ಶಿವಮೊಗ್ಗಕ್ಕೆ ಯೋಧನ ಆಗಮನ, ಶೌರ್ಯ ಆನೆ ದುರ್ಮರಣ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ತ್ಯಾವರೆಕೊಪ್ಪ ಲಯನ್ ಸಫಾರಿಯಲ್ಲಿ 4 ಸಿಂಹದ ಮರಿಗಳ ಸಾವು: ಆಡಳಿತ ಮಂಡಳಿಯ ನಿರ್ಲಕ್ಷ್ಯದ ಶಂಕೆ?

ಶಿವಮೊಗ್ಗ:ನಗರದ ಹೊರವಲಯದ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಸೆಪ್ಟೆಂಬರ್ 16 ರಂದು ಜನಿಸಿದ್ದ 4 ಏಷ್ಯಾಟಿಕ್ ಸಿಂಹದ ಮರಿಗಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ತರಲಾಗಿದ್ದ 5 ವರ್ಷದ ‘ಸಾರಾ’ ಎಂಬ ಸಿಂಹಿಣಿ ಒಂದೇ ಹೆರಿಗೆಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಜನಿಸಿದ 24 ಗಂಟೆಯೊಳಗೆ ನಾಲ್ಕೂ ಮರಿಗಳು ಸಾವನ್ನಪ್ಪಿದ್ದು, ಈ ವಿಚಾರವನ್ನು ಮೃಗಾಲಯದ ಆಡಳಿತ ಮಂಡಳಿ ಮುಚ್ಚಿಟ್ಟಿರುವುದು ತೀವ್ರ ಅನುಮಾನಗಳಿಗೆ ಕಾರಣವಾಗಿದೆ.

ಸಿಂಹಿಣಿಗೆ ಇದು ಮೊದಲ ಹೆರಿಗೆಯಾಗಿದ್ದರಿಂದ ಮರಿಗಳನ್ನು ಆರೈಕೆ ಮಾಡುವ ಅರಿವಿರಲಿಲ್ಲ, ಹಾಲುಣಿಸಲಿಲ್ಲ ಹಾಗೂ ಮರಿಗಳು ದುರ್ಬಲವಾಗಿದ್ದವು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ, ಸಿಂಹಿಣಿ ಗರ್ಭಿಣಿಯಾಗಿದ್ದ ವಿಷಯವೇ ವೈದ್ಯರಿಗೆ ತಿಳಿದಿರಲಿಲ್ಲವೇ?, ತುರ್ತು ಆರೈಕೆ (Hand-rearing/Incubator) ಹಾಗೂ ಪ್ರತ್ಯೇಕ ‘CCTV Den Box’ ವ್ಯವಸ್ಥೆಯನ್ನು ಏಕೆ ಮಾಡಲಿಲ್ಲ? ಎಂಬ ಪ್ರಶ್ನೆಗಳು ಎದ್ದಿವೆ. ಸಫಾರಿಯೊಳಗೆ ನಿಗೂಢತೆ ಕಾಯ್ದುಕೊಳ್ಳಲಾಗುತ್ತಿದ್ದು, ಈ ಪ್ರಕರಣದ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

ಭಾರತ್ ಜೋಡೋ ಯಾತ್ರೆ 2.0

ಪಿ ಡಿ ಎಫ್​​ನಲ್ಲಿರುವ ಪ್ರಮುಖ 5 ಸುದ್ದಿಗಳು 

  1. ಸಕ್ರೆಬೈಲು ಬಿಡಾರದ ‘ಶೌರ್ಯ’ ಆನೆ ದುರ್ಮರಣ:ಹಿಂಬದಿ ಕಾಲಿನ ತೀವ್ರ ಗಾಯ ಹಾಗೂ ಸೋಂಕಿನಿಂದ (Septic Shock) ಬಳಲುತ್ತಿದ್ದ ಸಕ್ರೆಬೈಲು ಆನೆ ಬಿಡಾರದ ‘ಶೌರ್ಯ’ ಎಂಬ ಆನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಇದರಿಂದ ಬಿಡಾರದಲ್ಲಿರುವ ಆನೆಗಳ ಸಂಖ್ಯೆ 23ಕ್ಕೆ ಇಳಿಕೆಯಾಗಿದೆ.
  2. 24 ವರ್ಷಗಳ ಸೇನಾ ಸೇವೆ ಮುಗಿಸಿ ತವರಿಗೆ ಮರಳಿದ ಯೋಧನಿಗೆ ಭವ್ಯ ಸ್ವಾಗತ:
    ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಕಾರ್ಯಾಚರಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, 24 ವರ್ಷಗಳ ಸುದೀರ್ಘ ಸೇನಾ ಸೇವೆಯಿಂದ ನಿವೃತ್ತರಾದ ಎಸಿಪಿ ನಾಯರ್ ಸುಬೇದಾರ್ ವಿಜಯ್ ಕುಮಾರ್ ಜಿ. ಅವರನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸ್ನೇಹಿತರ ಬಳಗ ಹಾಗೂ ಸಾರ್ವಜನಿಕರು ಕೋಲಾಹಲದಿಂದ ಬರಮಾಡಿಕೊಂಡರು.
  3. ಗೃಹಲಕ್ಷ್ಮಿ ಹಣವನ್ನು ಸಾಲದ ಕಂತಿಗೆ ಕಡಿತಗೊಳಿಸದಂತೆ ಸಿಎಂ ಕಟ್ಟುನಿಟ್ಟಿನ ಆದೇಶ:
    ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ₹2,000 ಹಣವನ್ನು ಬ್ಯಾಂಕ್‌ಗಳು ಅಥವಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲದ ಕಂತು/ಬಡ್ಡಿಗೆ ಕಡಿತ ಮಾಡಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
  4. ಕೂಡಲಿ ಮಠದ ‘ನಾಪತ್ತೆಯಾಗಿದ್ದ’ ಚಿನ್ನದ ಪಾದುಕೆ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆ!:
    ಕಳೆದ 2 ವರ್ಷಗಳಿಂದ ಕಳ್ಳತನವಾಗಿದೆ ಎಂದು ಭಾವಿಸಲಾಗಿದ್ದ ಕೂಡಲಿ ಮಠದ 400 ಗ್ರಾಂ ತೂಕದ ಚಿನ್ನದ ಪಾದುಕೆಗಳು ಕಳ್ಳತನವಾಗಿಲ್ಲ; ಅವು ಶಿವಮೊಗ್ಗದ ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿರುವುದು ಹೊಳೆಹೊನ್ನೂರು ಪೊಲೀಸರ ಸುದೀರ್ಘ ತನಿಖೆಯಿಂದ ಪತ್ತೆಯಾಗಿದೆ.
  5. ಶಿವಮೊಗ್ಗದ ಹೋಟೆಲ್‌ಗಳು ಹಾಗೂ ಕಾಂಡಿಮೆಂಟ್ಸ್‌ಗಳ ಮೇಲೆ ಎಸಿ ದಾಳಿ:
    ಆಹಾರದ ಕಳಪೆ ಗುಣಮಟ್ಟದ ದೂರುಗಳ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್. ಮೈತ್ರಿ ನೇತೃತ್ವದಲ್ಲಿ ನಗರದ ಪ್ರಮುಖ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಅವಧಿ ಮೀರಿದ ವಸ್ತುಗಳು, ಕೃತಕ ಬಣ್ಣ ಹಾಗೂ ಕಳಪೆ ಅಡುಗೆ ಎಣ್ಣೆ ಬಳಸಿರುವುದು ಕಂಡುಬಂದಿದ್ದು, ಸೂಕ್ತ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಈ ಮೇಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರ (ಇ-ಲಿಂಕ್​​) ನಲ್ಲಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor