ಹೊಸನಗರ : ತೋಟದಲ್ಲಿ ಸೋಗೆ ಆರಿಸ್ತಿದ್ದ ಮಹಿಳೆಗೆ ಕಚ್ಚಿದ ನಾಗರಹಾವು!

ಹಂಚಿಕೊಳ್ಳಿ
WhatsApp Facebook X Telegram
sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations
sagara police Three Bodies Found in Three Separate Locations

ಸುದ್ದಿಯ ಸ್ಥಳ: Hosanagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಹೊಸನಗರ / ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಡಿದ ಪರಿಣಾಮ ಮಹಿಳೆ ಮೃತಪಟ್ಟಘಟನೆ ತಾಲೂಕಿನ ನಗರ ಸಮೀಪದ ಕಟ್ಟಿಕೊಪ್ಪ ಗ್ರಾಮದ ದೊಡ್ಡಿಮನೆಯಲ್ಲಿ ಮಂಗಳವಾರ ನಡೆದಿದೆ. ಶ್ರೀಲತಾ(56) ಮೃತಪಟ್ಟವರು.

ತಮ್ಮ ಪತಿಯೊಂದಿಗೆ ಅಡಕೆ ತೋಟದಲ್ಲಿ ಬಿದ್ದಿದ್ದ ಅಡಕೆ ಹಾಗೂ ಸೋಗೆಗಳನ್ನು ಆರಿಸುತ್ತಿದ್ದ ವೇಳೆ ಕೈಬೆರಳಿಗೆ ನಾಗರ ಹಾವು ಕಡಿಯಿತು. ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯ ಪತಿ ಡಿ.ವಿ.ನಾಗರಾಜ್ ನೀಡಿದ ದೂರಿನ ಮೇರೆಗೆ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor