ಶಿವಮೊಗ್ಗ : ಡಿವೈಡರ್ ಹಾರಿದ ಕಾರು! ಎದುರಿನಿಂದ ಬರುತ್ತಿದ್ದ ಹಾಲಿನ ವ್ಯಾನ್‌ಗೆ ಡಿಕ್ಕಿ! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
Shivamogga Accident Car Jumps Divider, Hits Milk Van on Sagara Road
Shivamogga Accident Car Jumps Divider, Hits Milk Van on Sagara Road

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಸಾಗರ ರಸ್ತೆಯ ಹರ್ಷಫರ್ನ್ ಹೋಟೆಲ್ ತಿರುವಿನ ಬಳಿ ರೆನಾಲ್ಟ್ ಕಿಗರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ (ಡಿವೈಡರ್) ಹಾರಿ ಎದುರಿನಿಂದ ಬರುತ್ತಿದ್ದ ಹಾಲಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು, ಎರಡೂ ವಾಹನಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಕೊಪ್ಪದ ಕಡೆಯಿಂದ ಸಾಗರದತ್ತ ಹಾಲಿನ ವ್ಯಾನ್ ಬರುತ್ತಿತ್ತು. ಇದೇ ಸಮಯದಲ್ಲಿ ಸಾಗರದ ಕಡೆಯಿಂದ ಬರುತ್ತಿದ್ದ ರೆನಾಲ್ಟ್ ಕಿಗರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಹಾಲಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ . ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಹಾಲಿನ ವ್ಯಾನ್ ಹಾನಿಗೊಳಗಾಗಿವೆ. ಘಟನೆಯು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor