Sirsi Bus Stand / ಮಲೆನಾಡು ಟುಡೆ ಸುದ್ದಿ / ಶಿರಸಿ / ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ತನ ಪ್ರಕರಣವನ್ನು ಅಲ್ಲಿನ ಭೇದಿಸಿದ್ದಾರೆ. ಅಷ್ಟೆಅಲ್ಲದೆ ಈ ಪ್ರಕರಣ ಶಿವಮೊಗ್ಗ ಹಾಗೂ ದಾವಣಗೆರೆ ಮೂಲದ ಇಬ್ಬರು ಮಹಿಳೆಯರನ್ನ ಅರೆಸ್ಟ್ ಮಾಡಿದ್ದಾರೆ.
ಶಿವಮೊಗ್ಗ ಮೂಲದ 39 ವರ್ಷದ ಮಹಿಳೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ 36 ವರ್ಷದ ಮಹಿಳೆ ಬಂಧಿತ ಆರೋಪಿಗಳು, ಬಸ್ ನಿಲ್ದಾಣದಲ್ಲಿ ಜನಜಂಗುಳಿ ನೋಡಿಕೊಂಡು ಮಹಿಳೆಯರ ವಾನಿಟಿ ಬ್ಗಾಗ್ನಲ್ಲಿರುವುದನ್ನ ಕಳ್ಳತನ ಮಾಡುತ್ತಿದ್ದ ಇವರು ಇತ್ತೀಚೆಗೆ ನಡೆದ ಕ್ರೈಂ ಒಂದರಲ್ಲಿ ಭಾಗಿಯಾಗಿದ್ದರು.
ಮಹಿಳೆಯೊಬ್ಬರ ಬ್ಯಾಗ್‌ನಿಂದ 3.52 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್, ಹಾರ, ಉಂಗುರ ಹಾಗೂ ಬೆಳ್ಳಿ ನಾಣ್ಯ ಕಳವು ಮಾಡಿದ್ರು. ಈ ಸಂಬಂಧ ಶಿರಸಿ ನಗರ ಪೊಲೀಸರು, ವಿಶೇಷ ತನಿಖಾ ತಂಡ ಫಾರ್ಮ್ ಮಾಡಿ ಆಕ್ಷನ್ಗೆ ಇಳದಿದ್ದರು.
ಇದೀಗ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 50 ಗ್ರಾಂ ತೂಕದ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ನರಸಿಂಹಲು ಟಿ. ಹಾಗೂ ನಾರಾಯಣ ರಾಠೋಡ ನೇತೃತ್ವದ ಸಿಬ್ಬಂದಿ ತಂಡವು ಈ ಕಾರ್ಯಾಚರಣೆಯನ್ನು ಅತ್ಯಂತ ಚಾಕಚಕ್ಯತೆಯಿಂದ ನಡೆಸಿದೆ.
