ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ತುರ್ತು ದುರಸ್ತಿ ಹಾಗೂ 11 ಕೆವಿ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಾಳೆ (ನವೆಂಬರ್ 22, ಭಾನುವಾರ) ಶಿವಮೊಗ್ಗ ನಗರದ ಉಪವಿಭಾಗ-1 ಮತ್ತು ಉಪವಿಭಾಗ-2ರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಡ್ಲಿ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಕರೆಂಟ್ ಇರಲ್ಲ:
ನಗರ ಉಪವಿಭಾಗ-2ರ ಮಂಡ್ಲಿ ವಿಭಾಗದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೆತ್ತಿಕೊಂಡಿರುವುದರಿಂದ , ನವೆಂಬರ್ 22ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಇಲಿಯಾಜ್ ನಗರದ 9ರಿಂದ 14ನೇ ಕ್ರಾಸ್, ಮಂಡಕ್ಕಿಭಟ್ಟಿ, ಇಲಿಯಾಜ್ ನಗರ ಚಾನಲ್ ಏರಿಯಾ, ಶಾರದಾನಗರ, ಮಲ್ನಾಡ್ ಕೋಕೋ, ಕಲ್ಲೂರ್ ಮಂಡ್ಲಿ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಉಪವಿಭಾಗ-1ರ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ರವರೆಗೆ ವ್ಯತ್ಯಯ:
ಮತ್ತೊಂದೆಡೆ, ಶಿವಮೊಗ್ಗ ನಗರ ಉಪವಿಭಾಗ-1ರ 11 ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಕಾರಣ , ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುವೆಂಪುನಗರ, ಮ್ಯಾಕ್ಸ್ ಲೇಔಟ್, ಎನ್.ಇ.ಎಸ್. ಬಡಾವಣೆ, ಚೈತನ್ಯ ಟೆಕ್ನೋ ಶಾಲೆ, ಸವಳಂಗ ರಸ್ತೆ, ಡಿ.ವಿ.ಎಸ್. ಕಾಲೋನಿ, ನವುಲೆ ಇಂದಿರಾಗಾಂಧಿ ಬಡಾವಣೆ, ನವುಲೆ, ಶಿವಬಸವನಗರ, ಶ್ರೀಸಾಯಿ ಬಡಾವಣೆ, ಮಲ್ನಾಡ್ ಕೌಂಟಿ, ಬೊಮ್ಮನಕಟ್ಟೆ ಜಿ ಮತ್ತು ಹೆಚ್ ಬ್ಲಾಕ್, ನವುಲೆ ಹೊಸೂರು, ಕೃಷಿ ಕಾಲೇಜ್, ಪರಫೆಕ್ಟ್ ಅಲ್ಯಾ ಪೋಕಸ್ ಡೈ ಕಾಸ್ಟ್, ನ್ಯೂ ಡೈಕಾಸ್ಟ್, ಬಾಪೂಜಿ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಕಾಮಗಾರಿಯ ಹಿನ್ನೆಲೆಯಲ್ಲಿ ಉಂಟಾಗುವ ಈ ತಾತ್ಕಾಲಿಕ ಅಡಚಣೆಗೆ ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
