ಮಕ್ಕಳ ಕ್ರಿಕೆಟ್ ಆಟದ ವಿಚಾರಕ್ಕೆ ಗುಂಪು ಗಲಾಟೆ! ದೊಣ್ಣೆ, ಕಲ್ಲುಗಳಿಂದ ಹಲ್ಲೆ; ಚಾಕುವಿನಿಂದ ಇರಿದು ಕೊಲೆ ಮಾಡುವ ಬೆದರಿಕೆ ಆರೋಪ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಮಕ್ಕಳ ಕ್ರಿಕೆಟ್ ಆಟದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ, ದೊಡ್ಡವರ ನಡುವೆ ಗುಂಪು ಗಲಾಟೆಗೆ ತಿರುಗಿ, ಎರಡು ಕಡೆಯವರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಿನ್ನೆ ದಿನ ವರದಿಯಾಗಿದೆ. ಜಿಲ್ಲೆಯ ಪೊಲೀಸ್ ಸ್ಟೇಷನ್ ಒಂದರಲ್ಲಿ ಈ ಸಂಬಂಧ ಕೇಸ್ ಸಹ ದಾಖಲಾಗಿದೆ. ಗಲಾಟೆಯ ವೇಳೆ ದೊಣ್ಣೆ, ಕಲ್ಲು ಗಳಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡುವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಸಂತ್ರಸ್ತರು ಈ ಸಂಬಂಧ ಕಂಪ್ಲೆಂಟ್ ನೀಡಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಅವರ ಮಕ್ಕಳು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಕ್ಟೋಬರ್ 25ರಂದು ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಲು ಸಂತ್ರಸ್ತರು ಚಿಕ್ಕಮಗಳೂರಿಗೆ ಬಂದಿದ್ದಾಗ ಗಲಾಟೆ ನಡೆದಿದೆ.

ಪಕ್ಕದ ಮನೆಯವರು ಮಕ್ಕಳ ಕ್ರಿಕೆಟ್ ಆಟದ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಉಭಯರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ವಿವಾದ ವಿಕೋಪಕ್ಕೆ ತಿರುಗಿದ್ದು ಆರೋಪಿಗಳು ದೊಣ್ಣೆ, ಕಲ್ಲು ಮತ್ತು ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ. ಗಲಾಟೆಯನ್ನು ಬಿಡಿಸಲು ಮುಂದಾದವರ ಮೇಲೂ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಸ್ ದಾಖಲಾಗಿದಗ್ದು ತನಿಖೆ ನಡೆಯುತ್ತಿದೆ

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor