ಶಿವಣ್ಣ ಸ್ಪೀಕಿಂಗ್‌ | ಎಲ್ಲಾ ಬರೆದುಕೊಟ್ಟು ಕೂಲಿ ಮಾಡಿ ಸಂಸಾರ ಸಾಕ್ತಿನಿ | ತಾಕತ್ತಿನ ಬಗ್ಗೆ ಭಾವುಕರಾಗಿದ್ದೇಕೆ?

Shivaraj Kumar expressed his gratitude to the voters in Shivamogga and became emotional while speaking

ಶಿವಣ್ಣ ಸ್ಪೀಕಿಂಗ್‌ | ಎಲ್ಲಾ ಬರೆದುಕೊಟ್ಟು ಕೂಲಿ ಮಾಡಿ ಸಂಸಾರ ಸಾಕ್ತಿನಿ | ತಾಕತ್ತಿನ ಬಗ್ಗೆ ಭಾವುಕರಾಗಿದ್ದೇಕೆ?
Shivaraj Kumar

SHIVAMOGGA | MALENADUTODAY NEWS | Jun 10, 2024 ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಇವತ್ತು ತಮಗೆ ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದ ಶಿವರಾಜ್‌ ಕುಮಾರ್‌ ಇವತ್ತು ಭಾವುಕರಾಗಿ ಮಾತನಾಡಿದ್ದಾರೆ. ನಾವು ರಿಯಲ್‌ ಲೈಫ್‌ನಲ್ಲಿ ಬಣ್ಣ ಹಚ್ಚೋದಿಲ್ಲ.ನೇರವಾಗಿ ಮಾತನಾಡುತ್ತೇನೆ. ನಾವು ನಮ್ಮಪ್ಪನ ಮಕ್ಕಳು, ನನಗೆ ಮಾತನಾಡಲು ಹೆದರಿಕೆ ಆಗುತ್ತದೆ. ನಮ್ಮ ಕುಟುಂಬ ಮೊದಲಿನಿಂದಲೂ ಭಯಭಕ್ತಿಯಿಂದ ಬದುಕುತ್ತಿದ್ದೇವೆ. ಈಗಿನ ಪರಿಸ್ಥಿತಿ ಏನಂದರೆ ನಾವೇನೇ ಮಾತನಾಡಿದ್ರು ಅದನ್ನು ಕೆಲವೇ ನಿಮಿಷದಲ್ಲಿ ಸುಳ್ಳು ಎನಿಸುತ್ತಾರೆ, ಡ್ರಾಮ ಎನಿಸುತ್ತಾರೆ. ಹಾಗಾಗಿ ನನಗೆ ಸತ್ಯ ಮಾತನಾಡೋದಕ್ಕೆ ಭಯವಾಗುತ್ತದೆ. ನಾನಾಗಲಿ ನನ್ನ ಕುಟುಂಬವಾಗಲಿ ಇದುವರೆಗೂ ಬೇರೆಯವರಿಗೆ ಕೊಟ್ಟು ಬದುಕಿದ್ದೇವೆ. ಈಗಲೂ ಸಹ ನಾನು ಬೇಕಾದರೇ ಎಲ್ಲವನ್ನು ಬರೆದುಕೊಟ್ಟು ಕೂಲಿ ಮಾಡಿ ನನ್ನ ಹಾಗೂ ನನ್ನ ಹೆಂಡತಿ ಮಕ್ಕಳನ್ನ ಸಾಕಬಲ್ಲೆ ಎಂದು ಶಿವಣ್ಣ ಹೇಳಿದ್ದಾರೆ. ಅವರ ಮಾತುಗಳು ಅವರಿಗಾದ ನೋವಿನ ಪ್ರತಿಧ್ವನಿ ಎಂಬುದು ಅಲ್ಲಿದ್ದವರಿಗೆಲ್ಲರಿಗೂ ಗೊತ್ತಾಗಿತ್ತು. 

ಮಾತುಗಳನ್ನ ಮುಂದುವರಿಸುತ್ತಾ, ಈ 52 ದಿನ ನಿಮ್ಮೊಂದಿಗೆ ಇದ್ದೆ ಅದೇ ನನಗೆ ಸಂತೋಷ ತಂದಿದೆ. ನಿಮ್ಮೆಲ್ಲರ ಆಸೆಯನ್ನ ಬದಿಗಿಟ್ಟು ನಮಗಾಗಿ ಕೆಲಸ ಮಾಡಿದ್ದೀರಿ, ನಿಮ್ಮೊಂದಿಗೆ ನಾನು ಸಹ ಸಣ್ಣ ಕಾರ್ಯಕರ್ತನೆನಿಸಿಕೊಳ್ಳಲು ಬಯಸುತ್ತೇನೆ. ಐದು ಲಕ್ಷಕ್ಕೂ ಹೆಚ್ಚು ಜನರು ವೋಟು ಹಾಕಿದ್ದಾರೆ. ಅದಕ್ಕೆ ಹೆಮ್ಮೆ ಎನಿಸುತ್ತದೆ. ಈ ಅವಧಿಯಲ್ಲಿ ಸಾಕಷ್ಟು ಜನರನ್ನು ನೋಡಿದ್ದೇವೆ, ಸಾಕಷ್ಟು ಮಾತುಗಳನ್ನ ನೋಡಿದ್ದೇವೆ. ಕೆಲವರು ಇದರ ಬಗ್ಗೆ ಹೇಳಿದಾಗ, ನಾನು ಹೇಳಿದೆ ಸಾವಿರ ಜನ ಸಾವಿರ  ಮಾತನಾಡುತ್ತಾರೆ. ಯಾರೋ ಏನೋ ಅಂತಾರೆ ಅಂತಾ ಬದುಕುವುದನ್ನ ಬಿಡಲಾಗುತ್ತಾ? ಸಿನಿಮಾದಲ್ಲಿ ನಟಿಸುವುದನ್ನ ಬಿಡುವುದಾಕ್ಕಾಗುತ್ತಾ? ನಮ್ಮ ಪಾಡಿಗೆ ನಾವು ಬದುಕುತ್ತಾ ಹೋಗಬೇಕು ಎಂದ ಶಿವಣ್ಣರ ಮಾತಿನಲ್ಲಿ ಜೀವನದ ಅನುಭವದ ತೂಕ ಕಾಣುತ್ತಿತ್ತು. 

ಹಾಗೊಂದು ವೇಳೆ ನಾನೇ ತಪ್ಪು ಮಾಡಿದ್ರು ದೇವರೊಬ್ಬನಿದ್ದಾನೆ. ಶಿಕ್ಷೆ ಆಗೇ ಆಗುತ್ತೆ. ಆದರೆ ನಾನು ತಪ್ಪು ಮಾಡಲಿಲ್ಲ. ಗೀತಾರನ್ನ ಚುನಾವಣೆಗೆ ನಿಲ್ಲಿಸಿದ್ದು ನನ್ನ ತಪ್ಪಾ! ಡಾ.ರಾಜಕುಮಾರ್‌ರವರು ಅವರ ಪತ್ನಿ ಪಾರ್ವತಮ್ಮನವರನ್ನು ಮುಂದುವರಿ ಎನ್ನದೆ ಇದ್ರೆ ನಿರ್ಮಾಪಕಿಯಾಗಿ ಅವರು ಅಷ್ಟೊಂದು ಸಾಧನೆ ಮಾಡಲಾಗುತ್ತಿತ್ತಾ? ಆದರೆ ನನ್ನ ಬಗ್ಗೆ ಮಾತನಾಡಿದರು. ನಾನ್ಯಾವ ತಪ್ಪು ಮಾಡಲಿಲ್ಲ. ಇವತ್ತು ಅಷ್ಟೊಂದು ವೋಟು ಹಾಕಿದ್ದಾರೆ ಜನರು ಎಂದ ಶಿವಣ್ಣ ಇಡೀ ಸಮಾರಂಭದಲ್ಲಿ ಸೋಲೆ ಗೆಲುವಿನ ಮೆಟ್ಟಿಲು, ನಾಲ್ಕು ಮಾತು ಬರುತ್ತೆ ಹೋಗುತ್ತೆ ದೇಶ ಉಳಿಬೇಕು ಎನ್ನುವ ಮೂಲಕ  ಕಾಂಗ್ರೆಸ್‌ ಪಕ್ಷದಲ್ಲಿದ್ದ ಸೋಲಿನ ಕಹಿ ನೆನಪು ಸರಿಯುವಂತೆ ಮಾಡಿದ್ರು. 

Shivaraj Kumar expressed his gratitude to the voters in Shivamogga and became emotional while speaking