ನಾನು ವೋಟು ಹಾಕುತ್ತೇನೆ ನೀವು? | ಮರೆಯದಿರಿ ಮತ ಚಲಾಯಿಸಿರಿ | ಹೀಗೊಂದು ಅಭಿಯಾನ

I'll vote, will you? | Don't forget to vote | Shimoga Municipal Corporation launches such a campaign

ನಾನು ವೋಟು ಹಾಕುತ್ತೇನೆ ನೀವು? | ಮರೆಯದಿರಿ ಮತ ಚಲಾಯಿಸಿರಿ | ಹೀಗೊಂದು ಅಭಿಯಾನ
Shimoga Municipal Corporation

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗ ಜಿಲ್ಲಾಡಳಿತ ಚುನಾವಣೆಗೆ ಸಿದ್ಧತೆ ನಡೆಸ್ತಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಜಾಗೃತಿ ಮೂಡಿಸುವ ಅಭಿಯಾನವನ್ನೆ ಹಮ್ಮಿಕೊಂಡಿದೆ. 

ಲೋಕಸಭಾ ಚುನಾವಣೆ  ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ SVEEP  ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.  

ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಆವರಣದಲ್ಲಿ ವಿಶೇಷ ಚೇತನರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವ ಮೂಲಕ ಜಾಗೃತಿ ಮೂಡಿಸಲಾಯ್ತು. 

ಇದೇ ವೇಳೆ ಅಂದ ಕಲಾವಿದ ಬಸವರಾಜ್ ರವರ ತಂಡದಿಂದ ಮತದಾನ ಜಾಗೃತಿ ಗೀತೆಗಳನ್ನು ಹಾಡಿಸುವ ಮೂಲಕ ಮತಜಾಗೃತಿ ಮೂಡಿಸಲಾಯಿತು.

ನೇಸರ ಕಲಾ ತಂಡದಿಂದ ಮತದಾನದ ಜಾಗೃತಿ ಬೀದಿ ನಾಟಕ ಮಾಡಿಸುವ ಮಾಲಕ ಮತದಾನ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಕಾನ್ ಅದ ಶ್ರೀರಜತ್ ದೀಕ್ಷಿತ್ ಮತದಾನದ ಬಗ್ಗೆ ಮಾತನಾಡಿದರು. 

ವಿಕಲ ಚೇತನ ಅಧಿಕಾರಿ ಶ್ರೀಮತಿ ಶಶಿರೇಖಾ, ಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿಗಳುಹಾಗೂ ಸ್ವೀಪ್ ತಂಡದ ಅಧಿಕಾರಿ ಸಿಬ್ಬಂಧಿಗಳು ಹಾಜರಿದ್ದರು.‌