ಮನೆಯಲ್ಲಿ ನೇಣಿಗೆ ಶರಣಾದ ರತ್ನಾ! ಗೃಹಿಣಿಗೆ ಸಾವಿಗೆ ಕಾರಣ ನಿಗೂಢ! ಕಡೂರಲ್ಲಿ ಬೈಕಿಂದ ಬಿದ್ದು ದುರ್ಮರಣ!

ಹಂಚಿಕೊಳ್ಳಿ
WhatsApp Facebook X Telegram
MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

malnad morning news today / ಮಲೆನಾಡು ಟುಡೆ ಸುದ್ದಿ / ಸಾಗರ / ತಾಲ್ಲೂಕಿನ ಅವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳೂರು ಗ್ರಾಮದಲ್ಲಿ ಗೃಹಿಣಿಯೊಬ್ಬರು ಮನೆಯಲ್ಲಿ ಸಾವಿಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ದಿನ ಭಾನುವಾರ, ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರತ್ನಾ ದೇವರಾಜ್ (37) ಮೃತರು. ಯಾವ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ನಿಂದ ಬಿದ್ದು ಗಾಯಗೊಂಡಿದ್ದ ಕಂಸಾಗರ ಗ್ರಾಮದ ವೃದ್ಧ ಆಸ್ಪತ್ರೆಯಲ್ಲಿ ಸಾವು

ಮಲೆನಾಡು ಟುಡೆ ಸುದ್ದಿ / ಕಡೂರು / ರಸ್ತೆಗೆ ಅಡ್ಡಲಾಗಿ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ ಸ್ಕೂಟರ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಲ್ಲೂಕಿನ ಕಂಸಾಗರ ಗ್ರಾಮದ ನಿವಾಸಿ ಕೆಂಚಪ್ಪ (82) ಮೃತಪಟ್ಟವರು. ಜುಲೈ 31 ರಂದು ಕಂಸಾಗರದಿಂದ ಕಡೂರು ಪಟ್ಟಣದ ಕಡೆಗೆ ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅ ಬಳಿಕ ಗಾಯಾಳು ಕೆಂಚಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚಿಕ್ಕಮಗಳೂರು ಹಾಗೂ ಆನಂತರ ಬೆಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಪಾರ್ವತಮ್ಮ ಅವರು ನೀಡಿದ ದೂರಿನ ಆಧಾರದ ಮೇಲೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor