Unnatural Monkey Deaths / ಮಲೆನಾಡು ಟುಡೆ ಸುದ್ದಿ / ಹೊಸನಗರ / ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳ ಅಸಹಜ ಸಾವಿನ ಸರಣಿ ಮುಂದುವರಿದಿದೆ ಎಂಬ ವರದಿ ಸ್ಥಳೀಯಿರಿಂದ ಲಭ್ಯವಾಗಿದೆ. ಅಲ್ಲದೆ ಇದು ಆತಂಕಕ್ಸೃಕೆ ಕಾರಣವಾಗಿದೆ. ಹೀಗೆ ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಮಂಗಗಳು ಸರಣಿ ಸಾವಿನ ಸುದ್ದಿ ವರದಿಯಾಗಿತ್ತು. ಇದೀಗ ಎರಡು ದಿನಗಳ ಹಿಂದೆ ಮತ್ತೊಂದು ಮಂಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಇನ್ನೂ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಈ ಬಗ್ಗೆ ರಾಜ್ಯ ಪತ್ರಿಕೆಯಲ್ಲಿ ಬಂದಿರುವ ವರದಿಯ ಪ್ರಕಾರ, ಈ ಹಿಂದೆ ಮಂಗಗಳ ಸಾವಿನ ಪ್ರಕರಣಗಳಲ್ಲಿ, ಅವುಗಳ ಕಳೆಬರ ತಡವಾಗ ಸಿಕ್ಕಿದ್ದಕ್ಕಾಗಿ ಹಾಗೂ ಕೊಳೆತಿದ್ದರಿಂದ ಅವುಗಳ ಮಾದರಿ ಪರೀಕ್ಷೆ ಸಾಧ್ಯವಾಗಿರಲಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿತ್ತಷ್ಟೆ ಅಲ್ಲದೆ ಜ್ವರ ಪೀಡಿತರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿತ್ತು. ಆ ವರದಿಗಳಲ್ಲಿ ಯಾರಿಗೂ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ದೃಢಪಟ್ಟಿರಲಿಲ್ಲ.
ಆದರೆ, ಈ ಬಾರಿ ಸಾವನ್ನಪ್ಪಿರುವ ಮಂಗದ ಶವದಿಂದ ಮಾದರಿ ಸಂಗ್ರಹಿಸಲಾಗಿದ್ದು, ಪರಿಶೀಲನೆಗಾಗಿ ಕೆಎಫ್‌ಡಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾವು ಅಸಹಜವಾಗಿರುವ ಹಿನ್ನೆಲೆಯಲ್ಲಿ ರಾಸಾಯನಿಕ ಪ್ರಯೋಗಾಲಯಕ್ಕೂ ಮಾದರಿ ರವಾನಿಸಲಾಗಿದೆ. ಹೀಗಾಗಿ ಸದ್ಯದಲ್ಲಿ ಮಂಗಗಳ ಅಸಹಜ ಸಾವಿಗೆ ಕಾರಣ ಸಿಗುವ ಸಾಧ್ಯತೆ ಇದೆ.
