20 ವರ್ಷಕ್ಕೆ ಡಕಾಯಿತಿ ಮಾಡಿ ಸಿಕ್ಕಿಬಿದ್ದಿದ್ದ ಆರೋಪಿ! 57 ನೇ ವರ್ಷಕ್ಕೆ ಪುನಃ ಅರೆಸ್ಟ್! ಕೋರ್ಟ್​ ರಿಪೋರ್ಟ್!

ಹಂಚಿಕೊಳ್ಳಿ
WhatsApp Facebook X Telegram
Shimoga Court
Shimoga Court

Guddakoppa Dacoity Case / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ಡಕಾಯಿತಿ ಪ್ರಕರಣದ ಪ್ರಮುಖ ಆರೋಪಿ 37 ವರ್ಷಗಳಿಂದ ತಪ್ಪಿಸಿಕೊಂಡಿದ್ದ 57 ವ್ಯಕ್ತಿಯನ್ನು ತೀರ್ಥಹಳ್ಳಿ ತಾಲ್ಲೂಕು ಮಾಳೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಮಲೆನಾಡುಟುಡೆಗೆ ಲಭ್ಯವಾಗಿದೆ. 1989ರಲ್ಲಿ ತಾಲೂಕಿನ ಮೃಗವಧೆ ಸಮೀಪದ ಗುಡ್ಡಕೊಪ್ಪದಲ್ಲಿ ಡಕಾಯಿತಿ ಪ್ರಕರಣ ನಡೆದಿತ್ತು. ಮಂಗಳೂರು ಜಿಲ್ಲೆ ಬಜ್ಜೆ ತಾಲೂಕಿನ ಪತ್ರ ಗ್ರಾಮದ ಆರೋಪಿ ತಪ್ಪಿಸಿಕೊಂಡು ಕೇರಳದ ಮಂಜೇಶ್ವರ ತಾಲೂಕಿನಲ್ಲಿ ಪಾಡಿ, ಪುರ ಸಂಗೋಡಿ, ವರ್ಕಾಡಿ ಗ್ರಾಮದಲ್ಲಿ ವಾಸವಿದ್ದ.

ಡಕಾಯಿತಿ ಪ್ರಕರಣ ನಡೆದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ಬಂಗಾರದ ಒಡವೆ ಜಪ್ತಿ ಮಾಡಿದ್ದರು. ಆ ಸಂದರ್ಭ ಆರೋಪಿ ಜೈಲು ಸೇರಿದ ನಂತರ ಜಾಮೀನು ಪಡೆದು ಹೊರಬಂದಿದ್ದ. ತದನಂತರ ಕೋರ್ಟ್​ಗೆ ಹಾಜರಾದ ಆರೋಪಿ ಕೇರಳಕ್ಕೆ ಹೋಗಿ, ಅಲ್ಲಿಯ ಮಹಿಳೆ ಜತೆ ವಿವಾಹವಾಗಿದ್ದ. ಇತ್ತ 2001 ರಲ್ಲಿಯೇ ಆರೋಪಿಯ ಬಂಧನಕ್ಕೆ ಕೋರ್ಟ್​ ವಾರಂಟ್ ಹೊರಡಿಸಿತ್ತು.

ಇದೀಗ ಪೊಲೀಸರು ಚಹರೆ, ಉದ್ಯೋಗ ಮಾಹಿತಿ ಆಧರಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ .

ಈ ಕಾರ್ಯಾಚರಣೆಯಲ್ಲಿ ಮಾಳೂರು ಠಾಣೆ ಸಿಪಿಐ ರಾಜಶೇಖರ್, ಪಿಎಸೈ ಬಿ.ಸಿ. ಸುನಿಲ್ ನೇತೃತ್ವದಲ್ಲಿ ಠಾಣೆ ಸಿಬ್ಬಂದಿ ಮೇಘರಾಜ್, ಅಭಿಲಾಷ್ ಚಹರೆ, ಉದ್ಯೋಗ ಮಾಹಿತಿ ಆಧರಿಸಿ ತೀವ್ರ ಶೋಧ – ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. .

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor