ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಮೇಲೆ ಹಲ್ಲೆ! ಆದದ್ದೇನು!?

ಹಂಚಿಕೊಳ್ಳಿ
WhatsApp Facebook X Telegram
Jail Search Shivamogga july 02
Jail Search Shivamogga july 02

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಲ್ಲಿನ ಸೆಂಟ್ರಲ್ ಜೈಲ್​ನಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಮತ್ತೊಬ್ಬ ವಿಚಾರಣಾಧೀನ ಕೈದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಆಗಿದೆ.

ನವೆಂಬರ್ 1ರಂದು ಘಟನೆ ನಡೆದಿದೆ. ಅಂದು ಬೆಳಿಗ್ಗೆ ಸುಮಾರು 11:30ರ ವೇಳೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಕುಮದ್ವತಿ ವಿಭಾಗದ ಕೊಠಡಿ ಸಂಖ್ಯೆ 10ರಲ್ಲಿ ಘಟನೆ ನಡೆದಿದೆ. ಕಾರಾಗೃಹದಲ್ಲಿರುವ ಮೂವರು ಕೈದಿಗಳು, ವಿನಾ ಕಾರಣಕ್ಕೆ ಇನ್ನೊಬ್ಬ 21 ವರ್ಷದ ಕೈದಿ ಜೊತೆ ಕ್ಯಾತೆ ತೆಗೆದಿದ್ದಾರೆ. ಬಳಿಕ ಬೈದು ಹೊಡೆದು ಒದ್ದು ಮಾಡಿದ್ದಾರೆ. ಈ ವೇಳೆ ಜೈಲ್ ಸಿಬ್ಬಂದಿ ಗಲಾಟೆ ಬಿಡಿಸಿ, ದರ್ಶನ್​ಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ

ಇನ್ನೊಂದೆಡೆ ಹಲ್ಲೆ ನಡೆಸಿದ ಆರೋಪಿಗಳು ಘಟನೆಯ ಕುರಿತು ಯಾರಿಗಾದರೂ ಮಾಹಿತಿ ನೀಡಿದರೆ ಮತ್ತೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಅಧೀಕ್ಷಕ ಪಿ. ಮಹದೇವ ನಾಯ್ಕ ಅವರು ಸಿಬ್ಬಂದಿ ವಿಶಾಲ್ ಅರಬಳ್ಳಿ ಅವರ ಮೂಲಕ ಪೊಲೀಸರಿಗೆ ಗಣಕೀಕೃತ ದೂರು ಸಲ್ಲಿಸಿದ್ದಾರೆ.ಈ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 351(3), 352 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor