ರೆಬೆಲ್‌ ಕೆಎಸ್‌ ಈಶ್ವರಪ್ಪ ವಾಗ್ದಾಳಿ, ಆರೋಪ ಎದುರಿಸಿದ ಬಿಎಸ್‌ ಯಡಿಯೂರಪ್ಪ, ಬಿವೈ ವಿಜಯೇಂದ್ರ ಅಭಿಪ್ರಾಯವೇನು?

What is the opinion of BS Yeddyurappa and BY Vijayendra, who have been accused by rebel KS Eshwarappa?

ರೆಬೆಲ್‌ ಕೆಎಸ್‌ ಈಶ್ವರಪ್ಪ ವಾಗ್ದಾಳಿ, ಆರೋಪ ಎದುರಿಸಿದ ಬಿಎಸ್‌ ಯಡಿಯೂರಪ್ಪ, ಬಿವೈ ವಿಜಯೇಂದ್ರ ಅಭಿಪ್ರಾಯವೇನು?
KS Eshwarappa, BS Yeddyurappa, BY Vijayendra

shivamogga Mar 17, 2024  KS Eshwarappa, BS Yeddyurappa, BY Vijayendra ಕೆಎಸ್‌ ಈಶ್ವರಪ್ಪನವರ ಬಂಡಾಯಕ್ಕೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು ಈಶ್ವರಪ್ಪ ಸಿಟ್ಟಲ್ಲಿ ಹಾಗೇ ಮಾತಾನಾಡಿದ್ದಾರ, ಪ್ರಧಾನ ನರೇಂದ್ರ  ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುತ್ತಾರೆ. ಅವರು ಕೂಡ ಪಕ್ಷ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲಾ ಸರಿ ಹೋಗುತ್ತದೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ. 

ಅಲ್ಲದೆ ಕೆಎಸ್‌ ಈಶ್ವರಪ್ಪನವರ  ಮಗನಿಗೆ ಟಿಕೆಟ್ ತಪ್ಪಲು ನಾನು ಕಾರಣವಲ್ಲ. ಅದನ್ನು ಚುನಾವಣೆ ಸಮಿತಿ ನಿರ್ಧಾರ ಮಾಡಿರುವುದು ಎಂದು ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.  ನರೇಂದ್ರ  ಮೋದಿಯವರಿಗೆ ಇವತ್ತು ನಾನು ಒಂದು ಮಾತು ಕೊಟ್ಟಿದ್ದೇನೆ 25 ರಿಂದ 26 ಕ್ಷೇತ್ರದಲ್ಲಿ ಗೆದ್ದು ನಿಮ್ಮನ್ನು ನೋಡಲು ನಾನು ಲೋಕಸಭೆ ಬರ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಒಂದೆರಡು ಆಚೆ, ಈಚೆ ಆಗಬಹುದು. ಶಿವಮೊಗ್ಗ ಕ್ಷೇತ್ರದಲ್ಲಿ ಈಗಾಗಲೇ ಗೆದ್ದು ಆಗಿದೆ. ಹೆಚ್ಚಿನ ಅಂತರಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಜನ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದರು. 

ಅವರ ಮನಸ್ಸಿಗೆ ನೋವಾಗಿರಬಹುದು, ರಾಜ್ಯ ನಾಯಕರು ಅವರ ಜೊತೆ ಮಾತನಾಡುವ ಪ್ರಯತ್ನ ನಡೆಸಿದ್ದಾರೆ.  ಮೋದಿ ಅವರು ಬಂದಾಗ ಎಲ್ಲವೂ ಸರಿಯಾಗಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಅವರು ಬರುತ್ತಾರೆ ಎಂದು ತಿಳಿಸಿದ್ದಾರೆ. ಅವರು ವೇದಿಕೆ ಏರಿ ಮಾತನಾಡುವ ವಿಶ್ವಾಸ ಇದೆ ಎಂದಿದ್ದಾರೆ.   

ಇನ್ನೂ ಇದೇ ವಿಚಾರದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ತೀರ್ಮಾನ ಒಪ್ಪಿಕೊಂಡು ಗೌರವಿಸಬೇಕೆಂದು  ಮನವಿ ಮಾಡಿದ್ದಾರೆ.  ಈಶ್ವರಪ್ಪರವರು ಹಿರಿಯರು, ಪಕ್ಷದ ಸಂಘಟನೆಯಲ್ಲಿ ತಮ್ಮದೇ ಕೊಡುಗೆ ನೀಡಿದವರು.ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ವಿಜಯೇಂದ್ರ ಅಲ್ಲ. ಕೇಂದ್ರದ ಪಾರ್ಲಿಮೆಂಟರಿ ಬೋರ್ಡ್. ಪಕ್ಷದ ತೀರ್ಮಾನ ಗೌರವಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಪಕ್ಷದ ಹಿರಿಯ ಮುಖಂಡರು ಈಶ್ವರಪ್ಪ ಜೊತೆ ಸಂಪರ್ಕದಲ್ಲಿದ್ದಾರೆ. ಸಮಾಲೋಚನೆ ನಡೆಸುತ್ತಿದ್ದಾರೆ. ನಮ್ಮ ವರಿಷ್ಠರು ಈಶ್ವರಪ್ಪ ಅವರ ಮನವೊಲಿಸುತ್ತಾರೆ ಎಂದು ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.