ಶಿವಮೊಗ್ಗ ಮಹಾನಗರ ಪಾಲಿಕೆ | ಅಧಿಕಾರಿಗಳಿಂದ ಚುನಾವಣಾ ಪ್ರಚಾರ! ಇದು ರಾಜಕಾರಣಿಗಳ ಕ್ಯಾಂಪೇನ್‌ ಅಲ್ಲ! ಏನಿದು ಓದಿ

Shivamogga city Corporation | Election campaign by officials! This is not a politician's campaign! Read what's

ಶಿವಮೊಗ್ಗ ಮಹಾನಗರ ಪಾಲಿಕೆ  | ಅಧಿಕಾರಿಗಳಿಂದ ಚುನಾವಣಾ ಪ್ರಚಾರ!  ಇದು ರಾಜಕಾರಣಿಗಳ ಕ್ಯಾಂಪೇನ್‌ ಅಲ್ಲ! ಏನಿದು ಓದಿ
Shivamogga city Corporation

Shivamogga  Apr 16, 2024    Shivamogga city Corporation  ಒಂದು ಕಡೆ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ರಾಜಕಾರಣಿಗಳು ತಮ್ಮ ಪರವಾಗಿ ಮತಬೇಟೆ ನಡೆಸುತ್ತಿದ್ದಾರೆ. ಇದರ ನಡುವೆ ಅಧಿಕಾರಿ ವರ್ಗ ತಮ್ಮದೇ ಆದ ಪ್ರಚಾರದಲ್ಲಿ ತೊಡಗಿದೆ. ಅತ್ತ ಜನಪ್ರತನಿಧಿಗಳು ತಮ್ಮ ಗೆಲುವಿಗಾಗಿ ಪ್ರಚಾರ ನಡೆಸ್ತಿದ್ದರೇ, ಇತ್ತು ಅಧಿಕಾರಿಗಳು ಪ್ರಜಾಪ್ರಭುತ್ವದ ಗೆಲುವಿಗಾಗಿ ಮತಪ್ರಚಾರ ನಡೆಸ್ತಿದ್ದಾರೆ. 

 

ವಿಶೇಷ ಅಂದರೆ ಹಿಂದೆಂದಿಗಿಂತಲೂ ಹೆಚ್ಚು ವಿಶೇಷವಾಗಿ ಈ ಸಲ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಜನ ಸೇರಿಸಿ ಜಾಗೃತಿ ಮೂಡಿಸುವ ಬದಲಾಗಿ, ಜನ ಸಿಗುವ ಕಡೆಯಲ್ಲಿಯೇ ತೆರಳಿ ಅವರಿ ಮತದಾನ ಮಾಡಿ ಎಂದು ತಿಳುವಳಿಕೆ ಹೇಳಲಾಗುತ್ತಿದೆ. ಇದಕ್ಕಾಗಿ ಶಿವಮೊಗ್ಗ ನಗರ ಪಾಲಿಕೆ ಸ್ವೀಪ್‌ ಸಮಿತಿ ಕುತೂಹಲಕರ ಹೆಜ್ಜೆಯನ್ನ ಇಟ್ಟಿದೆ. 

 

ಕಳೆದ ಯುಗಾದಿ ಸಂದರ್ಭದಲ್ಲಿ  ಮನೆ ಮನೆಗಳಿಗೆ ಭೇಟ್ಟಿಕೊಟ್ಟ ಸಮಿತಿ ಸದಸ್ಯರು ಮತದಾನದ ಅರಿವು ಮೂಡಿಸಿದ್ದರು,. ಆನಂತರ ರಮ್ಜಾನ್‌ ನಮಾಜ್‌ ನಡೆವ ಸ್ಥಳಗಳಿಗೆ ಭೇಟಿಕೊಟ್ಟು ಹಬ್ಬದ ಶುಭಾಶಯ ತಿಳಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಇತ್ತೀಚೆಗೆ 15/04/2024 ರಂದು ಸಂಜೆ 5 ಗಂಟೆ ಗೆ ಪಾಲಿಕೆಯ ಆವರಣದಿಂದ ಕ್ಯಾಂಡಲ್ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

 

ಮಾನ್ಯ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ಶಿವಮೊಗ್ಗ 113-ವಿಧಾನ ಸಭಾ ಕ್ಷೇತ್ರ, 14-ಲೋಕಸಭಾ ಕ್ಷೇತ್ರ ರವರು ಮತದಾನ ಜಾಗೃತಿ ಕುರಿತು ಕ್ಯಾಂಡಲ್ ಜಾಥಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮತದಾನದ  ಕುರಿತು ಅರಿವು ಮೂಡಿಸಿದರು

 

ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದ ಅಧಿಕಾರಿಗಳಾದ, ರತ್ನಾಕರ್, ರೇಣು, ಗೀತಾ ಮತ್ತು ಸಿಬ್ಬಂದಿಗಳು ಹಾಜರಿದ್ದರು, ಸದರಿ ಕ್ಯಾಂಡಲ್ ಜಾಥಾ ಗೋಪಿ ಸರ್ಕಲ್  ನೆಹರು ರಸ್ತೆ ಮಾರ್ಗವಾಗಿ ಶಿವಪ್ಪ ನಾಯಕ ಸರ್ಕಲ್ ನಲ್ಲಿ ಮುಕ್ತಾಯ ವಾಯಿತು

malenadutoday