ತೀರ್ಥಹಳ್ಳಿ : ಪೋಷಕರ ಮೇಲೆ ಹಲ್ಲೆ ಮಾಡಿ ಕೂಡಿ ಹಾಕಿ ಸ್ಕೂಟರ್​ ಸುಡಲು ಯತ್ನ, 112 ಪೊಲೀಸರ ಎಂಟ್ರಿ, ಆಮೇಲೆ ಆಗಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ತೀರ್ಥಹಳ್ಳಿ : ಕೆಲವೊಮ್ಮೆ ಕೆಲವೊಂದು ಪ್ರದೇಶಗಳಲ್ಲಿ ನಡೆಯುವ ಘಟನೆಗಳನ್ನು ಊಹಿಸಿಕೊಳ್ಳಲು ಸಹ ಕಷ್ಟವಾಗುತ್ತದೆ. ಹಾಗೆಯೇ ಜಗತ್ತಲ್ಲಿ ಇಂಥವರೂ ಇರುತ್ತಾರಾ? ಎಂಬ ಪ್ರಶ್ನೆಗಳು ಸಹ ಮೂಡುತ್ತವೆ. ಅಂತಹ ಪ್ರಶ್ನೆ ಉದ್ಭವವಾಗುವುದಕ್ಕೆ ತೀರಾ ಹತ್ತಿರದಲ್ಲಿರುವ ಘಟನೆಯೊಂದು ತೀರ್ಥಹಳ್ಳಿಯ ಪ್ರದೇಶವೊಂದರಲ್ಲಿ ನಡೆದಿದ್ದು, ಮಗನ ಹಾವಳಿಯಿಂದಾಗಿ  112 ಪೊಲೀಸರು ಪೋಷಕರನ್ನು ರಕ್ಷಿಸಿದ್ದಾರೆ. 

ತೀರ್ಥಹಳ್ಳಿ ಘಟನೆ ವಿವರ

ಘಟನೆಯನ್ನು ನೋಡುವುದಾದರೆ, ತೀರ್ಥಹಳ್ಳಿಯ ಪ್ರದೇಶವೊಂದರಿಂದ 112 ಸಿಬ್ಬಂದಿಗೆ ಫೋನ್ ಕಾಲ್ ಬರುತ್ತದೆ. ಅಲ್ಲಿ ಪೋಷಕರು ಭಯದಿಂದ ನಮ್ಮ ಮಗ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ 112 ಪೊಲೀಸರು ತೆರಳಿದ್ದಾರೆ. 

ಸ್ಥಳಕ್ಕೆ ತೆರಳಿ ಮಗನ ಬಗ್ಗೆ ಪೋಷಕರೊಂದಿಗೆ ವಿಚಾರಿಸಿದ್ದಾರೆ. ವಿಚಾರಿಸಿದಾಗ ಪೋಷಕರು ನಮ್ಮ ಮಗ ನಮ್ಮ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಕೂಡಿಹಾಕಿದ್ದಾನೆ, ಹಾಗೆಯೇ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನು ಕೇಳಿದ ಕೂಡಲೇ ಮಗ ಮನೆಯ ಮುಂದಿದ್ದ ಸ್ಕೂಟರ್‌ಗೆ ಬೆಂಕಿ ಹಚ್ಚಲು ಯತ್ನಿಸಿದಾಗ 112 ಪೊಲೀಸರು ಆತನನ್ನು ತಡೆದು, ಆತನಿಂದ ಪೋಷಕರನ್ನು ರಕ್ಷಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor