ಶಿವಮೊಗ್ಗ ಶಾರ್ಟ್ ನ್ಯೂಸ್ : ಕಾಡಲ್ಲಿ ಜೆಸಿಬಿ ಆಪರೇಷನ್, ಫಾರೆಸ್ಟ್​​ನೋರ ಎಂಟ್ರಿ! ಚರಂಡಿಗಿಳಿದು ಪ್ರತಿಭಟನೆ, ಮಳಿಗೆ ಕಿರಿಕ್, ಕೋಟೆಯಲ್ಲಿ ಹಲ್ಲೆ!

ಹಂಚಿಕೊಳ್ಳಿ
WhatsApp Facebook X Telegram
Shivamogga News Forest Encroachment Foiled in Sagar, KRV Protest in Ragigudda, Assault Near Ramanna Shetty Park
Shivamogga News Forest Encroachment Foiled in Sagar, KRV Protest in Ragigudda, Assault Near Ramanna Shetty Park

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ ವಿವಿಧ ಘಟನೆಗಳಿಗೆ ಸಂಬಂಧಿಸಿದ ಇವತ್ತಿನ ಶಿವಮೊಗ್ಗ ಶಾರ್ಟ್ ನ್ಯೂಸ್ ಇಲ್ಲಿದೆ. ಅರಣ್ಯ ಒತ್ತುವರಿ ತಡೆ ಕಾರ್ಯಾಚರಣೆ, ಒಳಚರಂಡಿ ಅತಿಕ್ರಮಣ ವಿರುದ್ಧದ ಪ್ರತಿಭಟನೆ ಹಾಗೂ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣಗಳ ವಿವರ ಗಮನಿಸಿಬಹುದು

ಶಿವಮೊಗ್ಗ ಶಾರ್ಟ್ ನ್ಯೂಸ್/ ಅರಣ್ಯಾಧಿಕಾರಿಗಳ ದಿಢೀರ್ ದಾಳಿ, ಜೆಸಿಬಿ ಜಪ್ತಿ

ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ಉಳ್ಳೂರು ಶಾಖೆಯ ಬ್ರಾಹ್ಮಣ ಮಚ್ಚಾಲೆ ಗ್ರಾಮದ ಸರ್ವೇ ನಂಬರ್ 62ರ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಸ್ವಚ್ಛಗೊಳಿಸಿ ಒತ್ತುವರಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಯಲ್ಲಿ ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಬಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಕೃತ್ಯಕ್ಕೆ ಬಳಸಲಾಗಿದ್ದ ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಕರವೇ ಕಾವಲು ಪಡೆ ಕಾರ್ಯಕರ್ತನಿಂದ ಅರೆಬೆತ್ತಲೆ ಪ್ರತಿಭಟನೆ

ಮತ್ತೊಂದೆಡೆ, ಶಿವಮೊಗ್ಗ ನಗರದ ರಾಗಿಗುಡ್ಡ ಭಾಗದ ಒಳಚರಂಡಿ ಮೇಲೆ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಮಣ್ಣ ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು ಮತ್ತು ಅಕ್ರಮವಾಗಿ ಒಳಚರಂಡಿ ಮೇಲೆ ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು

ಇನ್ನೊಂದು ಘಟನೆಯಲ್ಲಿ, ಹೋಟೆಲ್ ನಡೆಸುವ ವಿಚಾರವಾಗಿ ಮಳಿಗೆ ಹಣದ ಪಾವತಿ ಸಂಬಂಧ ನಾಗೇಶ್ ಎಂಬುವವರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ದುರ್ಗಿಗುಡಿಯ ಶಿವಶಂಕರ್ ಎಂಬುವವರ ಮಳಿಗೆಯಲ್ಲಿ ಸುಜಿತ್ ಎಂಬುವವರು ನಾನ್ ವೆಜ್ ಹೋಟೆಲ್ ನಡೆಸುತ್ತಿದ್ದರು. ನಿರ್ವಹಣೆಗೆ ಕಷ್ಟವಾದ ಹಿನ್ನೆಲೆಯಲ್ಲಿ ಹೋಟೆಲ್ ಮುಂದುವರಿಸಲು ನಾಗೇಶ್ ಅವರಿಗೆ ನೀಡಿದ್ದರು. ಅಡುಗೆ ಪರಿಕರಗಳಿಗಾಗಿ ಅಜಿತ್ ಅವರಿಗೆ 70,000 ರೂಪಾಯಿ ಹಾಗೂ ಮಳಿಗೆ ಬಾಡಿಗೆಗಾಗಿ 1,00,000 ರೂಪಾಯಿಯನ್ನು ಮಾಲೀಕ ಶಿವಶಂಕರ್ ಅವರಿಗೆ ನಾಗೇಶ್ ಪಾವತಿಸಿದ್ದರು. ಆದರೆ 1,00,000 ರೂಪಾಯಿ ಹಣವನ್ನು ತನಗೆ ನೀಡಬೇಕಿತ್ತು ಎಂದು ಅಜಿತ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಅಜಿತ್ ಮತ್ತು 4 ರಿಂದ 5 ಮಂದಿ ಸೇರಿ ನಾಗೇಶ್ ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor