ಶಿವಮೊಗ್ಗ : ಎರಡು ತಿಂಗಳು ಟೈ ಇದೆ ಅಂದ್ರೂ ಬಿಡದೆ ಡ್ರೈವರ್​ ಮೇಲೆ ರಾಡ್​ನಿಂದ ಹಲ್ಲೆ, ಜೀವ ಬೆದರಿಕೆ. ಏನಿದೂ ಘಟನೆ ? 

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸಿಮೆಂಟ್ ಇಟ್ಟಿಗೆ ಖರೀದಿಯ ಬಾಕಿ ಹಣ ನೀಡುವ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ಪ್ರದೇಶವೊಂದರಲ್ಲಿ ನಡೆದಿದೆ.   

ಶಿವಮೊಗ್ಗದ ಪ್ರದೇಶವೊಂದರಲ್ಲಿ ಸಿಮೆಂಟ್ ಇಟ್ಟಿಗೆಗಳನ್ನು ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಆರೋಪಿಯಿಂದ 30,000 ಸಾಲ ಪಡೆದಿದ್ದರು. ಹಾಗೆಯೇ ಆ ಹಣವನ್ನು ತೀರಿಸಲು 3 ತಿಂಗಳುಗಳ ಕಾಲಾವಕಾಶ ಪಡೆದಿದ್ದರು ಎನ್ನಲಾಗಿದೆ.

ಹೀಗೆ ದೂರುದಾರ ವ್ಯಕ್ತಿ ಹೋಟೆಲ್​ ಒಂದರಲ್ಲಿ ಟೀ ಕುಡಿಯುತ್ತಿದ್ದಾಗ ಹಣ ನೀಡಿದ ವ್ಯಕ್ತಿ ಎದುರಾಗಿ ಹಣ ಯಾವಾಗ ಕೊಡುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.   ಇನ್ನೂ ಕಾಲಾವಕಾಶ ಇದೆ ಎಂದು ದೂರುದಾರ ಹೇಳಿದರೂ ಸುಮ್ಮನಾಗದ ಆರೋಪಿ, ಏಕಾಏಕಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೈ, ಕಾಲು ಹಾಗೂ ಎಡಗಾಲಿನ ಮೂಳೆ ಮುರಿಯುವಂತೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. 

ಅಲ್ಲದೆ, ಎಳೆದಾಡಿ ದೊಣ್ಣೆ ಮತ್ತು ಕುರ್ಚಿಯಿಂದ ಹೊಡೆದಿದ್ದು, ಜಗಳ ಬಿಡಿಸಲು ಬಂದ ವ್ಯಕ್ತಿಯ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.   ಸ್ಥಳೀಯರು ಜಗಳ ಬಿಡಿಸಿದರೂ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದು, ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor