ಟ್ರಾಫಿಕ್ ದಂಡದ ಹೆಸರಿನಲ್ಲಿ ಬಂತು ಮೆಸೇಜ್! ಕ್ಲಿಕ್​ ಮಾಡಿದ ಕೆಲವೇ ಸೆಕೆಂಡ್​ಗಳಲ್ಲಿ ಅಕೌಂಟ್​ನಿಂದ ₹1.5 ಲಕ್ಷ ಮಾಯ! ಹುಷಾರ್​

ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

ಮಲೆನಾಡು ಟುಡೆ ಸುದ್ದಿ / ಟ್ರಾಫಿಕ್ ದಂಡದ ಹೆಸರಲ್ಲಿ ಮೊಬೈಲ್‌ಗೆ ಬಂದ ಸಂದೇಶದಲ್ಲಿನ ಲಿಂಕ್ ತೆರೆದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹1.5 ಲಕ್ಷ ಹಣ ವರ್ಗಾವಣೆಯಾಗಿರುವ ಸೈಬರ್ ವಂಚನೆ ಪ್ರಕರಣ ಶೃಂಗೇರಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ತಾಲ್ಲೂಕಿನ ಕೂತಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೆರೆ ನಿವಾಸಿ ಕುಮಾರಭಟ್ ಸೈಬರ್ ವಂಚನೆಗೆ ಒಳಗಾದವರು.

ಸುಮಾರು 10 ದಿನಗಳ ಹಿಂದೆ ಕುಮಾರಭಟ್ ತಮ್ಮ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ಮರಳಿದ ಕೆಲವು ದಿನಗಳ ಬಳಿಕ ಅವರ ಮೊಬೈಲ್‌ಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಸಂದೇಶ ಬಂದಿತ್ತು. ಅದರಲ್ಲಿ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ನಮೂದಿಸಿ, ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸುವಂತೆ ಸೂಚಿಸಲಾಗಿತ್ತು.

ಮೊಬೈಲ್‌ಗೆ ಬಂದ ಸಂದೇಶದ ಬಗ್ಗೆ ಅನುಮಾನಗೊಂಡ ಕುಮಾರಭಟ್, ಸಂಚಾರ ಸಾರಥಿ ಆ್ಯಪ್ ಮೂಲಕ ಪರಿಶೀಲಿಸಿದ್ದರು. ಈ ವೇಳೆ ತಮ್ಮ ವಾಹನದ ವಿರುದ್ಧ ಯಾವುದೇ ಸಂಚಾರ ನಿಯಮ ಉಲ್ಲಂಘನೆ ದಾಖಲಾಗಿಲ್ಲ ಎಂಬುದು ಖಚಿತವಾಗಿತ್ತು. ಆದರೂ ಮತ್ತೊಮ್ಮೆ ಅವರ ಮೊಬೈಲ್‌ಗೆ ದಂಡ ಪಾವತಿಸುವಂತೆ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ನಿರಂತರವಾಗಿ ಒಟಿಪಿ ಸಂದೇಶಗಳು ಬರಲಾರಂಭಿಸಿವೆ.

ಅನುಮಾನಗೊಂಡು ಮೊಬೈಲ್‌ಗೆ ಬಂದಿದ್ದ ಲಿಂಕ್ ತೆರೆದ ಕೂಡಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಸಂದೇಶ ಬಂದಿದೆ. ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ ₹1.5 ಲಕ್ಷ ಹಣ ಸಂಪೂರ್ಣವಾಗಿ ವರ್ಗಾವಣೆಯಾಗಿದೆ ಎಂದು ದೂರಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor