ಬೆಂಗಳೂರು ಬಿಟ್ಟು ಬೇರೆ ಊರುಗಳಿಗೂ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹಾರಲಿದೆ ಹೊಸ ಹೊಸ ಪ್ಲೈಟ್!

ಹಂಚಿಕೊಳ್ಳಿ
WhatsApp Facebook X Telegram
pilot training
pilot training ಶಿವಮೊಗ್ಗದಲ್ಲಿ ಸಿಗಲಿದೆ ಪೈಲಟ್​ ತರಬೇತಿ

 Shivamogga airport new plan / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಏರ್​ಪೋರ್ಟ್​ ವಾರಕ್ಕೆ ಒಂದು ಸಲ ಆದರೂ ಸುದ್ದಿ ಆಗುತ್ತಿರುತ್ತದೆ. ಈಗಾಗಲೇ ಬೆಂಗಳೂರು ಪ್ಲೈಟ್​ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತಷ್ಟೆ ಅಲ್ಲದೆ, ಏರ್​ಪೋರ್ಟ್​ನ್ನೆ ಖಾಸಗಿಯವರಿಗೆ ನೀಡುವ ಪ್ರಸ್ತಾವನೆಯ ಬಗ್ಗೆ ವರದಿಗಳಾಗಿದ್ದವು. ಇದರ ನಡುವೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ನೊಂದಿಷ್ಟು ಹೊಸ ಪ್ಲೈಟ್​ಗಳು ಹಾರಲಿವೆ ಅಂತಾ ತಿಳಿಸಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿಯೇ ಮಾತನಾಡಿರುವ ಅವರು, ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ನೈಟ್ ಲ್ಯಾಂಡಿಂಗ್ ಕೆಲಸ ಶೇಕಡಾ 85 ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್ ಎರಡನೇ ವಾರದ ವೇಳೆಗೆ ಫಿನಿಶ್ ಆಗಲಿದೆ.

ಮುಂಬರುವ ಅಕ್ಟೋಬರ್ ತಿಂಗಳಿನಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟ ಪುನರಾರಂಭಿಸಲು ಸ್ಟಾರ್ ಏರ್ ಸಂಸ್ಥೆ ಆಸಕ್ತಿ ತೋರಿದೆ. ಇದರ ಜೊತೆಗೆ ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಸಂಸ್ಥೆಗಳೊಂದಿಗೂ ಮಾತುಕತೆ ನಡೆಯುತ್ತಿದೆ.

ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ಶಿವಮೊಗ್ಗದಿಂದ ಮುಂಬೈ, ಅಹಮದಾಬಾದ್, ಕೊಲ್ಲಾಪುರ, ಪುಣೆ ಮತ್ತು ಮೈಸೂರು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತಾ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor