ವಿಜಯೇಂದ್ರರವರ ಗೆಲುವಿಗೆ ಕಾರಣವಾಗಿದ್ದ ಅಂಶಗಳೇನು? ಬಿಜೆಪಿ ಶಿಕಾರಿಗೆ ನೆರವಾಯ್ತಾ ಜೆಡಿಎಸ್​ ಮತಗಳು?

Malenadu Today

KARNATAKA NEWS/ ONLINE / Malenadu today/ May 15, 2023 GOOGLE NEWS / SHIVAMOGGA NEWS 

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ, ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ರೂ ಅದು ಗೆಲುವೇ… ಇದು ಪ್ರಜಾಪ್ರಬುತ್ವದ ವಿಶೇಷ. ಆದಾಗ್ಯು ಕಡಿಮೆ ಅಂತರ ಬೇಸರ ಮೂಡಿಸಿದೆ ಎಂದು ಬಿವೈ ವಿಜಯೇಂದ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಈ ಮಧ್ಯೆ ಅವರ ಗೆಲುವಿನ ಲೆಕ್ಕಾಚಾರಗಳು ಸಹ ಶಿಕಾರಿಪುರದಲ್ಲಿ ಜೋರಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಒಡ್ಡಿದ ತೀವ್ರ ಪೈಪೋಟಿ. 

ವಿಶೇಷವಾಗಿ  ಬಿ.ವೈ ವಿಜಯೇಂದ್ರರ ಗೆಲುವಿಗೆ ಅಂತಿಮ ಸ್ಪರ್ಶ ನೀಡಿದ್ದು ಹೆಚ್ ಟಿ ಬಳಿಗಾರ್ ವೈಯಕ್ತಿಕ ವರ್ಚಸ್ಸಿನ ಮತಗಳು ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

ಬಳಿಗಾರ್ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗ ಹದಿನಾರು ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯಿದ್ದರು. ಜೆಡಿಎಸ್ ಪಕ್ಷದಿಂದ ಬಿಜೆಪಿ ಸೇರಿದ ಬಳಿಗಾರ್ ವಿಜಯೇಂದ್ರಗೆ  ಸಾರಥಿಯಾಗಿಯೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.

ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧಿಸಿದಾಗ, ಎದುರಾಳಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಅನುಕಂಪದ ಮತಭೇಟೆಯಲ್ಲಿ ಸಾಕಷ್ಟು ಮತದಾರರನ್ನು ಸೆಳೆದಿದ್ದರು. 

ಕ್ಷೇತ್ರದಲ್ಲಿ ಎಲ್ಲಿ ಹೋದರೂ ಅವರ ಚುನಾವಣೆ ಸ್ಪರ್ಧೆಯ ಚಹ್ನೆ ಟ್ರಾಕ್ಟರ್ ಓಡುತ್ತಿತ್ತು.  ಮತಗಳು ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಿತ್ತು. ಆಗ ಟ್ರಬಲ್ ಶೂಟರ್ ಆಗಿ ವಿಜಯೇಂದ್ರ ಬೆನ್ನಿಗೆ ನಿಂತವರು ಬಳಿಗಾರ್. 

ತಮ್ಮ ವೈಯಕ್ತಿಕ ಮತ ಬ್ಯಾಂಕ್ ನನ್ನು ವಿಜಯೇಂದ್ರರಿಗೆ ಸಾರಸಗಟಾಗಿ ಡೈವರ್ಟ್ ಮಾಡುವಲ್ಲಿ ಬಳಿಗಾರ್ ಯಶಸ್ವಿಯಾಗಿದ್ದರು. ಎಸ್ಸಿ ಎಸ್ಟಿ ಓಬಿಸಿ ಮತಗಳು ನಾಗರಾಜ್ ಗೌಡರ ಪರ ವಾಲದಂತೆ ಮಾಡಿದ್ರು.

 ಇದರಲ್ಲಿ ಬಹುತೇಕ ಮತಗಳು ಬಿ.ವೈ ವಿಜಯೇಂದ್ರಗೆ ಶ್ರೀರಕ್ಷೆಯಾಗಿತ್ತು. ಒಟ್ಟು 19 ಸುತ್ತಿನ ಮತ ಎಣಿಕೆಯಲ್ಲಿ ಬಿ.ವೈ ವಿಜಯೇಂದ್ರ 11008 ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡರ ಎದುರು ಗೆಲ್ಲುವಂತೆ ಮಾಡಿತು.

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media

Share This Article