ಮುರಿದ ಮಾತು, ಸಮರ ಶುರು! ಈಶ್ವರಪ್ಪನವರ ವಿರುದ್ಧ ಕೆರಳಿದ ಬಿಎಸ್‌ ಯಡಿಯೂರಪ್ಪ! ಹೈಕಮಾಂಡ್‌ ಕೂಡ ಕೈ ಬಿಟ್ಟಿತೆ?

BS Yeddyurappa's reaction against Eshwarappa

ಮುರಿದ ಮಾತು, ಸಮರ ಶುರು! ಈಶ್ವರಪ್ಪನವರ ವಿರುದ್ಧ ಕೆರಳಿದ ಬಿಎಸ್‌ ಯಡಿಯೂರಪ್ಪ!  ಹೈಕಮಾಂಡ್‌ ಕೂಡ ಕೈ ಬಿಟ್ಟಿತೆ?
BS Yeddyurappa,Eshwarappa

Shivamogga Mar 20, 2024 ಮಾಜಿ ಸಚಿವ, ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪನವರ ಜೊತೆಗಿನ ಬಿಜೆಪಿ ಸಂಧಾನದ ಭಾಗಿಲು ಬಂದ್‌ ಆಯ್ತಾ? ನಾನು ಅವರ ಮನೆಗೆ ಹೋಗೋದಿಲ್ಲ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನವರು ಕಡ್ಡಿತುಂಂಡು ಮಾಡಿ ಹೈಕಮಾಂಡ್‌ಗೆ ತಿಳಿಸಿದ್ರಾ? ಹೌದು ಎನ್ನುತ್ತಿದೆ ಸ್ಟೇಟ್‌ ರಿಪೋರ್ಟ್‌ ಬೆಂಗಳೂರು ನ್ಯೂಸ್‌ ಪ್ರಕಾರ, ಇವತ್ತು ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪನವರು ಇದೇ ಮೊದಲ ಸಲ ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಂಗಳೂರು ನ್ಯೂಸ್‌ನ ಪ್ರಕಾರ, ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ಗೈರಾದ ಬೆನ್ನಲ್ಲೆ ಅವರ ಮನವೊಲಿಸುವ ಎಲ್ಲಾ ಪ್ರಯತ್ನಗಳಿಗೆ ಬಿಜೆಪಿ ಇತಶ್ರೀ ಹಾಡಿದೆ ಎನ್ನಲಾಗಿದೆ. ಮೇಲಾಗಿ ಬಿಎಸ್‌ ಯಡಿಯೂರಪ್ಪನವರು ಇದೇ ವಿಚಾರದಲ್ಲಿ ಇವತ್ತು ಹೈಕಮಾಂಡ್‌ನ ಮುಂದೆ ಈಶ್ವರಪ್ಪನವರ ಬಂಡಾಯದ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ಕೂಡ ಸಂಧಾನದ ಪ್ರಯತ್ನ ಕೈ ಬಿಡುವುದಾಗಿ ಹೇಳಿರುವ ಬಗ್ಗೆ ರಾಜ್ಯದ ಟಾಪ್‌ ನಂಬರ್ಸ್‌ನ ಚಾನಲ್‌ಗಳು ವರದಿ ಮಾಡಿವೆ. 

ಇಷ್ಟೆ ಅಲ್ಲದೆ, ಬಿಎಸ್‌ವೈ ತಮ್ಮನ್ನ ಹಾಗೂ ತಮ್ಮ ಕುಟುಂಬವನ್ನ ಹೀನಾಮಾನವಾಗಿ ನಿಂದಿಸಿದವರ ಮನೆ ಬಾಗಿಲಿಗೆ ನಾನು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರ ನಡುವೆ ದೆಹಲಿಯಲ್ಲಿ ಮಾನತಾಡಿದ ಬಿಎಸ್‌ ಯಡಿಯೂರಪ್ಪ ಮಾಧುಸ್ವಾಮಿ, ಕರಡಿ ಸಂಗಣ್ಣರ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ. ಅಸಮಾಧಾನಿತರ ಜೊತೆ ಮಾತಾಡಿ ಎಲ್ಲವನ್ನು ಸರಿಮಾಡುತ್ತೇನೆ ಎಂದಿರುವ ಅವರು ಈಶ್ವರಪ್ಪನವರ ಹೇಳಿಕೆಗಳನ್ನ ಬೇಜವಾಬ್ದಾರಿ ಹೇಳಿಕೆ ಎಂದಿದ್ದಾರೆ. 

ತಮ್ಮ ಪುತ್ರನಿಗೆ ಟಿಕೆಟ್‌ ಸಿಗಲಿಲ್ಲ ಎಂದು ಏನೇನೋ ಮಾತನಾಡಬಾರದು ಎಂದಿರುವ ಅವರು, ಸುಖಾಸುಮ್ಮನೆ ಆರೋಪ ಮಾಡುವುದು ಯಾವ ಕಾರಣಕ್ಕೂ ಸರಿಯಾದುದಲ್ಲ, ಈಶ್ವರಪ್ಪನವರು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನ ಬಿಡಬೇಕು ಎಂದಿದ್ದಾರೆ. ಚುನಾವಣೆ ಬಳಿಕ ಬಿವೈ ವಿಜಯೇಂದ್ರ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಶಿವಮೊಗ್ಗದಲ್ಲಿ ಕೆಎಸ್‌ ಈಶ್ವರಪ್ಪ ಹೇಳಿದ ಮಾತಿಗೆ ಪ್ರತಿಕ್ರಿಯಿಸ್ತಾ ಬಿಎಸ್‌ವೈ ಈ ಮಾತನ್ನ ಹೇಳಿದ್ದಾರೆ.