ಆಫರ್ ಸಿಮ್ ಹೆಸರಿನಲ್ಲಿ ಇಬ್ಬರಿಗೆ ವಂಚನೆ; ಡಿಟೇಲ್ಸು, ರೆಕಾರ್ಡ್ಸು ಹೀಗೆ ಹೋಗೋದು ಅವರ ಕೈಗೆ! ಓದಿ ನೋಡಿ!

ಹಂಚಿಕೊಳ್ಳಿ
WhatsApp Facebook X Telegram
Shivamogga Power Cable Theft bhadravati
Shivamogga Power Cable Theft bhadravati

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಆಫರ್‌ನಲ್ಲಿ ಸಿಮ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಗೃಹಿಣಿ ಹಾಗೂ ಕಾರ್ಪೆಂಟರ್‌ ಒಬ್ಬರಿಂದ ವೈಯಕ್ತಿಕ ದಾಖಲೆಗಳು ಮತ್ತು ಫೋಟೊಗಳನ್ನು ಪಡೆದು, ಅವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಸೈಬರ್ ವಂಚಕರಿಗೆ ನೀಡಿರುವ ಪ್ರಕರಣ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಭದ್ರಾವತಿಯಲ್ಲಿ 30 ವರ್ಷದ ಗೃಹಿಣಿ ಹಾಗೂ ಕಾರ್ಪೆಂಟರ್‌ ವೃತ್ತಿ ಮಾಡುತ್ತಿರುವ ಪುರುಷನಿಗೆ ಪ್ರತ್ಯೇಕ ವ್ಯಕ್ತಿಗಳು ಆಫರ್ ಸಿಮ್ ಕಾರ್ಡ್ ಕೊಡಿಸುವುದಾಗಿ ನಂಬಿಸಿದ್ದರು. ಈ ನೆಪದಲ್ಲಿ ಇಬ್ಬರಿಂದಲೂ ವೈಯಕ್ತಿಕ ಮಾಹಿತಿ, ಅಗತ್ಯ ದಾಖಲೆಗಳು ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಿದ್ದರು. ದಾಖಲೆಗಳನ್ನು ಪಡೆದ ಬಳಿಕ ಅವುಗಳನ್ನು ಬಳಸಿಕೊಂಡು ಇಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಲಾಗಿತ್ತು. ಆದರೆ, ಸಂಬಂಧಪಟ್ಟವರಿಗೆ ಸಿಮ್ ಕಾರ್ಡ್‌ಗಳನ್ನು ನೀಡದೆ ಬೇರೆ ಬೇರೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲಾಗಿತ್ತು.

ಒಬ್ಬರಿಗೆ ಸಿಮ್ ಕಾರ್ಡ್ ಡೆಡ್ ಆಗಿದೆ ಎಂದು ತಿಳಿಸಿದ್ದರೆ, ಮತ್ತೊಬ್ಬರಿಗೆ ಸಿಮ್ ಕಾರ್ಡ್ ನೀಡಲು ಸಾಧ್ಯವಿಲ್ಲ ಎಂಬ ಸಬೂಬು ನೀಡಲಾಗಿತ್ತು. ಇದರಿಂದ ಇಬ್ಬರಿಗೂ ತಮ್ಮ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಿರುವ ವಿಚಾರ ಆರಂಭದಲ್ಲಿ ತಿಳಿದಿರಲಿಲ್ಲ.ಕೆಲವು ದಿನಗಳ ಬಳಿಕ ಅನುಮಾನಗೊಂಡ ಇಬ್ಬರೂ ಸಂಬಂಧಪಟ್ಟ ಮೊಬೈಲ್ ಸೇವಾ ಕಂಪನಿಯ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ದಾಖಲೆಗಳು ಮತ್ತು ಫೋಟೊಗಳನ್ನು ಬಳಸಿಕೊಂಡು ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿರುವುದು ಗೊತ್ತಾಗಿದೆ.

ಅಷ್ಟೇ ಅಲ್ಲದೆ, ಅವರ ದಾಖಲೆಗಳ ಆಧಾರದಲ್ಲಿ ಖರೀದಿಸಿದ್ದ ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚಕರಿಗೆ ನೀಡಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಆಫರ್ ಸಿಮ್ ನೀಡುವುದಾಗಿ ನಂಬಿಸಿ ಸಂಗ್ರಹಿಸಿದ್ದ ವೈಯಕ್ತಿಕ ಮಾಹಿತಿಯನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದು ಪ್ರಕರಣದಿಂದ ತಿಳಿದುಬಂದಿದೆ.ಈ ಕುರಿತು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ದಾಖಲೆಗಳನ್ನು ಪಡೆದು ಸಿಮ್ ಕಾರ್ಡ್ ಖರೀದಿಸಿದ ವ್ಯಕ್ತಿಗಳು ಹಾಗೂ ಅವುಗಳನ್ನು ಸೈಬರ್ ವಂಚಕರಿಗೆ ನೀಡಿರುವ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor