ನಿನ್ನೆ ದುರ್ಗಿಗುಡಿ ಪೆಟ್ರೋಲ್‌ ಬಂಕ್‌ನಲ್ಲಿ ನಡೆದಿದ್ದೇನು? ಕ್ರಿಮಿನಲ್‌ ಕೇಸ್‌ ಎಂದಿದ್ದೇಕೆ ಡಿಸಿ?

What happened at Durgigudi petrol station yesterday? HMC Petrol Station, Durgigudi, Shimoga, Hosamane, Shimoga Local News, Malenadu Today News, DC Gurudatta Hegede

ನಿನ್ನೆ ದುರ್ಗಿಗುಡಿ ಪೆಟ್ರೋಲ್‌ ಬಂಕ್‌ನಲ್ಲಿ ನಡೆದಿದ್ದೇನು? ಕ್ರಿಮಿನಲ್‌ ಕೇಸ್‌ ಎಂದಿದ್ದೇಕೆ ಡಿಸಿ?
HMC Petrol Station, Durgigudi, Shimoga, Hosamane, Shimoga Local News, Malenadu Today News, DC Gurudatta Hegede

SHIVAMOGGA | MALENADUTODAY NEWS | May 4, 2024    ‌ 

ಶಿವಮೊಗ್ಗದ ದುರ್ಗಿಗುಡಿ ಯಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಚುನಾವಣಾ ಸಂಚಾರಿ ಸ್ಕ್ವಾಡ್‌ನ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕವಿಲ್ಲದ ಎಂಟು ಲಕ್ಷ ರೂಪಾಯಿ ಹಣವನ್ನು ಸೀಜ್‌ ಮಾಡಿದ್ದರು. ನಿನ್ನೆ ರಾತ್ರಿ ನಡೆದಿದ್ದ ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳು ಬಂದಿದ್ದ ಕಾರಿಗೆ ನಂಬರ್‌ ಪ್ಲೇಟ್‌ ಇಲ್ಲದೇ ಇರುವುದನ್ನ ಆಕ್ಷೇಪಿಸಿದ್ದರು. ಅಲ್ಲದೆ ಬಂಕ್‌ನ ಮಾಲೀಕರು ಒಂಬತ್ತುವರೆ ಲಕ್ಷ ರೂಪಾಯಿ ದೈನಂದಿನ ವ್ಯವಹಾರದ ಹಣವಿತ್ತು ಇದೀಗ ಎಂಟು ಲಕ್ಷ ರೂಪಾಯಿ ಸೀಜ್‌ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ವಿಚಾರ ಜಯನಗರ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿತ್ತು. 

ಈ ನಡುವೆ ನಿನ್ನೆ ನಡೆದ ಘಟನೆ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಪ್ರತಿಕ್ರಿಯೆ ನೀಡಿದ್ದಾರೆ . ಇವತ್ತು ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಎಲೆಕ್ಷನ್ ಸಿಬ್ಬಂದಿ ಗೆ ಎಲ್ಲರೂ ಸಹಕಾರ ನೀಡಬೇಕು. ಸಂಶಯ ಇದ್ದಾಗ ನಾವು ಹಣ ಸೀಜ್ ಮಾಡ್ತೀವಿ ಅಷ್ಟೇ.  ಪ್ಲೈಯ್ಯಿಂಗ್‌ ಸ್ಕ್ವಾಡ್ ಗೆ ಯಾರು ಅಡೆತಡೆ ಮಾಡಬಾರದು. ಕಾರಿನ ನಂಬರ್‌ ಪ್ಲೇಟ್‌ ಇಲ್ಲದಿರುವುದನ್ನ ಪರಿಶೀಲಿಸಲು ಸಾರ್ವಜನಿಕರಿಗೆ ಇಲ್ಲ .ಆರ್ ಟಿ ಓ ಅಧಿಕಾರಿಗಳು ಪರಿಶೀಲನೆ ನಡೆಸಬಹುದು. ಚುನಾವಣಾ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವವರ ಬಗ್ಗೆ ಕ್ರಿಮಿನಲ್ ಕೇಸ್ ದಾಖಲು‌ ಮಾಡಲಾಗಿದೆ ಎಂದು ತಿಳಿಸಿದರು. 

ನಮ್ಮ‌ ಕೆಲಸಕ್ಕೆ ಕೆಲವರು ಅಡ್ಡಿ ಮಾಡಿದ್ದಾರೆ. ಪರಿಶೀಲನೆ ನಡೆಸಿ ನಾವು ಪ್ರಕರಣ ದಾಖಲಿಸುತ್ತೇವೆ. ಸಿಬ್ಬಂದಿ ಗೆ ತೊಂದರೆ ಕೊಟ್ರೆ ಕೇಸ್ ದಾಖಲಿಸುತ್ತೇವೆ ಎಂದ ಅವರು ಕಾರಿನ ನಂಬರ್‌ ಪ್ಲೇಟ್‌ ವಿಚಾರವನ್ನು ಪರಿಶೀಲನೆ ನಡೆಸ್ತಿದ್ದೇವೆ ಎಂದರು

 HMC Petrol Station, Durgigudi, Shimoga, Hosamane, Shimoga Local News, Malenadu Today News, DC Gurudatta Hegede