ಕೆಎ 20 ರಿಜಿಸ್ಟ್ರೇಷನ್​ನ ಕಾರಿನ ಹಿಂದೆ ಬಿದ್ದ 2 ಸ್ಟೇಷನ್​ನ ಪೊಲೀಸರು! ನಡೆದ ಪೂರ್ತಿ ಕಾರ್ಯಾಚರಣೆಯ ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Ripponpet Police Chase Cow Thieves for 100 km, Seize Car as Suspects Escape into Forest.
Ripponpet Police Chase Cow Thieves for 100 km, Seize Car as Suspects Escape into Forest.

Ripponpet Police Chase / ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆಯಲ್ಲಿ ಗೋಕಳ್ಳರ ಚೇಸಿಂಗ್​ ಪ್ರಕರಣವೊಂದು ವರದಿಯಾಗಿದೆ. ಸಿನಿಮಾ ಸ್ಟೈಲ್​ನಲ್ಲಿ ನಡೆದ ಘಟನೆಯ ರಿಪೋರ್ಟ್ ಅಲ್ಲಿನ ವರದಿಗಾರ ರಫಿ ರಿಪ್ಪನ್​ ಪೇಟೆ ಮಲೆನಾಡು ಟುಡೆಗೆ ನೀಡಿದ್ದಾರೆ.

ನಿನ್ನೆ ಗುರುವಾರ ಈ ಘಟನೆ ನಡೆದಿದ್ದು, ಗೋವು ಕಳ್ಳರನ್ನು ಬೆನ್ನಟ್ಟಿದ ಪೊಲೀಸರು, ಕೃತ್ಯಕ್ಕೆ ಬಳಸುತ್ತಿದ್ದ ಕಾರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆರೋಪಿಗಳು ಬೆನವಳ್ಳಿ ಅರಣ್ಯ ಪ್ರದೇಶದಲ್ಲಿ ಪರಾರಿಯಾಗಿದ್ದಾರೆ.

ಈ ಹಿಂದಿನ ಕೆಲವು ಗೋವು ಕಳವು ಪ್ರಕರಣದಲ್ಲಿ ಆಗುಂಬೆ ಪೊಲೀಸರಿಗೆ ಬೇಕಾಗಿದ್ದ ಮೂವರು ಆರೋಪಿಗಳು ಆಗುಂಬೆ ಠಾಣೆ ಸರಹದ್ದಿನಲ್ಲಿ ಕಾರಿನಲ್ಲಿ ತೆರಳುತ್ತಿರುವ ಮಾಹಿತಿ ಅರಿತು ಮೊದಲು ಅಲ್ಲಿನ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಅಲ್ಲದೆ ಸಂಶಯಾಶ್ಪಸ್ಪದ ವಾಹನವನ್ನು ಹಿಂಬಾಲಿಸಿದ ಪೊಲೀಸ್​ ಸಿಬ್ಬಂದಿ, ಅದರಲ್ಲಿರುವ ಆರೋಪಿಗಳನ್ನು ಖಾತರಿ ಪಡಿಸಿಕೊಂಡು ವಾಹನವನ್ನು ಚೇಸ್ ಮಾಡಿದ್ದಾರೆ. ಪರಿಣಾಮ ಗಾಬರಿಗೊಂಡ ಆರೋಪಿಗಳು ಕಾರನ್ನು ಸ್ಪೀಡಾಗಿ ಓಡಿಸುತ್ತಾ ರಿಪ್ಪನ್‌ಪೇಟೆ ರೂಟ್​ಗೆ ಹೋಗಿದ್ದಾರೆ.

ಹೀಗಾಗಿ ಆಗುಂಬೆ ಪೊಲೀಸರು ರಿಪ್ಪನ್​ಪೇಟೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ರಿಪ್ಪನ್‌ಪೇಟೆ ಪಿಎಸ್‌ಐ ರಾಜುರೆಡ್ಡಿ ಆಂಡ್​ ಟೀಂ ಪೊಲೀಸರು ಬ್ಯಾರಿಕೆಡ್ ಅಳವಡಿಸಿ ಸಂಶಯಾಸ್ಪದ ಕಾರಿಗಾಗಿ ಕಾದಿದ್ದಾರೆ.

ಆದರೆ ಹೈ ಸ್ಪೀಡ್​ನಲ್ಲಿ ಬಂದ ಕಾರು ಪಟ್ಟಣದ ಒಳರಸ್ತೆಗಳನ್ನು ಬಳಸಿಕೊಂಡು ಶಿವಮೊಗ್ಗ ರಸ್ತೆ ತಲುಪಿ ಮುಂದೆ ಸಾಗಿದೆ. ಎಲ್ಲ ರಸ್ತೆಗಳಲ್ಲಿ ಪೊಲೀಸರು ನಾಕಾಬಂದಿ ವಿಧಿಸಿರುವುದನ್ನು ಕಂಡು ವಿಚಲಿತರಾದ ಆರೋಪಿಗಳು, ಬೆನವಳ್ಳಿ ಸಮೀಪ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ, ಅರಣ್ಯ ಪ್ರದೇಶದಲ್ಲಿ ಪರಾರಿಯಾಗಿದ್ದಾರೆ.

ಸುಮಾರು 100 ಕಿ.ಮೀ ದೂರ ಸಿನಿಮಿಯ ರೀತಿಯಲ್ಲಿ ಕ್ರಮಿಸಿದ ಕಳ್ಳರು, ಪೊಲೀಸರ ಬಲೆಗೆ ಬೀಳದೆ ತಪ್ಪಿಸಿಕೊಂಡಿದ್ದಾರೆ. ಕಾರು ವಶಕ್ಕೆ ಪಡೆದ ಆಗುಂಬೆ ಮತ್ತು ರಿಪ್ಪನ್ ಪೇಟೆ ಠಾಣೆ ಪೊಲೀಸರು, ಅರಣ್ಯ ಪ್ರದೇಶದಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor