8 ವರ್ಷದ ಹಿಂದೆ ಮಿಸ್ಸಿಂಗ್​ ಆದವ ಪತ್ತೆ, 16 ವರ್ಷದ ನಂತರ ರೌಡಿಶೀಟರ್​ ಅರೆಸ್ಟ್, ಮತ್ತು ಚಿಕ್ಕಮಗಳೂರು ಐಬಿಎಕ್ಸ್​ ಬೇಲಿ ಕರೆಂಟ್ ಕಥೆ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಮಲ್ನಾಡ್​ನಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವಿವರ ಹೀಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವ ಪತ್ತೆಯಾಗಿದ್ದಾನೆ. ಶಿವಮೊಗ್ಗ ಸಿಟಿಯಲ್ಲಿ 16 ವರ್ಷಗಳ ನಂಥರ ರೌಡಿಶೀಟರ್ ಒಬ್ಬ ಅರೆಸ್ಟ್ ಆಗಿದ್ದಾನೆ. ಅತ್ತ ಚಿಕ್ಕಮಗಳೂರಲ್ಲಿ ಐಬಿಎಕ್ಸ್​ ​ ಬೇಲಿಗೆ ದನಕರುಗಳು ಸಾವನ್ನಪ್ಪಿರುವ ವರದಿ ಬಂದಿದೆ.

ನಾಪತ್ತೆಯಾಗಿದ್ದವನ ಶವ ಪತ್ತೆ

ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಿಂದ 8 ವರ್ಷಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2018ನೇ ಸಾಲಿನಲ್ಲಿ ಶಂಕರಘಟ್ಟದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಪ್ರೊ. ಪಿಎಸ್‌ಐ ವಿನಯ್ ಮತ್ತು ಯುವರಾಜ್ ರವರು ಕಾಣೆಯಾದ ವ್ಯಕ್ತಿಯನ್ನು ಹೊಸಪೇಟೆಯಲ್ಲಿ ಪತ್ತೆ ಹಚ್ಚಿ ಕರೆತಂದು, ವಾರಸುದಾರರಿಗೆ ಒಪ್ಪಿಸಿದ್ದಾರೆ.

ತಲೆಮರೆಸಿಕೊಂಡಿದ್ದ ರೌಡಿ 16 ವರ್ಷದ ನಂತರ ಕೊನೆಗೂ ಸೆರೆ

16 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ರೌಡಿ ಶೀಟರ್‌ನನ್ನು ತುಂಗಾನಗರ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಕಲೀಂ ಬಂಧಿತ ರೌಡಿ ಶೀಟರ್. ಈತನ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಒಟ್ಟಾರೆ 6 ಪ್ರಕರಣಗಳಿದ್ವು. ಆದರೆ ಆರೋಪಿ ವಿಚಾರಣೆಗೆ ಅಂತಾ ಕೋರ್ಟ್​ ಹಾಜರಾಗೇ ಇಲ್ಲ. ಹೀಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ವಿರುದ್ಧ ಬಂಧನದ ವಾರೆಂಟ್ ಜಾರಿಮಾಡಿತ್ತು. ಈ ಹಿನ್ನೆಲೆಯಲ್ಲಿ ತುಂಗಾ ನಗರ ಠಾಣೆಯ ಪ್ರೋಸೆಸ್ ಸಿಬ್ಬಂದಿ ಕೃಷ್ಣಮೂರ್ತಿ, ಶಾಮ್ ಕುಮಾರ್, ಪ್ರಶಾಂತ್, ನಾಗಪ್ಪ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಐಬಿಎಕ್ಸ್​ಗೆ ದನಕರ ಸಾವು

ಚಿಕ್ಕಮಗಳೂರಲ್ಲಿ ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳ ಸಾವನ್ನಪ್ಪಿದೆ. ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಶೈಲಾ ಎಂಬುವರ ಜಾನುವಾರು ಮೃತಪಟ್ಟಿದ್ದು, ಈ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗಸ್ಟ್ 11ರಂದು ಬೆಳಿಗ್ಗೆ 8 ಜಾನುವಾರವನ್ನ ಮೇಯಲು ಕಾಡಿಗೆ ಬಿಟ್ಟ ಬಳಿಕ ಅವರು ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ತೆರಳಿದ್ದರು. ಗಂಟೆಗೆ ಎಂದಿನಂತೆ ಮಧ್ಯಾಹ್ನ 12.15ರ ಸುಮಾರಿಗೆ ಗ್ರಾಮದ ನಾಗರಾಜ್ ಎಂಬುವರು ಕರೆ ಮಾಡಿ, ಜಮೀನಿನ ಐಬೆಕ್ಸ್ ತಂತಿ ಬೇಲಿಗೆ ಎರಡು ಜಾನುವಾರು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ವಿದ್ಯುತ್ ಐಬೆಕ್ಸ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶೈಲಾ ಅವರು ಕೆಇಬಿ ಲೈನ್‌ ಮ್ಯಾನ್ ಸುನೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಲೈನ್‌ ಮ್ಯಾನ್ ತಂತಿ ಪರಿಶೀಲಿಸಿದಾಗ, ಬೇಲಿಗೆ ಮನೆಯ ಸಂಪರ್ಕದಿಂದ ವಿದ್ಯುತ್ ಹರಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಜಮೀನು ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor