100 ಅಡಿ ರಸ್ತೆಯಲ್ಲಿ ಡಿಯೋ ಒಡಿಸಿಕೊಂಡು ಬಂದಾತನನ್ನ ಅಡ್ಡಹಾಕಿದ ಎಸ್​ಐ ಭಾರತಿ ಮೇಡಂ! ಬಿತ್ತು ₹25,000 ಫೈನ್

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Police Vehicle Owner Fined Rs 25,000 for Allowing Minor to Ride Scooter
Shivamogga Traffic Police Vehicle Owner Fined Rs 25,000 for Allowing Minor to Ride Scooter

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಮ್ಮೂರಲ್ಲಿ ಜನಕ್ಕೆ ಟ್ರಾಫಿಕ್ ಪೈನ್​ ಅನ್ನೋದು ಏನು ಅನಿಸುತ್ತಿದೆಯೋ ಗೊತ್ತಿಲ್ಲ. ಆದರೂ ಮಕ್ಕಳ ಕೈಗೆ ಸ್ಕೂಟಿ ಕೊಡುತ್ತಲೆ ಇದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ನಾವು ಫೈನ್ ಹಾಕ್ತಾನೆ ಇರ್ತೀವಿ ಅಂತಾನೇ ಇದ್ದಾರೆ. ಇದಕ್ಕೀಗ ಹೊಸದೊಂದು ಉದಾಹರಣೆ ಈ ಸ್ಟೋರಿ.

ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ವೆಹಿಕಲ್ ಓನರ್ ಮಹಿಳೆಗೆ ಕೋರ್ಟ್ ₹25,000 ಫೈನ್ ಹಾಗಿದೆ. ಇದಕ್ಕೂ ಮೊದಲು ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಕೇಸ್ ಆಗಿ ಕೋರ್ಟ್ಗೆ ಚಾರ್ಜ್​ಶೀಟ್ ಆಗಿತ್ತು

ಅಕ್ಟೋಬರ್ 25, 2026ರಂದಿನ ಪ್ರಕರಣವಿದು. ಅಂದು ಸಂಜೆ 7:26ರ ಸುಮಾರಿಗೆ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಸ್​ಐ ಭಾರತಿ ಬಿ.ಎಚ್. ನಿರ್ಮಲಾ ಆಸ್ಪತ್ರೆಯ ಚಾನೆಲ್ ಬಳಿಯ 100 ಅಡಿ ರಸ್ತೆಯಲ್ಲಿ ಫೈನ್ ಹಾಕುತ್ತಾ ನಿಂತಿದ್ದರು.

IMV ಕೇಸ್​ ಹಾಕುತ್ತಿದ್ದ ವೇಳೆ KA-14-H..-**** ರಿಜಿಸ್ಟ್ರೇಷನ್​ನ ಹೋಂಡಾ ಡಿಯೋ ಸ್ಕೂಟರನ್ನ ಬಾಲಕನೊಬ್ಬ ಓಡಿಸಿಕೊಂಡು ಬರುತ್ತಿರುವುದು ಕಾಣಿಸಿದೆ. ಯಥಾಪ್ರಕಾರ, ಗಾಡಿ ಅಡ್ಡಹಾಕಿ, ಆತನ ಬಳಿ ಲೈಸೆನ್ಸ್​ ಇತ್ಯಾದಿ ವಿಚಾರಿಸಲಾಗಿದೆ.

ಆ ಬಳಿಕ, ಡಿಯೋ ಓನರನ್ನ ಕರೆಸಿಕೊಂಡು ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನದ ಮಾಲೀಕರಿಗೆ ಒಟ್ಟು ₹25,000 ದಂಡ ವಿಧಿಸಿ ಆದೇಶಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor