ಗುಡುಗುತ್ತಿದ್ದವರು ನಡುಗಿಸ್ತಿದ್ದಾರೆ | ರೆಬೆಲ್‌ ಈಶ್ವರಪ್ಪರವರ ಪ್ಲಸ್‌ & ಮೈನಸ್‌ ಏನು? | ಎಲೆಕ್ಷನ್‌ ಟುಡೆ ಏನು ಹೇಳುತ್ತೆ

Those who thundered have trembled What are Rebel Eshwarappa's Plus & Minus? | What does Election Today say? KS Eshwarappa, BY Raghavendra, Madhu Bangarappa, BS Yeddyurappa,

ಗುಡುಗುತ್ತಿದ್ದವರು ನಡುಗಿಸ್ತಿದ್ದಾರೆ | ರೆಬೆಲ್‌ ಈಶ್ವರಪ್ಪರವರ ಪ್ಲಸ್‌  & ಮೈನಸ್‌ ಏನು? | ಎಲೆಕ್ಷನ್‌ ಟುಡೆ ಏನು ಹೇಳುತ್ತೆ
Election Today, KS Eshwarappa, BY Raghavendra, Madhu Bangarappa, BS Yeddyurappa,

SHIVAMOGGA | MALENADUTODAY NEWS | May 4, 2024    ‌

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿದವರು ಕೆಎಸ್‌ ಈಶ್ವರಪ್ಪ. ಆರಂಭದಲ್ಲಿ ಅವರು ನಾಮಪತ್ರ ವಾಪಸ್‌ ಪಡೆದೆ ತೀರುತ್ತಾರೆ ಎಂದವರು ಸಹ ಈಶ್ವರಪ್ಪನವರ ಸದ್ಯದ ಪ್ರಚಾರದ ಭರಾಟೆ ನೋಡಿ ಹುಬ್ಬೇರಿಸುತ್ತಿದ್ದಾರೆ. 

ಕೆಎಸ್‌ ಈಶ್ವರಪ್ಪ

ಸುದೀರ್ಘ ರಾಜಕೀಯದ ಅನುಭವ ಹಾಗೂ ತಮ್ಮ ಚುನಾವಣಾ ರಾಜಕಾರಣದ ವಾಪಸಾತಿಯ ಉದ್ದೇಶ, ಎರಡನ್ನು ಕೆಎಸ್‌ಇ ಚುನಾವಣಾ ಅಖಾಡದಲ್ಲಿ ತೋರಿಸುತ್ತಿದ್ದಾರೆ. ಮನೆಮನೆ ಭೇಟಿಯಲ್ಲಿಯೇ ಮತದಾರರನ್ನ ಸೆಳೆಯುತ್ತಿರುವ ಅವರು ಸ್ಟಾರ್‌ ಕ್ಯಾಂಪೇನ್‌ರಿಲ್ಲದ ಹೊರತಾಗಿ ಬೂತ್‌ ಮಟ್ಟದ ತಮ್ಮ ಬೆಂಬಲಿಗರನ್ನ ಖುದ್ದಾಗಿ ಅಟೆಂಡ್‌ ಮಾಡುತ್ತಿದ್ದಾರೆ. ಬಿಜೆಪಿ ಸಿಸ್ಟಮ್‌ನ ಅಡಿಯಲ್ಲಿ ರವಾನೆಯಾಗುತ್ತಿದ್ದ ಸಂದೇಶ ತಲುಪುತ್ತಿದ್ದವರನ್ನ ಫೋನ್‌ನಲ್ಲಿಯೇ ಭೇಟಿ ಮಾಡುತ್ತಿರುವ ಕೆಎಸ್‌ ಈಶ್ವರಪ್ಪ , ಅವರನ್ನ ತಮ್ಮ ಕಡೆಗೆ ಸೆಳೆಯುತ್ತಿದ್ದಾರೆ. ಒಂದೆರಡು ನಿಮಿಷಗಳ ಮಾತುಕತೆಯಲ್ಲಿ ಈಶ್ವರಪ್ಪ ಇದುವರೆಗೂ ಸಾವಿರ ಸಾವಿರ ಮಂದಿಯನ್ನ ತಲುಪಿದ್ದಾರೆ. ತಮಗೂ ಈಶ್ವರಪ್ಪನವರ ಕರೆ ಬಂದಿತ್ತು ಎಂಬಷ್ಟರ ಮಟ್ಟಿಗೆ ಬೂತ್‌ಗಳಲ್ಲಿ ಮಾತುಗಳು ಕೇಳಿಬರುತ್ತಿದೆ. ಪ್ರತಿ ಸಮಾರಂಭದಲ್ಲಿಯು ಅವರಿಗೆ ಸೇರುತ್ತಿರುವ ಜನ ಸಂಘಟಕರ ಕರಾಮತ್ತನ್ನ ಸಾಬೀತು ಪಡಿಸುತ್ತಿದೆ. ಅಂದಾಜು ಸಾವಿರ ಕುರ್ಚಿ, ಅದರ ಮೇಲೊಂದು ಐನೂರು ಜನ, ಹೀಗೆ ಈಶ್ವರಪ್ಪನವರ ಸಮಾರಂಭದ ಲೆಕ್ಕದ ಪಟ್ಟಿ ಆರಂಭವಾಗುತ್ತಿದೆ. 

ಚುನಾವಣಾ ಸ್ವಾರಸ್ಯ

ಇನ್ನೂ ಕೆಎಸ್‌ ಈಶ್ವರಪ್ಪ ತಮ್ಮ ಅನುಭವವನ್ನ ಚುನಾವಣೆಗೆ ಬಳಸಿಕೊಳ್ಳುತ್ತಿದ್ಧಾರೆ. ಶಿರಾಳಕೊಪ್ಪದಲ್ಲಿ ಅನುಮತಿ ಸಿಗದೇ ಜಾಗದಿಂದ ಒಕ್ಕೆಲೆಬ್ಬಿಸಿದಾಗ ಅದನ್ನೇ ಎನ್‌ಕ್ಯಾಶ್‌ ಮಾಡಿಕೊಂಡು ರಸ್ತೆಯಲ್ಲಿ ಸಭೆ ನಡೆಸಿ ಸುದ್ದಿಯಾದರು. ಚುನಾವಣಾ ಕಚೇರಿಗೆ ವಾಮಾಚಾರ ಆಗಿದೆ ಎಂದು ಗೊತ್ತಾದಾಗ ಅದರ ಫೋಟೋ ಹಿಡಿದು ಪ್ರತಿಭಟಿಸಿ ಮತದಾರರಿಗೆ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಯಿದು ಎಂದು ತೋರಿಸಿದರು. ಇಷ್ಟೆ ಅಲ್ಲದೆ, ಇತ್ತೀಚಿನ ಸಮಾವೇಶವೊಂದರಲ್ಲಿ ಭಾವುಕರಾಗಿ ತಮ್ಮ ತಾಯಿ ಬದುಕಿದ್ದ ರೀತಿಯನ್ನು ವಿವರಿಸಿದ ಅವರು, ನಿಮ್ಮ ಮಕ್ಕಳನ್ನ ಓದಿಸಿ ಎಂದಷ್ಟೆ ಹೇಳಿದರು ಹೊರತಾಗಿ ಮತಹಾಕಿ ಎನ್ನಲಿಲ್ಲ. ಇನ್ನೂ ಎದುರಾಳಿಗಳನ್ನು ಗಲಿಬಿಲಿಗೊಳಿಸ್ತಿರುವ ಕೆಎಸ್‌ಇ ನೇರಾನೇರ ನಾನು ಗೆದ್ದಾಯ್ತು, ಎರಡು ಮೂರನೇ ಸ್ಥಾನ ಅವರದ್ದು ಪೈಪೋಟಿ ಎನ್ನುವ ಮೂಲಕ ಅಚ್ಚರಿ ಮೂಡಿಸ್ತಾರೆ. ಅವರ್ಯಾರು ಮನೆಮನೆಗೆ ಹೋಗಿಲ್ಲ, ಸಭೆ ಸಮಾರಂಭ ಮಾಡುವುದಿರಿಂದ ನೋ ಯೂಸ್‌ ಎನ್ನುವ ಮೂಲಕ ಚುನಾವಣಾ ತಂತ್ರಗಾರಿಕೆಯ ಪಾಠವನ್ನು ಅವರು ಮಾಡಿದ್ದರು. ಫ್ಯಾಕ್ಟರಿಗಳಿಗೆ ಹೋಗುವ ಕೆಎಸ್‌ಇ ನನಗಾಗಿ ಒಂದು ದಿನ ರಜೆ ಕೊಡಿ ಎನ್ನುವ ಮೂಲಕ ಮತದಾರರನ್ನೇ ತಮ್ಮ ಪ್ರಚಾರಕರನ್ನಾಗಿಸುವ ಮೈಂಡ್‌ಗೇಮ್‌ ಮಾಡಿದ್ದರು. 

ಈಶ್ವರಪ್ಪನವರ ಪ್ಲಸ್‌ ಹಾಗೂ ಮೈನಸ್

ರೆಬೆಲ್‌ ಆಗಿ ಶಿವಮೊಗ್ಗ ಕ್ಷೇತ್ರದ ಬೀದಿ ಬೀದಿ ಸುತ್ತುತ್ತಿರುವ ಕೆಎಸ್‌ಇ ಶಿವಮೊಗ್ಗದಲ್ಲಿ ಗೆಲ್ಲುತ್ತಾರಾ? ಹೀಗೆ ಕೇಳಿದರೆ ಅದಕ್ಕೆ ಉತ್ತರ ಮೇ ಏಳಕ್ಕೆ ಸಿಗಬೇಕು? ಏಕೆಂದರೆ ಶಿವಮೊಗ್ಗದ ಮತದಾರ ಯಾರ ಬಗ್ಗೆಯು ಈ ಸಲ ಸುಳಿವುಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಕೆಎಸ್‌ ಈಶ್ವರಪ್ಪನವರ ಪ್ಲಸ್‌ ಅಥವಾ ಮೈನಸ್‌ ಪಾಯಿಂಟ್‌ಗಳನ್ನಷ್ಟೆ ಸದ್ಯ ನೋಡಬಹುದು. 

ಬಿಎಸ್‌ವೈ ಕುಟುಂಬದ ವಿರುದ್ಧ ಹೆಜ್ಜೆ ಇಡುವ ಒಂದೇ ಕಾರಣಕ್ಕೆ ಅವರು ಚುನಾವಣಾ ಅಖಾಡದಲ್ಲಿ ಮುಂದಡಿ ಇಟ್ಟಿದ್ದಾರೆ ಕೆಎಸ್‌ಈಶ್ವರಪ್ಪ. ಇದೆ ಅವರ  ಮೊದಲ ಪ್ಲಸ್‌ ಪಾಯಿಂಟ್‌. ಹಾಗೆ ಮೈನಸ್‌ ಸಹ. ತಮ್ಮ ಮಗನಿಗೆ ಟಿಕೆಟ್‌ ಸಿಗದಿದ್ದಕ್ಕೆ ಈಶ್ವರಪ್ಪ ಚುನಾವಣೆಗೆ ಇಳಿದಿದ್ದಾರೆ. ಅದಕ್ಕೆ ಯಡಿಯೂರಪ್ಪನವರನ್ನ ಕಾರಣ ಮಾಡುತ್ತಿದ್ದಾರೆ ಎನ್ನುವ ಟೀಕೆಯು ಇದೆ. 

ಇನ್ನೂ ಹಿಂದುಳಿದ ವರ್ಗಗಳ ನಾಯಕರಲ್ಲಿ ಒಬ್ಬರಾಗಿರುವ ಕೆಎಸ್‌ ಈಶ್ವರಪ್ಪರಿಗೆ ಬಿಜೆಪಿಯಲ್ಲಿ ಕಟ್ಟಾ ಬೆಂಬಲಿಗರಿದ್ದಾರೆ. ಅದು ಅವರ ಪ್ಲಸ್‌ ಪಾಯಿಂಟ್‌. ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌, ಹಿಂದೂತ್ವದ ನಾಯಕ, ಓಂಶಕ್ತಿ, ಮಾರಿಕಾಂಬಾ ಮೈಕ್ರೋ ಫೈನಾನ್ಸ್‌, ದೇವಾಲಯಗಳ ಭೇಟಿ ಈಶ್ವರಪ್ಪನವರ ಪ್ಲಸ್‌ ಪಾಯಿಂಟ್‌.. 

ಇನ್ನೂ ಮೈನಸ್‌ ಪಾಯಿಂಟ್‌ಗಳೆಂದರೆ, ತಮ್ಮ ಪುತ್ರನೀಗಾಗಿ ಹೋರಾಟ ನಡೆಸ್ತಿರುವುದು ಎಂಬ ಟೀಕೆ ಈಶ್ವರಪ್ಪನವರ ಪಾಲಿಗೆ ಮೈನಸ್‌ ಆಗಬಹುದು. ಚುನಾವಣಾ ಪ್ರಣಾಳಿಕೆಯಿಲ್ಲದೇ ಯಡಿಯೂರಪ್ಪನವರ ವಿರುದ್ಧವಷ್ಟೆ ಹೋರಾಟ ಎಂಬುದಾಗಲಿ, ಬಿಜೆಪಿ ಪಕ್ಷವನ್ನ ಕ್ಲೀನ್‌ ಮಾಡುವ ಉದ್ದೇಶವಾಗಲಿ ಮತದಾರರ ಮೇಲೆ ಪರಿಣಾಮ ಬೀರುವ ಶಕ್ತಿ ಪಡೆದುಕೊಳ್ಳದೇ ಹೋಗಬಹುದು. ತಮ್ಮ ಪರವಾಗಿ ದೊಡ್ಡ ನಾಯಕತ್ವದ ಹೆಸರುಗಳನ್ನ ಹೇಳಿದ ಹೊರತಾಗಿ ಅವರುಗಳಿಂದ ತಮಗೆ ನೇರ ಬೆಂಬಲ ತರಲು ಸಾಧ್ಯವಾಗದೇ ಇರುವುದು ಸಹ ಮೈನಸ್‌ ಪಾಯಿಂಟ್‌ಗಳಲ್ಲಿ ಒಂದು. ಕೆಎಸ್‌ ಈಶ್ವರಪ್ಪರ ಜೊತೆ ಡಿಎಸ್‌ ಈಶ್ವರಪ್ಪನವರು ಚುನಾವಣೆಯಲ್ಲಿದ್ದಾರೆ. ಇದು ಒಂದು ರೀತಿಯಲ್ಲಿ ಮೈನಸ್‌ ನಂತಿದೆ.  ಒಟ್ಟಾರೆ ಕೆಎಸ್‌ ಈಶ್ವರಪ್ಪನವರು ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಅದನ್ನ ಮತದಾರ ಮಾತ್ರ ನಿರ್ಧರಿಸಬಲ್ಲ. ಆದಾಗ್ಯು ಅವರ ತಂತ್ರಗಾರಿಕೆ ಸದ್ದು ಮಾಡುತ್ತಿದೆ.