ಪೀಕರಣ (ಆವಿಯಾಗುವಿಕೆ) ಪ್ರಮಾಣ 140 ಕ್ಯೂಸೆಕ್ ದಾಖಲಾಗಿದೆ.

ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ನವೆಂಬರ್ 21ರಂದು ಭದ್ರಾ ಜಲಾಶಯದ ನೀರಿನ ಮಟ್ಟ 182 ಅಡಿ 5¼ ಇಂಚು ಇತ್ತು ಹಾಗೂ 67.117 ಟಿಎಂಸಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 157 ಕ್ಯೂಸೆಕ್ ಒಳಹರಿವು ಮತ್ತು 3387 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು ಎಂದು ಭದ್ರಾ ಯೋಜನಾ ವೃತ್ತದ ಪ್ರಕಟಣೆ ತಿಳಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor