ಶಿವಮೊಗ್ಗ : 49 ಸಾವಿರಕ್ಕೆ ಇಳೀತು ರಾಶಿ ಇಡಿ ರೇಟು, ಗೊರಬಲು ಕತೆ ಏನು? ಎಷ್ಟಿದೆ ಇವತ್ತು ಅಡಿಕೆ ರೇಟು?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಅಡಿಕೆ ರೇಟ್‌ನಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು, ರೇಟ್ ಹೆಚ್ಚಾಗಬಹುದು ಅಂತ ಕಾಯುತ್ತಿದ್ದ ರೈತರಿಗೆ ಸ್ವಲ್ಪ ನಿರಾಸೆಯಾಗಿದೆ. ಇದೀಗ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ರೇಟ್ ಬಿಡುಗಡೆಯಾಗಿದ್ದು, ಅದರ ಸಂಪೂರ್ಣ ವಿವರ ಹೀಗಿದೆ.

ಹೌದು, ಇಷ್ಟು ದಿನ 50, 52 ಸಾವಿರದಲ್ಲಿ ಏರಿಳಿತ ಕಾಣುತ್ತಿದ್ದ ರಾಶಿ ಇಡಿ ಅಡಿಕೆ ರೇಟು ಇದೀಗ 49 ಸಾವಿರಕ್ಕೆ ಇಳಿದಿದೆ. ಅದೇ ರೀತಿ 40, 42 ಸಾವಿರದಲ್ಲಿದ್ದ ಗೊರಬಲು ರೇಟು 38 ಸಾವಿರಕ್ಕೆ ಇಳಿದಿದ್ದು, ರೈತ ಮೂಗಿನ ಮೇಲೆ ಬೆರಳು ಇಟ್ಟುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದರೆ ಇವತ್ತು ಶಿವಮೊಗ್ಗದಲ್ಲಿ ಹಸ, ಬೆಟ್ಟೆ, ಗೊರಬಲು, ರಾಶಿ ಇಡಿ ರೇಟ್ ಎಷ್ಟಿದೆ ಅಂತ ನೋಡೋಣ ಬನ್ನಿ.

ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ರೇಟ್:

ಸರಕು/ಹಸ:| ಕನಿಷ್ಠ: ₹50,009 | ಗರಿಷ್ಠ: ₹83,099 | ಮಾದರಿ: ₹67,359

ಬೆಟ್ಟೆ:| ಕನಿಷ್ಠ: ₹47,529 | ಗರಿಷ್ಠ: ₹60,229 | ಮಾದರಿ: ₹59,859

ರಾಶಿ ಇಡಿ: | ಕನಿಷ್ಠ: ₹45,089 | ಗರಿಷ್ಠ: ₹49,989 | ಮಾದರಿ: ₹47,089

ಗೊರಬಲು: | ಕನಿಷ್ಠ: ₹19,060 | ಗರಿಷ್ಠ: ₹38,869 | ಮಾದರಿ: ₹37,219

ಹೊಸ ರಾಶಿ ಇಡಿ:| ಕನಿಷ್ಠ: ₹43,669 | ಗರಿಷ್ಠ: ₹45,098 | ಮಾದರಿ: –

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor