ಅಂದು ಬಿವೈ ವಿಜಯೇಂದ್ರ ಪರ ಪ್ರಚಾರ ಮಾಡಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಸಲ ಗೀತಾ ಶಿವರಾಜ್​ ಕುಮಾರ್​ ಪರ ಕ್ಯಾಂಪೇನ್ ಮಾಡ್ತಾರಾ?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 11, 2024  Kichcha Sudeep  ಶಿವಮೊಗ್ಗ ಲೋಕಸಭಾ ಚುನಾವಣೆ ಯಲ್ಲಿ ಸಿನಿಮಾ ರಂಗು ಇರೋದು ನಿಕ್ಕಿ. ಕಾರಣ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿರೋದು ಗೀತಾ ಶಿವರಾಜ್ ಕುಮಾರ್. ಹೀಗಾಗಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಶಿವಣ್ಣ ಪ್ರಚಾರಕ್ಕೆ ಪಕ್ಕಾ ಬರುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯು ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಇದರ ಜೊತೆಗೆ ಇನ್ನಷ್ಟು ಸ್ಟಾರ್​ಗಳು ಬರುತ್ತಾರೆ ಎನ್ನಲಾಗುತ್ತಿದೆ. ಈ ಸಂಬಂಧ ಸಚಿವ ಮಧು ಬಂಗಾರಪ್ಪ ಇವತ್ತು ಸುದ್ದಿಗೋಷ್ಟಿಯಲ್ಲಿ ಸಿನಿಮಾ ಸ್ಟಾರ್​ ಗಳನ್ನು ಪ್ರಚಾರಕ್ಕೆ ಕರೆತರುವ ವಿಚಾರದಲ್ಲಿ ನಾನಿಲ್ಲ. ಆ ವಿಚಾರವನ್ನು ಶಿವಣ್ಣರಿಗೆ ಬಿಟ್ಟಿದ್ದೇನೆ ಎಂದಿದ್ದಾರೆ 

ಪ್ರದೀಪ್ ಈಶ್ವರ್ ಹಾಗೂ ನಿಕೇತ್ ರಾಜ್ ಮೌರ್ಯ ಪ್ರಚಾರಕ್ಕೆ ಬರುತ್ತಾರೆ ಎಂದಿರುವ ಮಧು ಬಂಗಾರಪ್ಪ ನಮ್ಮ ನಾಯಕರು ಸಹ ಪ್ರಚಾರಕ್ಕೆ ಬರುತ್ತಾರೆ. ಶಿವಣ್ಣರ ಜೊತೆಗೆ ಯಾವ ಸ್ಟಾರ್ ನಟರು ಬರುತ್ತಾರೆ ಎಂಬುದು ಶಿವಣ್ಣರಿಗೆ ಬಿಟ್ಟ ವಿಚಾರ ಎಂದಿದ್ದಾರೆ.ಇದರ ನಡುವೆ ಮತ್ತೊಂದು ಅಧಿಕೃತವಲ್ಲದ ಸುದ್ದಿ ಹರಿದಾಡುತ್ತಿದ್ದು ಗೀತಾ ಶಿವರಾಜ್ ಕುಮಾರ್ ಪರವಾಗಿ ಪ್ರಚಾರ ಮಾಡಲು ಶಿವಮೊಗ್ಗದವರೇ ಆದ ಕಿಚ್ಚ ಸುದೀಪ್ ಬರುತ್ತಾರೆ ಎಂಬ ವರದಿಗಳು ಕೆಲವು ಕಡೆ ಬರಲಾರಂಭಿಸಿದೆ.ಈ ಬಗ್ಗೆ ಕಿಚ್ಚ ಸುದೀಪ್ ಅಧಿಕೃತವಾಗಿ ಎಲ್ಲಿಯು ಹೇಳಿಕೆ ಇದುವರೆಗೂ ನೀಡಿಲ್ಲ. 

ಗೀತಾ ಶಿವರಾಜ್ ಕುಮಾರ್​ ಕಾಂಗ್ರೆಸ್ ಪಕ್ಷ ಸೇರಿದಂತಹ ಸಂದರ್ಭದಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್ ಅವರಿಗೆ ಆಲ್​ ದೀ ಬೆಸ್ಟ್ ಹೇಳಿದ್ದರು. ಗೀತಕ್ಕ ನನಗೆ ತುಂಬಾ ಆಪ್ತರು, ಅವರು ತುಂಬಾ ಒಳ್ಳೆಯವರು ಅವರಿಗೆ ಒಳ್ಳೆಯದು ಆಗಬೇಕಿದೆ. ಅವರಿಗೆ ಆಲ್ ದೀ ಬೆಸ್ಟ್ ಹೇಳುತ್ತೇನೆ ಎಂದಷ್ಟೆ ಹೇಳಿದ್ದರು. 

ಇನ್ನೂ ಕಿಚ್ಚ ಸುದೀಪ್ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರರವರ ಪರವಾಗಿ ಪ್ರಚಾರ ಮಾಡಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬಿಜೆಪಿ ಪಕ್ಷದ ವಿರುದ್ಧವಾಗಿ ಪ್ರಚಾರಕ್ಕೆ ಬರುತ್ತಾರಾ ಎಂಬುದು ಕುತೂಹಲದ ಪ್ರಶ್ನೆ. ಆದಾಗ್ಯು ಕೆಲವೊಂದು ಮೀಡಿಯಾಗಳು ಈ ಬಗ್ಗೆ ವರದಿ ಮಾಡುತ್ತಿದೆ. ಕಿಚ್ಚು ಸುದೀಪ್ ಮಾತ್ರ ತಮ್ಮ ಟ್ವಿಟ್ಟರ್​ ಅಕೌಂಟ್​ನಲ್ಲಿ ಮ್ಯಾಕ್ಸ್​ ಸಿನಿಮಾದ ಕ್ಲೈಮ್ಯಾಕ್ಸ್​ ಬಗ್ಗೆ ಅಷ್ಟೆ ಪ್ರತಿಕ್ರಿಯಿಸ್ತಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor