ಟೋಯಿಂಗ್ ವೆಹಿಕಲ್ ಕೇಸ್, ₹2.45 ಲಕ್ಷ ಮರುಪಾವತಿ, ₹55 ಸಾವಿರ ಪರಿಹಾರ! ಹೀಗೆ ಆಗೋದು ಏಕೆ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
consumer court shivamogga malenadutoday image
consumer court shivamogga malenadutoday image

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಟೋಯಿಂಗ್ ವಾಹನವಾಗಿ ಮಾರ್ಪಾಡು ಮಾಡಿಕೊಡುವ ವಹಿವಾಟಲ್ಲಿ ಒಪ್ಪಂದದಂತೆ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಸೇವಾ ನ್ಯೂನತೆ ಎಸಗಿದ ಪ್ರಕರಣದಲ್ಲಿ, ದೂರುದಾರರಿಗೆ ₹2,45,000 ಮರುಪಾವತಿಸುವುದರ ಜೊತೆಗೆ ₹55,000 ಪರಿಹಾರ ಹಾಗೂ ದೂರಿನ ವೆಚ್ಚ ಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರತಿವಾದಿಗೆ ಆದೇಶಿಸಿದೆ.

ಏನಿದು ಪ್ರಕರಣ

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ರವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. ಶಿವಮೊಗ್ಗದ ವಿದ್ಯಾನಗರ ನಿವಾಸಿ ಸಿ. ರಘು ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ವಾಯುಪುತ್ರ ಟೋಯಿಂಗ್ ಸರ್ವೀಸ್‌ನ ಪ್ರದೀಪ್ ಕೆ.ಆರ್. ಅವರ ವಿರುದ್ಧ ಸೇವಾ ನ್ಯೂನತೆಯ ದೂರು ದಾಖಲಿಸಿದ್ದರು.

ದೂರುದಾರರಾದ ಸಿ. ರಘು ಅವರು ತಮ್ಮ ವಾಹನವನ್ನು ಟೋಯಿಂಗ್ ವೆಹಿಕಲ್ ಆಗಿ ಮಾರ್ಪಾಡು ಮಾಡಿಸಿಕೊಳ್ಳಲು ಪ್ರದೀಪ್ ಕೆ.ಆರ್. ಅವರೊಂದಿಗೆ ₹2,45,000ಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ 2024ರ ಡಿಸೆಂಬರ್‌ನಲ್ಲಿ ವಾಹನವನ್ನು ಮಾರ್ಪಾಡು ಕಾರ್ಯಕ್ಕಾಗಿ ಪ್ರತಿವಾದಿಗೆ ಹಸ್ತಾಂತರಿಸಿದ್ದರು. ಒಪ್ಪಂದದಂತೆ ವೆಹಿಕಲ್ ಕನ್​ವರ್ಟ್ ಮಾಡಿ 2025ರ ಮಾರ್ಚ್‌ನಲ್ಲಿ ಓನರ್​ಗೆ ನೀಢಿದ್ರು. ಆದರೆ ವೆಹಿಕಲ್​ನ ಹೈಡ್ರಾಲಿಕ್ ಮಿಷನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಅನುಮಾನ ಗೊಂಡ ಓನರ್​, ವೆಹಿಕಲ್​ಗೆ ಹಳೆಯ ಪಾರ್ಟ್​ಗಳನ್ನ ಹಾಕಿರುವುದು ಗೊತ್ತಾಗಿದೆ. ಇದನ್ನ ಸರಿಪಡಿಸಿ ಕೊಡುವಂತೆ ವೆಹಿಕಲ್ ರಿಪೇರಿಯವರಿಗೆ ಸೂಚಿಸಿದ್ರು. ಆದರೆ ಅವರು ರಿಪೇರಿ ಮಾಡಿಕೊಡದ ಹಿನ್ನೆಲೆಯಲ್ಲಿ, ಖುದ್ದಾಗಿ ರಿಪೇರಿ ಮಾಡಿಸಿಕೊಂಡು ಗ್ರಾಹಕ ಆಯೋಗದಲ್ಲಿ ಕಂಪ್ಲೆಂಟ್ ಮಾಡಿದ್ದರು.

ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದೂರುದಾರರು ಸಲ್ಲಿಸಿದ್ದ ದಾಖಲೆಗಳನ್ನು ಆಯೋಗ ಪರಿಶೀಲಿಸಿತು. ಪ್ರತಿವಾದಿಯು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಏಕಪಕ್ಷೀಯವಾಗಿ ಪರಿಗಣಿಸಿ, ಲಭ್ಯವಿದ್ದ ದಾಖಲೆಗಳ ಆಧಾರದಲ್ಲಿ ಆಯೋಗವು ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, ವಾಹನ ಮಾರ್ಪಾಡಿಗಾಗಿ ಪಡೆದಿದ್ದ ₹2,45,000 ಮೊತ್ತವನ್ನು ಪ್ರತಿವಾದಿಯು ದೂರುದಾರರಿಗೆ ಮರುಪಾವತಿಸಬೇಕು. ಈ ಮೊತ್ತಕ್ಕೆ 2025ರ ಸೆಪ್ಟೆಂಬರ್ 27ರಿಂದ ವಾರ್ಷಿಕ ಶೇ. 8ರ ಬಡ್ಡಿಯನ್ನು ಸೇರಿಸಿ, ಆದೇಶ ಹೊರಡಿಸಿದ ದಿನದಿಂದ 45 ದಿನಗಳೊಳಗೆ ಪಾವತಿಸಬೇಕು ಎಂದು ಆಯೋಗ ನಿರ್ದೇಶಿಸಿದೆ.

ನಿಗದಿತ 45 ದಿನಗಳ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ವಾರ್ಷಿಕ ಶೇ. 10ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೇವಾ ನ್ಯೂನತೆಯಿಂದ ದೂರುದಾರರಿಗೆ ಉಂಟಾದ ತೊಂದರೆಗೆ ಪರಿಹಾರವಾಗಿ ₹50,000 ಹಾಗೂ ದೂರು ದಾಖಲಿಸಿ ವಿಚಾರಣೆ ನಡೆಸಲು ತಗುಲಿದ ಖರ್ಚು ವೆಚ್ಚಕ್ಕಾಗಿ ₹5,000 ಪಾವತಿಸುವಂತೆಯೂ ಆಯೋಗ ಆದೇಶಿಸಿದೆ. ಈ ಮೊತ್ತಗಳಿಗೂ ವಾರ್ಷಿಕ ಶೇ. 8ರ ಬಡ್ಡಿ ಪಾವತಿಸಲು ನಿರ್ದೇಶನ ನೀಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor